ಬದಿಯಡ್ಕ: ಧಾರಾಕಾರ ಮಳೆಗೆ ಕುಂಬ್ಡಾಜೆ ಗ್ರಾಮಪಂಚಾಯಿತಿ 4ನೇ ವಾರ್ಡು ಬೆಳಿಂಜ ಪರಿಸರದ ಉಡುತ್ಯೆ ಹರೀಶ್ ಶೆಟ್ಟಿ ಎಂಬವರ ಮನೆಯ ಸಮೀಪವಿರುವ ಗುಡ್ಡ ಕುಸಿತವುಂಟಾಗಿದ್ದು, ಮನೆಯ ಸಮೀಪದ ತನಕ ಮಣ್ಣು ಬಿದ್ದಿದೆ. ಭೀಕರವಾದ ಮಳೆಯಿಂದ ಗುಡ್ಡವು ಇನ್ನೂ ಜರಿಯುತ್ತಿದ್ದು ಅಪಾಯದ ಮುನ್ಸೂಚನೆಯನ್ನು ನೀಡಿದೆ.
ಭಾರತೀಯ ಯುವಮೋರ್ಚಾ ಬೆಳಿಂಜ ಘಟಕದ ಅಧ್ಯಕ್ಷರೂ ಆಗಿರುವ ಹರೀಶ್ ಶೆಟ್ಟಿಯವರ ಮನಬೆ ಪರಿಸರದಲ್ಲಿ ಉಂಟಾದ ದುರ್ಘಟನೆಗೆ ಸಂಬಂಧಿಸಿ ವಿಷಯ ತಿಳಿಯುತ್ತಿದ್ದಂತೆ ಧಾವಿಸಿ ಬಂದ ಕಾರ್ಯಕರ್ತರು ಮನೆಗೆ ಹೆಚ್ಚಿನ ಅಪಾಯಗಳಾಗದಂತೆ ಮಣ್ಣುಗಳನ್ನು ವಿಲೇವಾರಿಗೊಳಿಸಿ ವ್ಯವಸ್ಥೆ ಕಲ್ಪಿಸಿ ಮಾದರಿಯಾದರು.