HEALTH TIPS

ಬೇಕಲ ಕೋಟೆ : ವಿವಿಧ ಘಟಕಗಳ ಆರಂಭಕ್ಕೆ ಟೆಂಡರ್ ಕೋರಿಕೆ

  

     ಕಾಸರಗೋಡು ಬೇಕಲ ಕೋಟೆಗೆ ಆಗಮಿಸುವ ಪ್ರವಾಸಿಗರ ಸೌಕರ್ಯಕ್ಕಾಗಿ ಬಿ.ಆರ್.ಡಿ.ಸಿ. ನೂತನ ಘಟಕಗಳ ಆರಂಭಕ್ಕೆ ಟೆಂಡರ್ ಕೋರಿದೆ. 

          ಇಲ್ಲಿನ ತಣಲ್ ವಿಶ್ರಾಂತಿ ಕೇಂದ್ರವನ್ನು ಲೀಸ್ ಗೆ ನೀಡಲಾಗುತ್ತಿದೆ. 7 ವರ್ಷದ ಅವಧಿಗೆ ಈ ಕರಾರು ಇರುವುದು. ಈ ಸಂಬಂಧ ಟೆಂಡರ್ ಸೆ.7 ವರೆಗೆ ಸಲ್ಲಿಸಬಹುದು. ಸೆ.8ರಂದು ಟೆಂಡರ್ ತೆರೆಯಲಾಗುವುದು. ವಿದೇಶಗಳಿಂದ ಮರಳಿರುವ ಆನಿವಾಸಿ ಕೇರಳೀಯರು ಈ ಸಂಬಂಧ ಭಾಗವಹಿಸಬಹುದು. 

       ಪ್ರವಾಸಿಗರಿಗಾಗಿ ಕಾಫಿ ಶಾಪ್ ಒಂದು "ಕಫೆ ಡೇ ಬೇಕಲ್" ಎಂಬ ಹೆಸಸರಿನಲ್ಲಿ ಆರಂಭಗೊಳ್ಳಳಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. 8 ವರ್ಷಕ್ಕೆ ಈ ಸಂಸ್ಥೆಯ ಲೀಸ್ ಅವಧಿ ಇರುವುದು. ಸೆ.12 ವರೆಗೆ ಟೆಂಡರ್ ಸಲ್ಲಿಸಬಹುದು. 

      ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಬೇಕಲ ಕೋಟೆಯಲ್ಲಿ ಜಾರಿಗೊಳಿಸಲಾಗಿರುವ ನಿಯಂತ್ರಣಗಳನ್ನು ತೆರವುಗೊಳಿಸಿದ ತಕ್ಷಣ "ಲೈಟ್ ಆಂಡ್ ಶೋ" ನ ಆರಂಭ ಪ್ರಕ್ರಿಯೆ ನಡೆಯಲಿದೆ ಎಂದು ಬಿ.ಆರ್.ಡಿ.ಸಿ. ಆಡಳಿತ ನಿರ್ದೇಶಕರೂ ಆಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. 

      ಬೇಕಲಕೋಟೆಯ ಪಾಕಿರ್ಂಗ್ ಬೇ ಎದುರುಬದಿಯ ಅಂಗಡಿಗಳಲ್ಲಿ ಕೋಟೆಯ ಮಿನಿಯೇಚರ್ ಗಳ ಮಾರಾಟ ಆರಂಭಿಸಲಾಗುವುದು. ಈಗಾಗಲೇ ಅಂಗಡಿ ನಡೆಸುತ್ತಿರುವ ಮಂದಿಗೆ ಆದ್ಯತೆ ನೀಡುವ ಮೂಲಕ ಈ ಯೋಜನೆ ಜಾರಿಗೊಳ್ಳಲಿದೆ. ಹೊಸ ಅಂಗಡಿಗಳ ಆರಂಭವಿಲ್ಲ. ಮಾಹಿತಿಗಾಗಿ ವೆಬ್ಸೈಟ್ : www.bekaltourism.com.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries