ಕಾಸರಗೋಡು: ಬೋಟುಗಳಲ್ಲಿ ಮೀನುಗಾರಿಕೆಗೆ ತೆರಳುವವರು ದಿನ ನಿಟ್ಟು ದಿನ ಮೀನು ಹಿಡಿಯುವ ಕಾಯಕಕ್ಕೆ ತೆರಳಬೇಕು.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಮೀನುಗಾರಿಕೆ, ಮಾರಾಟ ಸಂಬಂಧ ಈ ವಲಯದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ನೋಂದಣಿ ನಂಬ್ರ ಸಮಸಂಖ್ಯೆಯಲ್ಲಿ ಕೊನೆಗೊಳ್ಳುವ ಬೋಟುಗಳು ಸೋಮ, ಬುಧ, ಶುಕ್ರವಾರ ಗಳಂದು, ನೋಂದಣಿ ನಂಬ್ರ ವಿಷಮ ಸಂಖ್ಯೆಯಲ್ಲಿ ಕೊನೆಗೊಳ್ಳುವ ಬೋಟುಗಳು ಮಂಗಳ, ಗುರು, ಶನಿವಾರಗಳಂದು ಮೀನುಗಾರಿಕೆ ನಡೆಸಬಹುದು. ಶುಕ್ರವಾರ ರಜಾ ಇರುವ ಪ್ರದೇಶಗಳಲ್ಲಿ ಸಮಸಂಖ್ಯೆಯಲ್ಲಿ ಕೊನೆಗೊಳ್ಳುವ ನೋಂದಣಿ ನಂಬ್ರಗಳ ಬೋಟುಗಳು ಭಾನುವಾರ ಮೀನುಗಾರಿಕೆ ನಡೆಸಬಹುದು.
ಇತರ ರಾಜ್ಯಗಳ ಬೋಟುಗಳು ರಾಜ್ಯದ ಸಮುದ್ರತೀರದಲ್ಲಿ ಮೀನುಗಾರಿಕೆ ನಡೆಸುವುದು, ರಾಜ್ಯದ ಗಡಿಗಳ ಹಾರ್ಬರ್ ನ ಫಿಶ್ ಲ್ಯಾಂಡಿಂಗ್ ಸೆಂಟರ್ ಗಳಿಗೆ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ಹಾರ್ಬರ್ ಮೀನುಗಾರಿಕೆ, ಮಾರಾಟಗಳನ್ನು ಹಾರ್ಬರ್ ಮೆನೆಜ್ ಮೆಂಟ್ ಸೊಸೈಟಿ, ಫಿಶ್ ಲ್ಯಾಂಡಿಂಗ್ ಸೆಂಟರ್ ಗಳ ಮೀನು ದಡಸೇರಿಸುವ ಕಾಯಕ ಕೇಂದ್ರಗಳ ಮೀನುಗಾರಿಕೆ, ಮಾರಾಟ ಚಟುವಟಿಕೆಗಳು ಜನಪರ ಸಮಿತಿಗಳ ನೇತೃತ್ವದಲ್ಲಿ ನಡೆಯಬೇಕು.
ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಇತರ ರಾಜ್ಯಗಳ ಕಾರ್ಮಿಕರನ್ನು ಕೋವಿಡ್ ತಪಾಸಣೆಗೊಳಪಡಿಸಿ ನೆಗೆಟಿವ್ ಸರ್ಟಿಫಿಕೆಟ್ ನ್ನು ಆಯಾ ಬೋಟುಗಳ ಮಾಲೀಕರು ಹಾರ್ಬರ್ ಮೆನೆಜ್ ಮೆಂಟ್ ಸೊಸೈಟಿ, ಜನಪರ ಸಮಿತಿಗಳಿಗೆ ಹಾಜರುಪಡಿಸಬೇಕು.
ಹರಾಜು ನಡೆಸುವಂತಿಲ್ಲ:
ಮೀನು ಹರಾಜು ಪೂರ್ಣರೂಪದಲ್ಲಿ ನಿಷೇಧಿಸಲಾಗಿದೆ. ಮೀನುಗಾರರು ಸಮುದ್ರದಲ್ಲಿ ಹಿಡಿದುತರುವ ಮೀನನ್ನು ಹಾರ್ಬರ್ ಮೆನೆಜ್ ಮೆಂಟ್ ಸಮಿತಿ, ಜನಪರ ಸಮಿತಿಗಳು ನಿಗದಿ ಪಡಿಸುವ ಬೆಲೆಗೆ ಮಾತ್ರ ಮಾರಾಟ ನಡೆಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಹರಾಜು ಇಲ್ಲದೆ, ಮೀನು ಮಾರಾಟದ ಹೊಣೆ ಪೆÇಲೀಸ್, ಕಂದಾಯ, ಮೀನುಗಾರಕೆ, ಮತ್ಸ್ಯ ಫೆಡ್, ಎಚ್.ಇ.ಡಿ. ಗಳಿಗಿರುವುದು.
ಕಂಟೈ ನ್ಮೆಂಟ್ ಝೋನ್ಗಳಲ್ಲಿ ಹಾದಿಬದಿ, ಮನೆಮನೆಗಳಿಗೆ ತೆರಳಿ ಮೀನು ಮಾರಾಟ ಪೂರ್ಣರೂಪದಲ್ಲಿ ನಿಷೇಧಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪಿ.ವಿ.ಸತೀಶನ್, ಮತ್ಸ್ಯ ಫೆಡ್ ಜಿಲ್ಲಾ ಪ್ರಬಂಧಕ ಕೆ.ಎಚ್.ಶರೀಫ್, ಎಚ್.ಇ.ಡಿ. ಕಾರ್ಯಕಾರಿ ಇಂಜಿನಿಯರ್ ಅಶ್ರಫ್, ಬೋಟು ಮಾಲೀಕರ ಪ್ರತಿನಿಧಿಗಳು, ಇಂಡೋರ್ ಕಿರುದೋಣಿ ಪ್ರತಿನಿಧಿಗಳು, ಪರಂಪರಾಗತ ಮೀನುಗಾರಿಕೆ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.