HEALTH TIPS

ಜಮ್ಮುಕಾಶ್ಮೀರದಲ್ಲಿ ಉಗ್ರರ ಹುಟ್ಟಡಗಿಸಿದ್ದ ನಾಲ್ವರು ಯೋಧರಿಗೆ ಶೌರ್ಯ ಚಕ್ರ ಗೌರವ

        ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಮೂವರಿಗೆ ಶೌರ್ಯ ಚಕ್ರ ಸೇರಿದಂತೆ ಸೈನ್ಯದ ಶೌರ್ಯ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. 

       ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ವಿಶಾಖ್ ನಾಯರ್ ಅವರಿಗೆ ಶೌರ್ಯ ಚಕ್ರ ಗೌರವ ಸಂದಿದೆ. 

       ಇದರೊಡನೆ ಲೆಫ್ಟಿನೆಂಟ್ ಕೊಲೋನಲ್  ಕ್ರಿಶನ್ ಸಿಂಗ್ ರಾವತ್, ಮೇಜರ್ ಅನಿಲ್ ಅರಸ್ ಹಾಗೂ ಹವಾಲ್ದಾರ್ ಅಲೋಕ್ ಕುಮಾರ್ ದುಬೆ.ಸೇನೆಯಲ್ಲಿದ್ದು ಶೌರ್ಯ ಚಕ್ರ ಗೌರವಕ್ಕೆ ಪಾತ್ರವಾದ ಮೂವರು ವೀರರಾಗಿದ್ದಾರೆ.

     ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಲಾದ ಮಿಷನ್ ಆಧಾರಿತ ತಂಡದ ನಾಯಕರಾಗಿ ಎದುರಾಳಿಗಳ -ಒಳನುಸುಳುವಿಕೆ ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳಿಗೆ ದಿಟ್ಟ ಉತ್ತರ ನೀಡಿದ್ದ ಲೆಫ್ಟಿನೆಂಟ್ ಕರ್ನಲ್ ಕೆ.ಎಸ್. ರಾವತ್ ಗೆ ಸೇನಾ ಪದಕ ನೀಡಲಾಗಿದೆ, 

      ಲೆಫ್ಟಿನೆಂಟ್ ಕರ್ನಲ್ ರಾವತ್ ಅವರ ತಂಡವನ್ನು 36 ಗಂಟೆಗಳ ಕಾಲ ಸತತವಾಗಿ ಗಡಿಯಲ್ಲಿನ ಒಳನುಸುಳುವಿಕೆಯನ್ನು ತಡೆದು ಪ್ರತಿರೋಧತೋರಿದ್ದಕ್ಕಾಗಿ ಶೌರ್ಯ ಪ್ರಶಸ್ತಿ ನೀಡಲಾಗಿದೆ, ಇಬ್ಬರು ಭಯೋತ್ಪಾದಕರಿಗೆ ಅವರು ಒಳನುಸುಳುವುದನ್ನು ತಪ್ಪಿಸಿ ತಕ್ಕ ಸ್ಥಾನಗಳನ್ನು ತೋರಿಸಿಕೊಟ್ಟಿದ್ದರು, ಅವರು ತಮ್ಮ ತಂಡವನ್ನು ಶತ್ರುಗಳ ಪ್ರತೀಕಾರದಿಂಡ ಸುರಕ್ಷಿತವಾಗಿರಿಸುವಲ್ಲಿ ಗೆ ಮಾರ್ಗದರ್ಶನ ನೀಡಿದರು ಮತ್ತು ನಂತರ ಉಳಿದ ಭಯೋತ್ಪಾದಕರನ್ನು ಪತ್ತೆಹಚ್ಚಿದರು, ಅವರಲ್ಲಿ ಇಬ್ಬರನ್ನು ಹತ್ಯೆ ಮಾಡಿದ್ದರು,  ಇತರರನ್ನು ತೀವ್ರವಾಗಿ ಗಾಯಗೊಳಿಸಿದರು.

         ಮೇಜರ್ ಅನಿಲ್ ಕಂಪನಿಯ ಕಮಾಂಡರ್ ಆಗಿದ್ದು, ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ನಿಯೋಜಿತರಾಗಿದ್ದಾರೆ, ಹವಾಲ್ದಾರ್ ಅಲೋಕ್ ಕುಮಾರ್ ದುಬೆ  ಸಹ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದಾರೆ. 

    ಎಲ್ಒಸಿಯಾದ್ಯಂತ ಭಯೋತ್ಪಾದಕರ ಚಟುವಟಿಕೆ,  ಗುಪ್ತಚರ ಒಳಹರಿವು ಮತ್ತು ಭಾರತೀಯ ಮಿಲಿಟರಿ ಸಿಬ್ಬಂದಿಗಳ ಮೇಲೆ ದಾಳಿ ಮಾಡಲು ಸಿದ್ದವಾದವರ ಮೇಲೆ ಅನಿಲ್ ಪ್ರದಾಳಿಯ ಹೊಂಚು ಹಾಕಿದ್ದರು, ಇವರ ತಂಡ ಐದು ಭಯೋತ್ಪಾದಕರನ್ನುಯಶಸ್ವಿಯಾಗಿ ಹೊಡೆದುರುಳಿಸಿತ್ತು. . "ಅಸಾಧಾರಣ ನಾಯಕತ್ವ, ಉಕ್ಕಿನಂತ ಬಲಿಷ್ಠತೆ, ಸೇವೆಯ ಮನೋಭಾವಕ್ಕಾಗಿ ಅವರಿಗೆ ಶೌರ್ಯ ಪ್ರಶಸ್ತಿ ಒಲಿದಿದೆ.

        ಭಯೋತ್ಪಾದಕರು ಒಡ್ಡಿದ್ದ ವ್ಯೂಹವನ್ನು ತಡೆದು ವಿಫಲಗೊಳಿಸಿದ್ದು ಎ ++ ಶ್ರೇಣಿಯ  ಭಯಂಕರ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಪ್ರದರ್ಶಿಸಿದ ಧೈರ್ಯವನ್ನು ಪರಿಗಣಿಸಿ ಹವಾಲ್ದಾರ್ ಅಲೋಕ್ ಅವರಿಗೆ ಪ್ರಶಸ್ತಿ ನೀಡಲಾಗಿದೆ, 

     ಇದಲ್ಲದೆ ಇನ್ನೋರ್ವ ಸೇನಾ ಸಿಬ್ಬಂದಿಗೆ ಸಹ  ಸೇನಾ (ಶೌರ್ಯ) ಪದಕ ನೀಡಲಾಗಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries