HEALTH TIPS

ಮಂಗಳೂರಿಗೆ ದಿನದ ಪಾಸ್ ಪನರಾರಂಭ-ಕೋವಿಡ್ ಕಟ್ಟುನಿಟ್ಟು : ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚುವರಿ ಸಡಿಲಿಕೆ: ಕಂದಾಯ ಸಚಿವರ ನೇತೃತ್ವದಲ್ಲಿ ನಡೆದ ಆನ್ ಲೈನ್ ಸಭೆಯಲ್ಲಿ ನಿರ್ಧಾರ

    
             ಕಾಸರಗೋಡು: ಕೋವಿಡ್ 19 ಸೋಂಕು ಬಾಧೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದ ಕಟ್ಟುನಿಟ್ಟುಗಳಲ್ಲಿ ಹೆಚ್ಚುವರಿ ಸಡಿಲಿಕೆ ನಡೆಸಲಾಗಿದೆ. ಇದೇ ವೇಳೆ ಜಿಲ್ಲೆಯ ಕ್ಲಸ್ಟರ್ ಗಳಲ್ಲಿ ಅಂಗಡಿಗಳು ತೆರೆದು ಕಾರ್ಯಾಚರಿಸಲು ಅನುಮತಿಯಿಲ್ಲ.  
                ಸೋಮವಾರ ಈ ಸಂಬಂಧ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ವಿವಿಧ ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳ ಜತೆಗೆ ನಡೆಸಿದ ಆನ್ ಲೈನ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 
     ಇತರ ಪ್ರದೇಶಗಳ ಎಲ್ಲ ಅಂಗಡಿಗಳೂ ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆ ವರೆಗೆ ಪ್ರತಿದಿನ ತೆರೆದು ಕಾರ್ಯಾ ಚರಿಸಬಹುದಾಗಿದೆ. 
                           ಕರ್ನಾಟಕಕ್ಕೆ ತೆರಳಿ ಮರಳುವವರಿಗಾಗಿ ರೆಗ್ಯುಲರ್ ಪಾಸ್ ಪುನರರಂಭ:
           ಕರ್ನಾಟಕಕ್ಕೆ ಪ್ರತಿದಿನ ತೆರಳಿ, ಮರಳುವವರಿಗಾಗಿ ರೆಗ್ಯುಲರ್ ಪಾಸ್ ಸೌಲಭ್ಯ ಪುನರಾರಂಭಿಸಲಾಗುವುದು. ಆದರೆ 7 ದಿನಗಳ ನಂತರ ಹೀಗೆ ಪ್ರಯಾಣ ನಡೆಸುವವರು ಕೋವಿಡ್ ಆಂಟಿಜೆನ್ ಟೆಸ್ಟ್ ಗೆ ಒಳಗಾಗಬೇಕು. ವಿವಾಹ, ಮರಣ ಇತ್ಯಾದಿ ಸಂಬಂಧಿ ಸಮಾರಂಭಗಳಿಗೆ ಅಂತರ್ ರಾಜ್ಯ ಪ್ರಯಾಣ ನಡೆಸುವವರಿಗೂ ಮಂಜೂರಾತಿಯಿದೆ. ಇವರೂ ಆಂಟಿಜೆನ್ ಟೆಸ್ಟ್ ಗೆ ಒಳಗಾಗಬೇಕು. 
             ಆಹಾರ ಸಾಮಾಗ್ರಿಗಳೊಂದಿಗೆ ವಾಹನಗಳಲ್ಲಿ ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳಲು ಅಭ್ಯಂತರವಿಲ್ಲ: 
   ಆಹಾರ ಸಾಮಾಗ್ರಿಗಳೊಂದಿಗೆ ವಾಹನಗಳಲ್ಲಿ ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳಲು ಅಭ್ಯಂತರವಿಲ್ಲ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಸಭೆಯಲ್ಲಿ ತಿಳಿಸಿದರು. ವಾಹನಗಳನ್ನು ಸೂಕ್ತ ಕ್ರಮದಲ್ಲಿ ರೋಗಾಣು ನಾಶ ನಡೆಸಬೇಕು. ಯಾವೆಲ್ಲ ಅಂಗಡಿಗಳಿಗೆ ಈ ವಾಹನಗಳ ಮೂಲಕ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂಬ ಬಗ್ಗೆ ವಾಹನದಲ್ಲಿರುವ ಸಿಬ್ಬದಿ ದಾಖಲೆ ಇರಿಸಿಕೊಳ್ಳಬೇಕು. ವಾಹನದ ಚಾಲಕ, ಇತರ ಸಿಬ್ಬಂದಿ ಮಾಸ್ಕ್, ಸಾನಿಟೈಸರ್ ಬಳಸಬೇಕು. 
       ಕರ್ನಾಟಕಕ್ಕೆ ತೆರಳಿ ಮರಳಿದ ವೇಳೆ ಚಾಲಕ ಮತ್ತು ಇತರ ಸಿಬ್ಬಂದಿ 7 ದಿನ ನಂತರ ಆಂಟಿಜೆನ್ ಟೆಸ್ಟ್ ಗೆ ಒಳಪಡಬೇಕು.     
               ಅಂಗಡಿ ಮಾಲೀಕರು ಜಾಗರೂಕತೆ ಕ್ರಮ ಕೈಗೊಳ್ಳಬೇಕು:
      ಅಂಗಡಿಗಳನ್ನು ತೆರೆದು ಕಾರ್ಯಾಚರಿಸುವ ವೇಳೆ ಮಾಲೀಕರು ಹೆಚ್ಚುವರಿ ಜಾಗ್ರತೆ ಪಾಲಿಸಬೇಕು. ಸಿಬ್ಬಂದಿ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಮಾಸ್ಕ್ ಧಾರಣೆ, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿಗಳು ಕಡ್ಡಾಯ. ಅಂಗಡಿಯ ಒಳಗೆ, ಹೊರಗೆ ಜನ ಗುಂಪು ಸೇರಕೂಡದು. ಆದೇಶ ಉಲ್ಲಂಘಿಸುವ ಸಂಸ್ಥೆಗಳ ಮಾಲೀಕರ ವಿರುದ್ಧ ಅಂಗಡಿ ಮುಚ್ಚುಗಡೆ ಸಹಿತ ಕ್ರಮ ಕೈಗೊಳ್ಳಲಾಗುವುದು. ನಂತರ ಸಿಬ್ಬಂದಿಯ ಕೋವಿಡ್ ತಪಾಸಣೆ ನಡೆಸಿ , ಅಂಗಡಿಗಳಲ್ಲಿ ರೋಗಾಣುನಾಶಕ ಕ್ರಮ ಕೈಗೊಂಡು, 7 ದಿನಗಳ ನಂತರವಷ್ಟೇ ಅಂಗಡಿ ತೆರೆಯಲು ಅನುಮತಿ ನೀಡಲಾಗುವುದು ಎಂದು ಸಭೆ ತಿಳಿಸಿದೆ. 
       ಹವಾ ನಿಯಂತ್ರಣ ಯಂತ್ರ(ಎ.ಸಿ.) ಬಳಸುವ ಅಂಗಡಿಗಳಲ್ಲಿ ಮಾಲೀಕ, ಸಿಬ್ಬಂದಿಗೆ ಕೋವಿಡ್ ಖಚಿತಗೊಂಡಲ್ಲಿ ಅಂಥಾ ಅಂಗಡಿಗಳ ಎಲ್ಲ ಸಿಬ್ಬಂದಿ 14 ದಿನಗಳ ಕ್ವಾರೆಂಟೈನ್ ಪಾಲಿಸಬೇಕು. ನಂತರ ರೋಗಾಣುನಾಶಕ ಕ್ರಮ ನಡೆಸಿದ ನಂತರ ಅಂಗಡಿಯನ್ನು ಪುನರಾರಂಭಿಸುವುದಕ್ಕೆ ಅಭ್ಯಂತರವಿಲ್ಲ. ಆದರೆ ರೋಗಲಕ್ಷಣ ಹೊಂದಿರುವವರು ಅಂಗಡಿಗಳಲ್ಲಿ ಕಾಯಕ ನಿರತರಾಗಕೂಡದು. 
             ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಿ ಆಟೋರಿಕ್ಷಾ ಸೇವೆ ನಡೆಸಬಹುದು.
     ರಾಷ್ಟ್ರೀಯ ಹೆದ್ದಾರಿ ಬದಿ, ಕೆ.ಎಸ್.ಟಿ.ಪಿ. ರಸ್ತೆ ಬದಿಯ ಹೋಟೆಲ್ ಗಳು ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. ಆಹಾರ ಪೆÇಟ್ಟಣಗಳನ್ನು (ಪಾರ್ಸೆಲ್)ವಿತರಿಸಬಹುದು. ಆದರೆ ಹೋಟೆಲ್ ಗಳಲ್ಲಿ ಕುಳಿತು ಆಹಾರ ಸೇವನೆಗೆ ಅನುಮತಿಯಿಲ್ಲ ಎಂದು ತಿಳಿಸಲಾಗಿದೆ. 
         ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಸಭೆಯಲ್ಲಿ ಜಿಲ್ಲೆಯ ಸ್ಥಿತಿ-ಗತಿಗಳನ್ನು ವಿವರಿಸಿದರು. 
    ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವ್ಯಾಪಾರಿ-ವ್ಯವಸಾಯಿ ಪ್ರತಿನಿಧಿಗಳಾದ ಕೆ.ಅಹಮ್ಮದ್ ಶರೀಫ್, ರಾಘವನ್ ವೆಳುತ್ತೋಳಿ, ಹೋಟೆಲ್ ಆಂಡ್ ರೆಸ್ಟಾರೆಂಟ್ ಅಸೋಸಿಯೇಶನ್ ಪ್ರತಿನಿಧಿಗಳಾದ ನಾರಾಯಣ ಪೂಜಾರಿ, ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಶನ್ ಪ್ರತಿನಿಧಿ ಟಿ.ಪಿ.ಬಾಲನ್, ಕಿರು ಉದ್ದಿಮೆ ಅಸೋಸಿಯೇಶನ್ ಪ್ರತಿನಿಧಿ ಇಮ್ಯಾನುವೆಲ್ , ಉದ್ಯಮಿ ಎಚ್.ಗೋಕುಲ್ ದಾಸ್ ಕಾಮತ್ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries