ತಿರುವನಂತಪುರ: ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಕೇರಳ ಎದುರಿಸುತ್ತಿರುವ ಭೂಕುಸಿತ ಪ್ರಮುಖ ಸಮಸ್ಯೆಯಾಗಿದೆ. ಈ ವಿದ್ಯಮಾನವು ಭಾರೀ ಮಳೆಯಿಂದ ಉಂಟಾಗುತ್ತದೆ. ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಈ ಭೂಕುಸಿತಕ್ಕೆ ಸಣ್ಣ ಭೂಕಂಪಗಳು ಕಾರಣವಾಗುತ್ತಿದೆಯೇ ಎಂದು ತನಿಖೆ ನಡೆಸಲು ಭೂವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ. ಇಡುಕ್ಕಿ ರಾಜಮಲೈನ ಪೆಟ್ಟಿಮುಡಿಯಲ್ಲಿ ಭೂಕುಸಿತ ಸಂಭವಿಸಿದ ದಿನ, ಹೆಡ್ವಕ್ರ್ಸ್ ರಸ್ತೆ ಮತ್ತು ಮೂನಾರ್ ನ ನೀಲಕ್ಕಲ್-ಪಂಪಾ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಉಲ್ಲೇಖಾರ್ಹವಾಗಿದೆ.
ಸಣ್ಣ ಚಲನೆಗಳಿಗೆ ಸಾಧ್ಯತೆ:
ಭೂಕಂಪಗಳೆಂದು ಸ್ಪಷ್ಟವಾಗಿ ಗುರುತಿಸಲು ಅಸಾಧ್ಯವಾಗುವ ಮಟ್ಟದಲ್ಲಿ ಅತೀ ಚಿಕ್ಕ ಕಂಪನಗಳು ಪಶ್ಚಿಮ ಘಟ್ಟದಲ್ಲಿ ಬಿರುಸಿನ ಮಳೆಯ ಸಂದರ್ಭ ಕಂಡುಬರುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಭೂಮಿಶಾಸ್ತ್ರ ಅಧ್ಯಯನ ಕೇಂದ್ರದ ಮಾಜಿ ಭೂ ವಿಜ್ಞಾನಿ ಡಾ.ಕೆ.ಸೋಮನ್ ತಿಳಿಸಿದ್ದಾರೆ. ಪೆಟ್ಟಿಮುಡಿಯಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಮಳೆನೀರಿನ ಹೊರತಾಗಿ ಮತ್ತೊಂದು ಶಕ್ತಿ ಭೂಕುಸಿತದ ಹಿಂದೆ ಕಾರ್ಯನಿರ್ವಹಿಸಿರಬಹುದು ಎಂದೂ ಅವರು ಹೇಳುತ್ತಾರೆ.
ಬಾವಿಗಳಲ್ಲಿ ಕುಸಿತ:
ಮಳೆಗಾಲದಲ್ಲಿ ಕೇರಳದ ಅನೇಕ ಭಾಗಗಳಲ್ಲಿ ಬಾವಿ ಕುಸಿತ ಮತ್ತು ಬಿರುಕುಗಳು ಕಂಡುಬರುತ್ತಿದ್ದು ಇದು ಭೂಮಿಯ ಒಳಭಾಗದಲ್ಲಿ ಒತ್ತಡದ ಸೂಚನೆಯಾಗಿದೆ. ಇಂತವುಗಳು ಕೆಲವೇ ಕೆಲವು ನಿಶ್ಚಿತ ಪ್ರದೇಶಗಳಲ್ಲಿ ಕಂಡುಬರುತ್ತಿದೆ ಎಂದು ಭೂವಿಜ್ಞಾನಿಗಳು ಹೇಳುತ್ತಾರೆ. ಮೂರು ವರ್ಷಗಳಿಂದ ಕಂಡುಬರುವ ಪಶ್ಚಿಮ ಘಟ್ಟದ ಎತ್ತರದ ಪ್ರದೇಶಗಳು, ಭಾರೀ ಮಳೆಯಿಂದಾಗಿ ಸಣ್ಣ ಚಲನೆಯನ್ನು ಉಂಟುಮಾಡುವ ಪ್ರವೃತ್ತಿಯನ್ನು ಅಧ್ಯಯನ ಮಾಡಬೇಕಾಗುತ್ತದೆ ಎಂದಿರುವರು.
ಸಣ್ಣ ಕುಳಿಗಳು ಹೇಗೆ ಉಂಟಾದವು?
ಮಳೆಯ ಅಬ್ಬರಕ್ಕೆ ಇಡುಕ್ಕಿಯ ಎರಾಟ್ಟುಪೇಟ ಮತ್ತು ಮಾರಮೊನ್‍ನ ಕೆಲವು ಬಾವಿಗಳು ಕುಸಿದಿವೆ. ತ್ರಿಶೂರ್ ಮತ್ತು ಇಡುಕ್ಕಿಯಲ್ಲಿ ಸಣ್ಣ ಕುಳಿಗಳು ಕಂಡುಬಂದಿವೆ. ಹ್ಯಾಮ್ ರೇಡಿಯೊ ಆಪರೇಟರ್‍ಗಳು ಸಹ ಭೂಕಂಪಗಳು ಹೊರಬರುತ್ತಿವೆ ಎಂದು ಶಂಕಿಸಿದ್ದಾರೆ. ಸುಮಾರು 60 ಮೀಟರ್ ದೂರದಲ್ಲಿರುವ ಚಲಕಾಯ ಪ್ಲಾಂಟೇಶನ್‍ನಲ್ಲಿ ಮುಕ್ಕಾಲು ಭಾಗ ರಸ್ತೆ ಕುಸಿದಿದೆ. ಇದು ರಸ್ತೆಗೆ ಅಡ್ಡಲಾಗಿ ಸುಮಾರು ಒಂದೂವರೆ ಅಡಿಗಳಷ್ಟು ಕುಸಿದಿದೆ.
ಇವೆಲ್ಲ ಲಕ್ಷಣಗಳ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಉಂಟಾಗುತ್ತಿರುವ ಭೂಕುಸಿತ ಕೇವಲ ಮಳೆಯಿಂದಾಗಿರದೆ ಮಳೆಗಾಲದಲ್ಲಿ ಭೂಮಿಯ ಪುಟ್ಟ ಚಲನೆಯಿಂದಾಗುವ ಕಂಪನಗಳಿಂದ ಆಗಿರಬೇಕೆಂದು ಸಂಶೋಧಕರು ಇದೀಗ ಅಧ್ಯಯನಕ್ಕೆ ತೊಡಗಿದ್ದು ಮಾನವನ ಅತಿಮೀರಿದ ವ್ಯಾಪಾರೀಕರಣದ ದುಷ್ಪರಿಣಾಮಗಳು ಇದೀಗ ಮುಳುವಾಗುತ್ತಿದೆಯೇ ಸಂಶಯ ಮೂಡತೊಡಗಿದೆ.