ಕಾಸರಗೋಡು: ಕಾಸರಗೋಡು, ಮಂಜೇಶ್ವರ ತಾಲೂಕಿನ ಜನತೆ ತನ್ನ ದೈನಂದಿನ ವೃತ್ತಿ ವ್ಯವಹಾರ ಚಿಕಿತ್ಸೆ ಆರೋಗ್ಯ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಉಡುಪಿ ಕೊಡಗು ಜಿಲ್ಲೆಗಳನ್ನು ಜೀವನಕ್ಕಾಗಿ ಆಶ್ರಯಿಸಿಕೊಂಡುಬಂದಿರುವಾಗ ಅಂತರ್ ರಾಜ್ಯ ಪ್ರಯಾಣಕೆ ನಿಬರ್ಂಧ ಹೇರಿ ಕಾಸರಗೋಡು ಜಿಲ್ಲಾಡಲಿತೆ ಹಿಂಸಿಸುತ್ತಿದ್ದಾರೆ ಎಂದು ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ವಿ ಬಾಲಕೃಷ್ಣ ಶೆಟ್ಟಿ ಅಭಿಪ್ರಾಯ ಪಟ್ಟರು .
ಕೇರಳವನ್ನು ಅದಲುಬದಲಾಗಿ ಆಡಳಿತ ಮಾಡಿದ ಯುಡಿಎಫ್ ಎಲ್ಡಿಎಫ್ ಸರಕಾರ ಗಳು ಕಾಸರಗೋಡು ಜಿಲ್ಲೆಯ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳದೆ ಆಸ್ಪತ್ರೆ ವಿದ್ಯಾಲಯ ಉದ್ಯೋಗಕ್ಕಾಗಿ ಕೈಗಾರಿಕಾ ಸೌಲಭ್ಯಗಳು ವ್ಯಾಪಾರ ವಲಯಗಳನ್ನು ಸೃಷ್ಟಿಮಾಡದೆ ಕಾಸರಗೋಡು ಜಿಲ್ಲೆಯ ಜನತೆ ಕರ್ನಾಟಕದ ದಕ್ಷಿಣ ಕನ್ನಡ ಮಂಗಳೂರು ಉಡುಪಿ ಕೊಡಗು ಜಿಲ್ಲೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದು ಬೊಟ್ಟುಮಾಡಿದ ಶೆಟ್ಟಿಯವರು ನಿತ್ಯ ಉದ್ಯೋಗಕ್ಕಾಗಿ ವ್ಯವಹಾರ ಚಿಕಿತ್ಸೆಗಾಗಿ ಮಂಗಳೂರು ಇನ್ನಿತರ ಜಿಲ್ಲೆಗಳಿಗೆ ಪ್ರಯಾಣಿಸುವವರಿಗೆ ಪಾಸುಗಳನ್ನು ನಿಷೇಧಿಸಿ ಜನವಿರೋಧಿ ನೀತಿಗಳನ್ನು ಅನುಸರಿಸಲು ಈ ಜಿಲ್ಲೆಯ ಉಸ್ತುವಾರಿ ಸಚಿವರಾದ
ಕಂದಾಯ ಸಚಿವ ಈ ಚಂದ್ರಶೇಖರನ್ ನಾಯರ್ ಹೊಣೆಯಾಗಿರುವರು. ಕಾಸರಗೋಡು- ಮಂಜೇಶ್ವರ ತಾಲೂಕುಗಳಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಪ್ರಾಬಲ್ಯ ಇಲ್ಲದಿರುವುದು ಬಿಜೆಪಿಯ ಬೆಳವಣಿಗೆಯನ್ನು ಸಹಿಸಲು ಅಸಾಧ್ಯವಾದ ಸಿಪಿಐ ನೇತಾರ ಜಿಲ್ಲಾ ಉಸ್ತುವಾರಿ ಸಚಿವ ಇಂಥ ತುಘಲಕ್ ನೀತಿಯನ್ನು ಅನುಸರಿಸುತ್ತಿದ್ದಾರೆ ಕೋವಿಡ್ 19 ಅನ್ಲಾಕ್ 2 ಹಾಗೂ ಅನ್ಲಾಕ್ 3 ರ ಕೇಂದ್ರ ಸರಕಾರ ಹಾಗೂ ಐಸಿಎಂಆರ್ ನಿರ್ದೇಶನ ಪ್ರಕಾರ ಯಾವುದೇ ಅಂತರರಾಜ್ಯ ಗಡಿಗಳನ್ನು ಮುಚ್ಚಬಾರದು ಹಾಗೂ ಯಾವುದೇ ರೀತಿಯ ತಡೆಗಳನ್ನು ಒಡ್ಡಬಾರದು ಎಂಬುದಾಗಿ ನಿರ್ದೇಶನ ವಿದ್ದರೂ ಈ ಎಲ್ಲಾ ನಿರ್ದೇಶನಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಜಿಲ್ಲೆಯವರೇ ಆಗಿರುವ ಮಂತ್ರಿ ಈ ಚಂದ್ರಶೇಖರನ್ ಕೈಗೊಂಬೆಯಂತೆ ಜಿಲ್ಲಾಧಿಕಾರಿ ಸಜಿತ್ ಬಾಬುರವರು ವರ್ತಿಸುತ್ತಿದ್ದಾರೆಂದು ಬಿಜೆಪಿ ನೇತಾರ ಶ್ರೀ ಬಾಲಕೃಷ್ಣ ಶೆಟ್ಟಿ ಅವರು ಆರೋಪಿಸಿದರು.
ಇತ್ತೀಚೆಗೆ ಕಾಸರಗೋಡು ಜಿಲ್ಲಾ ಕಲೆಕ್ಟ್ ರೇಟಿನಲ್ಲಿ ಉಸ್ತುವಾರಿ ಸಚಿವ ಚಂದ್ರಶೇಖರನ್ ಅವರ ನೇತೃತ್ವದಲ್ಲಿ ಜರಗಿದ ಕೋವಿಡ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಸಮಿತಿಯ ಸಭೆಯಲ್ಲಿ ಮಂತ್ರಿಯವರು ಕೇರಳದಲ್ಲಿ ಕೊರೋನ ಅತ್ಯಂತ ರಬಸದಲ್ಲಿ ವ್ಯಾಪಿಸುತ್ತಿದೆ ಆದುದರಿಂದ ಜಿಲ್ಲೆಯ ಅಂತರ್ ರಾಜ್ಯದ ಎಲ್ಲಾ ಗಡಿಗಳನ್ನು ಮುಚ್ಚುವುದಾಗಿ ನೀಡಿದ ಸಲಹೆಯ ಪರಿಣಾಮವಾಗಿ ಇಂದು ಕಾಸರಗೋಡು ಮಂಜೇಶ್ವರದ ಜನತೆ ಈ ಸಂಕಷ್ಟವನ್ನು ಅನುಭವಿಸಬೇಕಾಗಿ ಬಂದಿದೆ. ರಾಜ್ಯದ ಯಾವುದೇ ಅಂತರರಾಜ್ಯ ಗಡಿಗಳಲ್ಲಿ ಇಲ್ಲದ ಕಾನೂನು ಗಳನ್ನು ಕಾಸರಗೋಡು ಜಿಲ್ಲೆಯ ಅಂತರ್ ರಾಜ್ಯ ಗಡಿಗಳಲ್ಲಿ ಜಾರಿಗೊಳಿಸಲು ಕಂದಾಯ ಸಚಿವ ಚಂದ್ರಶೇಖರ್ ನಾಯರ್ ಅವರೇ ಕಾರಣ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಶ್ರೀ ಕೆ ಶ್ರೀಕಾಂತ್ ಅವರು ನೇತೃತ್ವ ವಹಿಸಿ ಅಭಿಪ್ರಾಯಪಟ್ಟರು.
ಪ್ರಯಾಣ ನಿಷೇಧವನ್ನು ತೆಗೆದುಹಾಕದಿದ್ದರೆ ಬಿಜೆಪಿ ಕಾಸರಗೋಡಿನ ಜನತೆಯೊಂದಿಗೆ ಹೋರಾಟಕ್ಕೆ ನೇತೃತ್ವವನ್ನು ಕೊಡುವುದಾಗಿ ಎಚ್ಚರಿಕೆಯನ್ನು ನೀಡಿದರು ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಸುರೇಶ್ ಶೆಟ್ಟಿಪೂಕಟೆ ಕೋಳಾರು ಸತೀಶ್ಚಂದ್ರ ಭಂಡಾರಿ, ಕಣ್ಣೂರು ವಲಯ ಉಪಾಧ್ಯಕ್ಷ, ಸದಾನಂದ ರೈ, ಕಾಸರಗೋಡು ಜಿಲ್ಲಾ, ಉಪಾಧ್ಯಕ್ಷ, ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಲಾಯುಧನ್ ಉಪಸ್ಥಿತರಿದ್ದರು.