ಕಾಸರಗೋಡು : ಕಾಸರಗೋಡು-ದಕ್ಷಿಣ ಕನ್ನಡ ಖಾಯಂ ಸಂಚಾರಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅನುಮತಿ ನೀಡಿದ್ದು, ಈ ಸಂಬಂಧ ನಿಬಂಧನೆಗಳನ್ನು ಪ್ರಕಟಿಸಿದ್ದಾರೆ.
ಖಾಯಂ ಪ್ರಯಾಣ ನಡೆಸುವವರಿಗಾಗಿ ತಲಪ್ಪಾಡಿಯಲ್ಲಿ ನೋಂದಣಿ ಕ್ರಮಗಳನ್ನು ಸಿದ್ಧಪಡಿಸಲಾಗಿದೆ. ದಕ್ಷಿಣ ಕನ್ನಡಕ್ಕೆ ತೆರಳುವವರು ಮತ್ತು ಅಲ್ಲಿಂದ ಕಾಸರಗೋಡಿಗೆ ಖಾಯಂ ಆಗಿ ಬರಲು ಇಚ್ಛಿಸುವವರಿಗಾಗಿ ನೋಂದಣಿ ನಡೆಸುವ ಕಾಯಕವನ್ನು ತಲಪ್ಪಾಡಿಯಲ್ಲಿರುವ ಡಾಟಾ ಎಂಟ್ರಿ ಟೀಂ ನಡೆಸಲಿದ್ದಾರೆ.
ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ನಲ್ಲಿ ರೆಗ್ಯುಲರ್ ಪಾಸ್ ವಿಭಾಗದಲ್ಲಿ ಈ ನೋಂದಣಿ ನಡೆಯಲಿದೆ. ಇದರೊಂದಿಗೆ ಆಂಟಿಜೆನ್ ಟೆಸ್ಟ್ ನೆಗೆಟಿವ್ ಟೆಸ್ಟ್ ಸಲ್ಲಿಸಬೇಕಿದೆ. ಈ ಸರ್ಟಿಫೀಕೆಟ್ ನ್ನು ಪ್ರಯಾಣಿಕರು ತಲಪ್ಪಾಡಿಗೆ ಪ್ರವೇಶಿಸುವ ವೇಳೆ ಜಿಲ್ಲಾ ವೈದ್ಯಾಧಿಕಾರಿ ಅವರ ನೇತೃತ್ವದಲ್ಲಿ ನಡೆಸುವ ಆಂಟಿಜೆನ್ ಟೆಸ್ಟ್ ನ ನಂತರ ನೀಡಲಾಗುವುದು. ನೌಕರಿ ಕೇಂದ್ರದ ಮುಖ್ಯಸ್ಥರ ಹೆಸರು, ವಿಳಾಸ, ಕಚೇರಿ ವಿಳಾಸ ಖಚಿತಪಡಿಸುವ ಗುರುತು ಚೀಟಿಯನ್ನು ಪ್ರಯಾಣಿಕರು ಕಡ್ಡಾಯವಾಗಿ ಇರಿಸಿಕೊಳ್ಳಬೇಕು.
ಆರೋಗ್ಯ ವಿಭಾಗ ವಿಳಂಬವಿಲ್ಲದೆ ಸರ್ಟಿಫೀಕೆಟ್ ನೀಡಲಿದೆ. ಡಾಟಾ ಎಂಟ್ರಿ ಟೀಂ ವ್ಯಕ್ತಿಯ ಮಾಹಿತಿ, ದಾಖಲೆ. ಆಂಟಿಜೆನ್ ಟೆಸ್ಟ್ ವರದಿಗಳನ್ನು ಕೋವಿಡ್ 19 ಜಾಗ್ರತಾ ಪೆÇೀರ್ಟಲ್ ಗೆ ಅಪ್ ಲೋಡ್ ನಡೆಸಿದ ತಕ್ಷಣ ರೆಗ್ಯಲರ್ ಪಾಸ್ ಒದಗಲಿದೆ. ಪ್ರತಿ ಪ್ರಯಾಣಿಕರೂ 7 ದಿನ ಕಳೆದ ನಂತರ ಈ ಕ್ರಮಗಳನ್ನು ಪಾಲಿಸಬೇಕು. ಮುಂದಿನ ಸೂಚನೆ ಪ್ರಕಟಗೊಳ್ಳುವ ವರೆಗೆ ಈ ಪ್ರಕಾರ ಖಾಯಂ ಯಾತ್ರೆ ನಡೆಸಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.