ಕಾಸರಗೋಡು: ಮಧೂರು ಗ್ರಾಮಪಂಚಾಯತ್ ನಲ್ಲಿ 2020-21 ಆರ್ಥಿಕ ವರ್ಷದಲ್ಲಿ ಜಾರಿಗೊಳಿಸುವ ಫಲಾನುಭವಿ ಯೋಜನೆಗಳಿಗೆ ಅರ್ಜಿ ಕೋರಲಾಗಿದೆ.
ಮಹಿಳೆಯರಿಗಾಗಿ ಮೊಟ್ಟೆ ನೀಡುವ ಕೋಳಿಸಾಕಣೆ, ಹಾಲು ಕರೆಯುವ ಹಸು ಸಾಕಣೆ, ಸಬ್ಸಿಡಿ ಸಹಿತ ಪಶು ಆಹಾರ ವಿತರಣೆ, ಹಸುಗಳಿಗೆ ಎರೆ ಔಷಧ, ಮಿನರಲ್ ಮಿಶ್ರಣ ವಿತರಣೆ ಇತ್ಯಾದಿ ಯೋಜನೆಗಳಿಗೆ ಅರ್ಜಿ ಕೋರಲಾಗಿದೆ.
ಮೊಟ್ಟೆ ಕೋಳಿ ಸಾಕಣೆ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆ ಫಲಾನುಭವಿ ಪಾಲು ರೂಪದಲ್ಲಿ 300 ರೂ. ಸಹ ಪಾವಸತಿಸಬೇಕು. ಆ.20ರ ಮುಂಚಿತವಾಗಿ ಅರ್ಜಿ ಸಲ್ಲಿಸಲು ಸಂಬಂಧಪಟ್ಟವರು ವಿನಂತಿಸಿದ್ದಾರೆ.