ಉದರ ಸಂಬಂಧಿ ಕಾಯಿಲೆಯಿಂದ ಕಳೆದ ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿ
ಚಿಕಿತ್ಸೆಯಲ್ಲಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ವೇಳೆ ಇವರಿಗೆ ಕೋವಿಡ್ ದೃಢಪಡಿಸಲಾಗಿತ್ತು. ಅಸೌಖ್ಯ ತೀವ್ರಗೊಂಡಿದ್ದರಿಂದ ಬಳಿಕ
ಅವರನ್ನು ಪರಿಯಾರಂ ಗೆ ಕರೆದೊಯ್ಯಲಾಗಿತ್ತು. ಮೃತರು ತಂದೆ, ತಾಯಿ, ಪತ್ನಿ ಬಬಿತ,
ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಗಳು ಕೋವಿಡ್
ನಿಬಂಧನೆಗೆ ಅನುಸಾರ ಇಂದೇ ನಡೆಯಲಿದೆ ಎಮದು ಅಧಿಕೃತರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ ಮರಣ
0
ಆಗಸ್ಟ್ 03, 2020
ಉಪ್ಪಳ: ಮಹಾಮಾರಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆ ಇಂದು ಮತ್ತೊಬ್ಬ ಸೋಂಕಿತ ಬಲಿಯಾಗುವುದರ ಮೂಲಕ ತೀವ್ರ ಜಾಗೃತ ಸ್ಥಿತಿಗೆ ಎಚ್ಚರಿಸಿದೆ. ಉಪ್ಪಳ ಶಾರದಾ ನಗರ ನಿವಾಸಿ ಸುಂದರ ಸಾಲ್ಯಾನ್-ರಾಧಾ ದಂಪತಿಗಳ ಪುತ್ರ ವಿನೋದ್ ಕುಮಾರ್(42) ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾದರು.