ಕುಂಬಳೆ: ಚಿನ್ನ ಹೂಡಿಕೆದಾರರನ್ನು ವಂಚಿಸಿದ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕುಂಬಳೆ ಪೇಟೆಯಲ್ಲಿ ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಕುಂಬಳೆ ಘಟಕಾಧ್ಯಕ್ಷ ಕೆ.ಸುಧಾಕರ ಕಾಮತ್ ವಹಿಸಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಡಲ ಕಾರ್ಯದರ್ಶಿ ರಮೇಶ್ ಭಟ್, ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬ್ಳೆ, ಪಂಚಾಯತಿ ಸದಸ್ಯ ಪುಷ್ಪಲತ, ಯುವಮೋರ್ಚಾ ಕುಂಬಳೆ ಸಮಿತಿ ಅಧ್ಯಕ್ಷ ಪ್ರದೂಷ್, ಕಾರ್ಯಕರ್ತರಾದ ನವೀನ, ಕೌಶಿಕ, ಅಜಿತ, ಹರಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾಯ್ಕಾಪು ಸ್ವಾಗತಿಸಿ, ಸುರೇಶ ಶಾಂತಿಪಳ್ಳ ವಂದಿಸಿದರು.