ಕಾಸರಗೋಡು: ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿಗಿ ಕಟ್ಟುನಿಟ್ಟು ಏರ್ಪಡಿಸಲಾಗಿದೆ ಎಂದು ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಪ್ರಕಾಶ್ ಕೆ.ವಿ.ತಿಳಿಸಿರುವರು. ಆಸ್ಪತ್ರೆಗೆ ಆಗಮಿಸುವವರು ಕಡ್ಡಾಯವಾಗಿ ಕಟ್ಟುನಿಟ್ಟುಗಳನ್ನು ಪಾಲಿಸಬೇಕು ಎಂದವರು ನಿರ್ದೇಶನವನ್ನೂ ನೀಡಿರುವರು.
ಆಸ್ಪತ್ರೆಯ ಸರ್ಜಿಕಲ್ ವಾರ್ಡ್ ಜು.17 ಮತ್ತು 25ರಂದು, ಐ.ಸಿ.ಯು.ನಲ್ಲಿ ಜು.25ರಂದು, ಹೆರಿಗೆ ವಾರ್ಡ್ ನಲ್ಲಿ ಆ.4ರಂದು, ಮೆಡಿಕಲ್ ವಾರ್ಡ್ ನಲ್ಲಿ ಆ.6ರಂದು ದಾಖಲಾಗಿದ್ದ ರೋಗಿಗಳಿಗೆ ಕೋವಿಡ್ 19 ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಬಿಗಿ ಕಟ್ಟುನಿಟ್ಟು ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿರುವರು.
ಆಸ್ಪತ್ರೆ ಬಳಕೆ ನಿಯಂತ್ರಣದಲ್ಲಿರಲಿ-ಸಾರ್ವಜನಿಕರ ಗಮನಕ್ಕೆ:
ತೀವ್ರ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯನ್ನು ಆಶ್ರಯಿಸಬೇಕು. ಅನಾವಶ್ಯಕ ಭೇಟಿ ಬೇಡ. ಆಸ್ಪತ್ರೆಗೆ ಆಗಮಿಸುವ ಎಲ್ಲರೂ ಬಾಯಿ, ಮೂಗು ಸರಿಯಾಗಿ ಮುಚ್ಚಿಕೊಳ್ಳುವ ಮಾಸ್ಕ್ ಧರಿಸಬೇಕು. 2 ಮೀಟರ್ ಸಾಮಾಜಿಕ ಅಂತರ ಕಾಯ್ದಕೊಳ್ಳಬೇಕು. ಆಗಾಗ ಸಾಬೂನು ಬಳಸಿ ಕೈತೊಳೆಯಬೇಕು ಯಾ ಸಾನಿಟೈಸರ್ ನಿಂದ ಶುಚಿಪಡಿಸಿಕೊಳ್ಳುತ್ತಿರಬೇಕು. ದಾಖಲಾದ ರೋಗಿಯ ಜೊತೆಗೆ ಕೇವಲ ಒಬ್ಬರು ಮಾತ್ರ ಪರಿಚರಣೆಗೆ ಇರಬೇಕು. ಪರ್ಯಾಯ ವ್ಯವಸ್ಥೆಯಲ್ಲಿ ಪರಿಚರಣೆಗೆ ಜನ ಬರಕೂಡದು. ತಿರ್ತು ಘಟಕಗಳಿಗೆ ಕರೆತರುವ ರೋಗಿಯ ಜೊತೆಗೂ ಕನಿಷ್ಠ ಮಂದಿಗೆ ಮಾತ್ರ ಆಸ್ಪತ್ರೆಗೆ ಪ್ರವೇಶಾತಿ ಇರುವುದು.