HEALTH TIPS

ಅಳುತ್ತಿದ್ದರೂ ನೋಡದವರ ಮನೆಗೆಲ್ಲಲು ಶೀರ್ಷಾಸನ ಪ್ರತಿಭಟನೆ!

            ಕೊಚ್ಚಿ: ಕೊಚ್ಚಿಯ ಚೆಲ್ಲಾನಂ ಕರಾವಳಿ ತೀರ ಪ್ರದೇಶ ಬಿರುಗಾಳಿಯಿಂದ ಉಂಟಾದ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ನಡೆಸುತ್ತಿರುವ ಉಪವಾಸ ಪ್ರತಿಭಟನೆ 281 ದಿನಗಳನ್ನು ಪೂರೈಸಿದರೂ ಸತ್ಯಾಗ್ರಹದ ಬಗ್ಗೆ ಸರ್ಕಾರ ಈವರೆಗೆ ಗಮನ ಹರಿಸಿಲ್ಲ. ಏತನ್ಮಧ್ಯೆ, 58 ವರ್ಷದ ವಿ.ಟಿ ಸೆಬಾಸ್ಟಿಯನ್ ಉಪವಾಸ ಸತ್ಯಾಗ್ರಹದಲ್ಲಿದ್ದಾರೆ. ಚೆಲ್ಲಾನಂ ನಿವಾಸಿ ಮತ್ತು ಚೆಲ್ಲಾನಂ ಪೀಪಲ್ಸ್ ಫೆÇೀರಂನ ಪೆÇೀಷಕರಲ್ಲಿ ಒಬ್ಬರಾದ ಸೆಬಾಸ್ಟಿಯನ್ ಅವರು ತಮ್ಮ  ಮನೆಯ ಮುಂದೆ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಇದೀಗ ಗಮನ ಸೆಳೆದಿದ್ದಾರೆ. 
                   ತಲೆಯನ್ನು ಕೆಳಗಾಗಿಸಿ ಶೀರ್ಷಾಸನ ಶೈಲಿಯಲ್ಲಿ ಪ್ರತಿಭಟನೆಗೈಯುವ ಮೂಲಕ ಇವರು ಗಮನ ಸೆಳೆಯುತ್ತಿದ್ದಾರೆ.  15 ನಿಮಿಷಗಳಷ್ಟು ಹೊತ್ತು ನಿರಂತರ ಶೀರ್ಷಾಸನದಲ್ಲಿದ್ದು ಬಳಿಕ 10 ನಿಮಿಷಗಳ ವಿರಾಮ ತೆಗೆದು ಮತ್ತೆ ಪುನರಾರಂಭಿಸುವ ರೀತಿಯಲ್ಲಿ ಇವರ ಪ್ರತಿಭಟನೆ ಸಾಗಿದೆ. ಪ್ರತಿಭಟನೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಸುತ್ತಾರೆ. ತಮ್ಮ ಗ್ರಾಮವನ್ನು ಸಮುದ್ರ ಕೊಂಡೊಯ್ಯುತ್ತಿದೆ ಎಂಬ ಜನರ ಬೇಗುದಿಯನ್ನು ಸರ್ಕಾರ ಕಡೆಗಣಿಸಿರುವುದನ್ನು ವಿರೋಧಿಸಿ ಸೆಬಾಸ್ಟಿಯನ್ ಈ ಪ್ರತಿಭಟನೆಗೆ ತೊಡಗಿಕೊಂಡಿರುವುದಾಗಿ ತಿಳಿಸಿದ್ದಾರೆ. 
        ದಶಕಗಳಿಂದ ಈ ಪ್ರದೇಶ ತೀವ್ರ ಕಡಲ್ಕೊರೆತದಿಂದ ಜರ್ಜರಿತಗೊಂಡಿದ್ದು ಚಂಡಮಾರುತದ ಸಂದರ್ಭ ಸಮುದ್ರದಿಂದ 25 ಕಿ.ಮೀ ದೂರದಲ್ಲಿರುವ ಮನೆಗಳೂ  ಸಹ ನಾಶವಾದವು. ಕಳೆದ 280 ದಿನಗಳಿಂದ ನಾವು ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕೋರಿ ಪತ್ರಗಳು ಮತ್ತು ಪ್ರತಿಭಟನೆಗಳ ರೂಪದಲ್ಲಿ ಧ್ವನಿ ಎತ್ತುತ್ತಿದ್ದೇವೆ. ಆದರೆ ಸರ್ಕಾರ ನಮ್ಮ ಮನೆಗಳನ್ನು ಬಿಟ್ಟು ಬೇರೆಡೆ ವಾಸಿಸುವಂತೆ ಕೇಳಿಕೊಳ್ಳುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ. ತಲೆಯಿಂದ ನನ್ನ ಪ್ರತಿಭಟನೆಯು ಸರ್ಕಾರದ ಅವೈಜ್ಞಾನಿಕ ಕ್ರಮಗಳಾದ ಜಿಯೋ-ಬ್ಯಾಗ್ ಮತ್ತು ಜಿಯೋಟ್ಯೂಬ್‍ಗಳೊಂದಿಗೆ ಮಣ್ಣೆರಚುವ ಯತ್ನಗಳಿಗೆ ವಿರುದ್ದವಾಗಿ ಈ ಪ್ರತಿಭಟನೆ ಅನಿವಾರ್ಯ ಎಂದು ಅವರು ಹೇಳಿರುವರು.
      ತಾನು ಎಳೆಯ ಹರೆಯದಿಂದಲೇ ಶೀರ್ಷಾಸನದ ಬಗ್ಗೆ ಆಸಕ್ತನಾಗಿ ಅಭ್ಯಸಿಸಿದ್ದೆ. ಕಡಲ ತಡಿಯ ಮರಳಿಯ ಮೇಲೆಲ್ಲ ಬಾಲ್ಯದಲ್ಲಿ ಶೀರ್ಷಾಸನದಲ್ಲಿ ನಿಲುತ್ತಿದ್ದೆ. ಆದರೆ ಆ ಬಳಿಕ ಅದೆಲ್ಲ ನಿಲ್ಲಿಸಿದ್ದೆ. ಇದೀಗ ಅಂದು ಕಲಿತ ವಿದ್ಯೆ ಈ ರೀತಿಯಲ್ಲಾದರೂ ಕಣ್ತೆರೆಸುವ ಉದ್ದೇಶಕ್ಕೆ ಬಳಸಲು ಯತ್ನಿಸಿರುವುದಾಗಿ ಸೆಬಾಸ್ಟಿನ್ ತಿಳಿಸಿದ್ದಾರೆ. ಸಮುದ್ರ ನುಂಗುವ ಭಯಕ್ಕಿಂತ ಶೀರ್ಷಾಸನದ ಸಂಕಷ್ಟ ಎಂದಿಗೂ ಆದೀತು ಎಂದು ಸೆಬಾಸ್ಟಿಯನ್ ಮಾರ್ಮಿಕರಾಗಿ ತಿಳಿಸಿದ್ದಾರೆ. 
         ಕಳೆದ ಒಂದು ದಶಕದಲ್ಲಿ ಚೆಲ್ಲಾನಂ ನಲ್ಲಿ 5,000 ಕ್ಕೂ ಹೆಚ್ಚು ಕುಟುಂಬಗಳು ಕಡಲ್ಕೊರೆತದಿಂದ ಸಂಕಷ್ಟಕ್ಕೊಳಗಾಗಿವೆ.  ಕಳೆದ ಎರಡು ವರ್ಷಗಳು ನಿರೀಕ್ಷೆಗೂ ಮೀರಿದ ಕಡಲುಬ್ಬರ ಈ ಪ್ರದೇಶ ನಿವಾಸಿಗಳ ಬದುಕನ್ನು ಮತ್ತಷ್ಟು ಸಂಕಷ್ಟಕಮಯವಾಗಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries