ಮಂಜೇಶ್ವರ: ಕೊರೊನ ಮಹಾಮಾರಿ ಯಿಂದಾಗಿ ಸಂಕಷ್ಟಕ್ಕೀಡಾದ ಪತ್ರಕರ್ತ ಮಿತ್ರರಿಗೆ ಮಂಜೇಶ್ವರ ಪ್ರೆಸ್ ಕ್ಲಬ್ ಒಂದು ತಿಂಗಳಿಗಿರುವ ಆವಶ್ಯಕ ಸಾಮಾಗ್ರಿಗಳ ರೇಶನ್ ಕಿಟ್ ಸೌದಿ ಅರೇಬಿಯಾ ಯುನಿವರ್ಸಲ್ ಗ್ರೂಪ್ ಹಾಗೂ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಕಾರದೊಂದಿಗೆ ಬುಧವಾರ ವಿತರಿಸಲಾಯಿತು.
ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಹೊಸಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂ. ಸದಸ್ಯ ಕೆ ಆರ್ ಜಯಾನಂದ ಪತ್ರಕರ್ತರಿಗೆ ಕಿಟ್ ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ಮುಖ್ಯ ಅತಿಥಿಯಾಗಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ, ಪತ್ರಕರ್ತರಾದ ಸಲಾಂ ವರ್ಕಾಡಿ, ಸಾಯಿಭದ್ರಾ ರೈ, ಸ್ಟೀಫನ್ ಕಯ್ಯಾರ್ ಮೊದಲಾದವರು ಉಪಸ್ಥಿತರಿದ್ದರು.