ಕಾಸರಗೋಡು: ರಾಜ್ಯ ಸರಕಾರ ನಾಗರೀಕ ಪೂರೈಕೆ ಇಲಾಖೆ ಮೂಲಕ ವಿತರಣೆ ನಡೆಸುವ ಆಹಾರ ಧಾನ್ಯಗಳ ಉಚಿತ ಕಿಟ್ ಓಣಂ ಹಬ್ಬದ ಸಲುವಾಗಿ ಸರಬರಾಜು ಆರಂಭಗೊಂಡಿದೆ.
11 ವಿಧದ ಆಹಾರ ಧಾನ್ಯಗಳನ್ನು ಈ ಕಿಟ್ ಹೊಂದಿದೆ. ಎಲ್ಲ ವಿಭಾಗದ ಕಾರ್ಡ್ ದಾರರಿಗೂ ಈ ಕಿಟ್ ಉಚಿತವಾಗಿ ಲಭಿಸಲಿದೆ. ವಿತರಣೆಯ ನೀಲೇಶ್ವರ ನಗರಸಭೆ ಮಟ್ಟದ ಉದ್ಘಾಟನೆ ಕರುವಾಚ್ಚೇರಿ ಸಾರ್ವಜನಿಕ ಪೂರೈಕೆ ಕೇಂದ್ರದಲ್ಲಿ ನಡೆಯಿತು. ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಉದ್ಘಾಟಿಸಿದರು. ಸದಸ್ಯರಾದ ಪಿ.ಕೆ.ರತೀಶ್, ಎ.ವಿ.ಸುರೇಂದ್ರನ್, ಪಿ.ಭಾರ್ಗವಿ ಮೊದಲಾದವರು ಉಪಸ್ಥಿತರಿದ್ದರು.