ಬದಿಯಡ್ಕ: ನೀರ್ಚಾಲು ಸಮೀಪದ ಕನ್ನೆಪ್ಪಾಡಿಯಲ್ಲಿರುವ ಆಶ್ರಯ ವೃದ್ದಾಶ್ರಮಕ್ಕೆ ಮಾನ್ಯದ ಫ್ರೆಂಡ್ಸ್ ಮಾನ್ಯ ಸೋಶಿಯಲ್ ಕಲ್ಚರಲ್ ತಂಡದವರು ಓಣಂ ಉತ್ಸವದ ಅಂಗವಾಗಿ ಓಣಂ ಔತಣ ಕೂಟ(ಸದ್ಯಂ)ನ್ನು ನಿನ್ನೆ ಸಂಘಟಿಸಿತು. ಜೊತೆಗೆ ಧಮಸ ಧಾನ್ಯಗಳು, ಹಣ್ಣುಗಳನ್ನು, ಬಟ್ಟೆಬರೆಗಳನ್ನು ವಿತರಿಸಿದರು. ಫ್ರೆಂಡ್ಸ್ ಮಾನ್ಯದ ಕಾರ್ಯಕರ್ತರು, ಆಶ್ರಮದ ಪದಾಧಿಕಾರಿಗಳು ಉಪಸ್ಥಿತರಿದ್ದರು.