HEALTH TIPS

ಅಫ್ಘಾನಿಸ್ತಾನದಲ್ಲಿ ಉಗ್ರಗಾಮಿ ದಾಳಿ-ಸೂತ್ರಧಾರ ಪಡನ್ನ ನಿವಾಸಿ

      
       ಕಾಸರಗೋಡು: ಅಫ್ಘಾನಿಸ್ತಾನದ ಜಲಾಲಬಾದ್ ಜೈಲ್‍ನಲ್ಲಿ ಸೋಮವಾರ ಉಂಟಾದ ಐಎಸ್ ದಾಳಿಯ ಮುಖ್ಯ ರೂವಾರಿ ಕಾಸರಗೋಡು ಜಿಲ್ಲೆಯ ಪಡನ್ನಕಲ್ಲು ಕೆಟ್ಟಿಯಪುರ ನಿವಾಸಿ ಡಾ|ಕೆ.ಪಿ.ಇಜಾಸ್ ಎಂಬುದಾಗಿ ವರದಿಯಾಗಿದೆ. ದಾಳಿ ನಡೆಸಿದ 10 ಉಗ್ರಗಾಮಿಗಳನ್ನು ಅಫ್ಘಾನಿಸ್ತಾನದ ಸೇನೆ ಹತ್ಯೆ ಮಾಡಿದೆ. 
       ಉಗ್ರಗಾಮಿ ದಾಳಿ ಮತ್ತು ಆ ಬಳಿಕ ಉಂಟಾದ ಕಾಳಗದಲ್ಲಿ 29 ಮಂದಿ ಸಾವಿಗೀಡಾಗಿದ್ದಾರೆ. 2016 ಜುಲೈಯಲ್ಲಿ ನಾಪತ್ತೆಯಾಗಿದ್ದ ಇಜಾಸ್ ಹಾಗು ಸಹೋದರ ಶಿಯಾಸ್ ಅವರ ಪತ್ನಿಯರು ಐಎಸ್‍ಗೆ ಸೇರಿರುವುದಾಗಿ ಮಾಹಿತಿ ಲಭಿಸಿದೆ. 
      ಭಾರತ, ಅಫ್ಘಾನಿಸ್ತಾನ, ತಜಕಿಸ್ತಾನ ಮೊದಲಾದ ಕಡೆಗಳಿಂದ ತಲಾ ಮೂವರಂತೆಯೂ, ಓರ್ವ ಪಾಕಿಸ್ತಾನಿ ಸೇರಿದ ತಂಡದಿಂದ ಉಗ್ರಗಾಮಿ ದಾಳಿ ನಡೆಸಲಾಗಿದೆ ಎಂದು ಐಎಸ್ ಬಹಿರಂಗಪಡಿಸಿತ್ತು. ಇಜಾಸ್‍ನ ಹೆಸರನ್ನು ಅಫ್ಘಾನಿಸ್ತಾನದ ರಹಸ್ಯ ತನಿಖಾ ವಿಭಾಗ ಭಾರತೀಯ ಏಜೆನ್ಸಿಗಳಿಗೆ ತಿಳಿಸಿದೆ. ಅಮೆರಿಕಾ ನಡೆಸಿದ ಡ್ರಾನ್ ಆಕ್ರಮಣದಲ್ಲಿ ಇಜಾಸ್ ಸಾವಿಗೀಡಾಗಿದ್ದನೆಂದು ಕೆಲವು ದಿನಗಳ ಹಿಂದೆ ಸಂಬಂ„ಕರಿಗೆ ಲಭಿಸಿದ ಮಾಹಿತಿ ಸರಿಯಲ್ಲ ಎಂದು ಈಗ ಸ್ಪಷ್ಟಗೊಂಡಿದೆ. ಜೈಲಿನ ದ್ವಾರದಲ್ಲಿ ಸೋಟಕ ವಸ್ತುಗಳೊಂದಿಗೆ ತಲುಪಿದ ಆತ್ಮಾಹುತಿ ದಳದ ಮುಖ್ಯಸ್ಥ ಇಜಾಸ್ ಎಂಬುದಾಗಿ ಊಹಿಸಲಾಗಿದೆ. 
      ಖೈದಿಗಳಾಗಿರುವ ಐಎಸ್ ಉಗ್ರಗಾಮಿಗಳನ್ನು ಬಿಡುಗಡೆಗೊಳಿಸಲು ಈ ಆಕ್ರಮಣ ನಡೆಸಲಾಗಿತ್ತು. ಈ ವೇಳೆ ಪರಾರಿಯಾಗಿದ್ದ ಉಗ್ರಗಾಮಿಗಳನ್ನು ಬಳಿಕ ವಿವಿಧೆಡೆಗಳಿಂದ ಬಂಧಿಸಲಾಗಿದೆ. 
          ಐಎಸ್‍ಗೆ ಕೇರಳದಿಂದ ಜನರನ್ನು ಆಯ್ಕೆ ಮಾಡುವುದರ ಸೂತ್ರಧಾರ ಇಜಾಸ್‍ನೆನ್ನಲಾಗಿದೆ. ಈತನ ಪತ್ನಿ ನೀಲೇಶ್ವರ ನಿವಾಸಿ ರಫೀನ(ರಿಪೈಲ), ಪುತ್ರಿ ಎರಡು ವರ್ಷದವಳು. ಶಿಯಾಸ್‍ನ ಪತ್ನಿ ಉಳ್ಳಾಲ ನಿವಾಸಿ ಅಜ್ಮಿಲ 2016 ರಲ್ಲಿ ನಾಪತ್ತೆಯಾಗಿದ್ದರು. ಅಂದು ಗರ್ಭಿಣಿಯಾಗಿದ್ದ ರಫೀನ ಹಾಗು ಅಜ್ಮಲ್ ಬಳಿಕ ಹೆಣ್ಮಕ್ಕಳಿಗೆ ಜನ್ಮ ನೀಡಿದ್ದರು. ಶಿಯಾಸ್ ಕೊಲೆ ಗೀಡಾಗಿರುವುದಾಗಿ ಸಂಬಂ„ಕರಿಗೆ ಮಾಹಿತಿ ಲಭಿಸಿದ್ದರೂ ಇತರರ ಬಗ್ಗೆ ಸುಳಿವು ಲಭಿಸಿರಲಿಲ್ಲ. 
       ಚೈನಾದಲ್ಲಿ ಮೆಡಿಕಲ್ ಶಿಕ್ಷಣ ಪೂರ್ತಿಗೊಳಿಸಿದ ಇಜಾಸ್ ಕಾಸರಗೋಡು ವೆಳ್ಳರಿಕುಂಡ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೆಡಿಕಲ್ ಆಫೀಸರ್ ಆಗಿ ಕೆಲಸ ನಿರ್ವಹಿಸಿದ್ದನು. ಪಡನ್ನ ಜಾರಿಯಲ್ಲಿ ಖಾಸಗಿಯಾಗಿ ಪ್ರಾಕ್ಟೀಸ್ ನಡೆಸಿದ್ದನು. ಬಡಗರದಲ್ಲಿ ಕೆಲಸ ಮಾಡುತ್ತಿದ್ದ ಮಧ್ಯೆ ಕುಟುಂಬದೊಂದಿಗೆ ನಾಪತ್ತೆಯಾಗಿದ್ದನು. ತೃಕ್ಕರಿಪುರ, ಪಡನ್ನ ವಲಯಗಳಲ್ಲಿ 2016 ಜೂನ್, ಜುಲೈ ತಿಂಗಳಲ್ಲಿ ನಾಪತ್ತೆಯಾದ 17 ಮಂದಿ ಐಎಸ್‍ಗೆ ಸೇರಿರುವುದಾಗಿ ಬಳಿಕ ಖಚಿತಪಡಿಸಲಾಗಿತ್ತು. 
          ಯುವ ಗ್ರಾಮೀಣ ವೈದ್ಯ ಮತ್ತು ಅವರ ಕುಟುಂಬ ಭಯೋತ್ಪಾದನೆಗೆ ಏಕೆ ಹೋದನು!
       ಕಾಸರಗೋಡು: ವಿಶ್ವದ ಕುಖ್ಯಾತ ಭಯೋತ್ಪಾದನಾ ಸಂಘಟನೆ ಐಎಸ್ ಭಯೋತ್ಪಾದಕರಲ್ಲಿ ಗ್ರಾಮೀಣ ಯುವಕರು ಇದ್ದಾರೆಯೇ? ಕಾಸರಗೋಡು ಪಟ್ಲದ ನಿವಾಸಿ ಡಾ. ಇಜಾಜ್ ಅವರ ಕುಟುಂಬ ಇನ್ನೂ ಆಶ್ಚರ್ಯಚಕಿತರಾಗಿದ್ದಾರೆ. ಸ್ಥಳೀಯರು ಎಷ್ಟೇ ಯೋಚಿಸಿದರೂ ಆರೋಗ್ಯ ಕ್ಷೇತ್ರದ ಸೌಮ್ಯ ಮುಖ ಹೇಗೆ ಭಯೋತ್ಪಾದನೆಯಾಗಿ ಮಾರ್ಪಟ್ಟಿದೆ ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ನಾಲ್ಕು ವರ್ಷಗಳ ಹಿಂದೆ ಕೇರಳೀಯರು  ಐಎಸ್ ಸಂಪರ್ಕದಲಲಿರುವುದು ಸುದ್ದಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮತ್ತೆ ಸದ್ದು ಮಾಡುತ್ತಿದೆ.
       ಅಫ್ಘಾನಿಸ್ತಾನಕ್ಕೆ ಪ್ರವೇಶಿಸುವ ಮೊದಲು ಡಾ.ಇಜಾಜ್ ಕೋಝಿಕ್ಕೋಡ್ ನ ತಿರುವಳ್ಳೂರು ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದನು. ಆ ಸಮಯದಲ್ಲಿ, ಇಜಾಜ್ ಭಯೋತ್ಪಾದಕ ಆಕಾಂಕ್ಷೆಗಳಲ್ಲಿ ಆಸಕ್ತಿ ಹೊಂದಿದ್ದನು. ಸಂಸ್ಥೆಯ ಮಾಲೀಕರು ಸೇರಿದಂತೆ ಅವರನ್ನು ವೈಯಕ್ತಿಕವಾಗಿ ತಿಳಿದಿರುವ ಪ್ರತಿಯೊಬ್ಬರೂ ಸೌಮ್ಯವಾಗಿದ್ದ ವೈದ್ಯರ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿದ್ದಾರೆ. ಅವನು ಹೊರಗಿನವರಿಗೆ ಅಷ್ಟೊಂದು ನಿಕಟನಾಗಿರಲಿಲ್ಲ. 
        2016ರ ಮೇ-ಜೂನ್ ತಿಂಗಳಲ್ಲಿ ಕಾಸರಗೋಡಿನ ರಶೀದ್, ಇಜಾಜ್ ಮತ್ತು ಅವರ ಪತ್ನಿ ರಿಹೈಲಾ ಸೇರಿದಂತೆ 16 ಜನರು ಮತ್ತು ಕಣ್ಣೂರಿನ 21 ಮಂದಿ ಅಫ್ಘಾನಿಸ್ತಾನದ ಐಸಿಸ್‍ಗೆ ಸೇರಿದರು ಎಂಬುದು ಎನ್ ಐ ಎ ಈಗಾಗಲೇ ಪತ್ತೆಹಚ್ಚಿರುವ ಆಘಾತಕಾರಿ ಮಾಹಿತಿ. ಕಣ್ಣೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಐಎಸ್ ನೇಮಕಾತಿ ನಡೆದಿರುವುದು ಪತ್ತೆಯಾಗಿದೆ. ಅಲ್ಲಿಯ ನಲವತ್ತರಷ್ಟು ಮಂದಿ ರಾಷ್ಟ್ರದ್ರೋಹದ ಪಣತೊಟ್ಟವರೆಂಬುದು ಕುಪಿತಗೊಳಿಸುವ ವಿಚಾರ. ಕಾಸರಗೋಡು, ಕೋಝಿಕ್ಕೋಡ್, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್ ಮತ್ತು ಎರ್ನಾಕುಳಂ ಜಿಲ್ಲೆಗಳ ಜನರು ಐ.ಎಸ್ ಸೇರ್ಪಡೆಗೊಂಡಿರುವುದು ತನಿಖೆಗಳಿಂದ ವ್ಯಕ್ತವಾಗಿದೆ.
          ತಿರುವನಂತಪುರಂ ಮೂಲದ ಫಾತಿಮಾ ನಿಮಿಷಾ ಐ.ಎಸ್. ಇಜಾಜ್ ಅವರ ಪತ್ನಿ ರಿಹೈಲಾಳ ಸಹಪಾಠಿ. ಅವರು ಕಾಸರಗೋಡಿನ ಪೆÇಯಿನಾಚಿ ದಂತ ಕಾಲೇಜಿನ ವಿದ್ಯಾರ್ಥಿಗಳು. ಅಜಾಜ್ ಮತ್ತು ರಶೀದ್ ಕೇರಳದಿಂದ ಐಎಸ್ ಸೇರಲು ಜನರನ್ನು ನೇಮಿಸಿಕೊಂಡರು. ಇಜಾಜ್  ನಿಮಿಶಾ ರನ್ನು ಇಸ್ಲಾಂಗೆ ಮತಾಂತರಗೊಳಿಸಿದರು ಮತ್ತು ಐಎಸ್ ಗೆ ಸೇರಲು ಒತ್ತಾಯಿಸಿದರು. ಈ ಗುಂಪನ್ನು ಮೊದಲು ಮಸ್ಕತ್‍ಗೆ ಹೈದರಾಬಾದ್ ಮೂಲಕ ಮತ್ತು ನಂತರ ಅಫ್ಘಾನಿಸ್ತಾನಕ್ಕೆ ಕರೆದೊಯ್ಯಲಾಯಿತು. ಸಿರಿಯಾ ಮತ್ತು ಇರಾಕ್ ಆಡಳಿತಗಳ ವಿರುದ್ಧ ಹೋರಾಡುವ ಗುರಿಯನ್ನು ಐ.ಎಸ್ ಹೊಂದಿತ್ತು. ಏತನ್ಮಧ್ಯೆ, ಕೆಲವು ಜನರು ಕಾಣೆಯಾಗಿದ್ದಾರೆ ಎಂದು ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಗೌಪ್ಯತೆ ಹೊರಜಗತ್ತಿಗೆ ತೆರೆದುಕೊಳ್ಳಲು ಕಾರಣವಾಯಿತು. 
        ಅತಿಕ್ರಮಣಕ್ಕಾಗಿ ಅಫ್ಘಾನಿಸ್ತಾನದಿಂದ ಗಡೀಪಾರು ಮಾಡಲ್ಪಟ್ಟ ಮಲಯಾಳಿ ನಶೀದುಲ್ ಹಮ್ಜಾಫರ್ ನನ್ನು ವಿಚಾರಣೆ ನಡೆಸುತ್ತಿರುವಾಗ ಕಾಸರಗೋಡು ನಿವಾಸಿಗಳೂ  ಐಎಸ್‍ಗೆ ಸೇರಿದ್ದಾರೆ ಎಂಬ ಮಾಹಿತಿಯನ್ನು ಎನ್‍ಐಎಗೆ ಲಭ್ಯವಾಯಿತು. ಕಣ್ಣೂರಿನಿಂದ ಐಎಸ್ ಸೇರಲು ಹೋಗಿದ್ದವರ ಕುಟುಂಬಗಳಿಗೆ ಸಿರಿಯಾದಿಂದ ಪೆÇಲೀಸರಿಗೆ ಧ್ವನಿ ಸಂದೇಶಗಳು ಬಂದಿದ್ದವು. ಇದರಿಂದ ಐಎಸ್‍ನಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ನಾಪತ್ತೆಯಾದವರೆಲ್ಲ ಐಎಸ್ ಗೆ ಸೇಇದ್ದಾರೆ ಎಮದು ಎನ್‍ಐಎ ದೃಢಪಡಿಸಿತು. ಭಾನುವಾರ ಜಲಾಲಾಬಾದ್ ಜೈಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ಜೊತೆಗೆ, ಅಫ್ಘಾನಿಸ್ತಾನ ಸಹಿತ ಇತರೆಡೆಗಳ ಹಲವಾರು ದಾಳಿಯಲ್ಲಿ ಡಾ.ಇಜಾಜ್ ಭಾಗಿಯಾಗಿರುವುದು ಕಂಡುಬಂದಿದೆ.
        ಏತನ್ಮಧ್ಯೆ, ಇಜಾಜ್ ಅವರ ಪತ್ನಿ ರಿಹೈಲಾ ಅಫಘಾನ್ ಸೇನೆಯ ವಶದಲ್ಲಿದ್ದಾರೆ ಎಂದು ಹೇಳಲಾಗಿದೆ. ವರ್ಷದ ಆರಂಭದಲ್ಲಿ, ಡ್ರೋನ್ ದಾಳಿಯಲ್ಲಿ ಇಜಾಜ್ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ. ಇಜಾಜ್ ಅವರ ಪತ್ನಿ ಡಾ. ರಿಹೈಲಾವನ್ನು ಆರು ತಿಂಗಳ ಕಾಲ ಕಾಬೂಲ್ ಸೈನ್ಯವು ಸೆರೆಯಲ್ಲಿರಿಸಿದೆ. ಉಳಿದ ಆರು ಮಹಿಳೆಯರು ಜೈಲಿನಲ್ಲಿದ್ದಾರೆ. ಈ ಗುಂಪಿನಲ್ಲಿ ನಾಲ್ಕು ಪಾಲಕ್ಕಾಡ್ ನಿವಾಸಿಗಳು ಸೇರಿದಂತೆ 23 ಜನರು ಇದ್ದರು. ಗುಂಪಿನ ನಾಯಕ ಅಬ್ದುಲ್ ರಶೀದ್ ಸೇರಿದಂತೆ ಆರು ಜನರು ಇತ್ತೀಚೆಗೆ ಕೊಲ್ಲಲ್ಪಟ್ಟರು ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries