ನವದೆಹಲಿ : ದೇಶಾದ್ಯಂತ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಜೊತೆಗೆ, ಕೊರೋನಾದಿಂದ ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಇದೇ ವೇಳೆಯಲ್ಲಿ ಕೊರೋನಾ ಸೋಂಕಿತರಾದಂತ ಸೋಂಕಿತರಾಗಿ ಆಸ್ಪತ್ರೆಗೆ ಸೇರುತ್ತಿದ್ದಂತ ಸೋಂಕಿತರಿಗೆ, ಕೆಲ ಆಸ್ಪತ್ರೆಗಳು ಸ್ಮಾರ್ಟ್ ಪೋನ್ ಬಳಕೆಗೆ ಅವಕಾಶ ನೀಡಿರಲಿಲ್ಲ. ಇದೀಗ ಕೇಂದ್ರ ಸರ್ಕಾರ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರು ಸ್ಮಾರ್ಟ್ ಪೋನ್ ಬಳಸಲು ಅವಕಾಶ ನೀಡಬೇಕು. ಈ ಮೂಲಕ ಆತ್ಮಸ್ಥೈರ್ಯ, ಮನೋ ಭಲ ಹೆಚ್ಚಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಸೋಂಕಿತರು ಸ್ಮಾರ್ಟ್ ಪೋನ್ ಬಳಸಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.
ಈ ಕುರಿತಂತೆ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ(ಡಿಜಎಚ್‌ಎಸ್) ಡಾ.ರಾಜೀವ್ ಗರ್ಗ್, ಕೊರೋನಾ ಸೋಂಕಿತರಾಗಿ ಆಸ್ಪತ್ರೆಯನ್ನು ಸೇರಿದಂತ ಸೋಂಕಿತರು ಸ್ಮಾರ್ಟ್ ಪೋನ್ ನೆರವಿನಿಂದ ತಮ್ಮ ಕುಟುಂಬದವರು, ಸ್ನೇಹಿತರ ಜೊತೆಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡುತ್ತಿದ್ದರೇ, ಸೋಂಕಿತರಿಗೆ ನೈತಿಕ ಸ್ಥೈರ್ಯ, ಮಾನಸಿಕ ನೆಮ್ಮದಿ, ಬಾಹ್ಯ ಬೆಂಬಲ ಸಿಕ್ಕಂತಾಗುತ್ತದೆ. ಹೀಗಾಗಿ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರು ಸ್ಮಾರ್ಟ್ ಪೋನ್ ಬಳಸಲು ಅವಕಾಶ ನೀಡುವಂತೆ ಸೂಚಿಸಿದೆ.
ಇನ್ನೂ ಮುಂದುವರೆದು, ರೋಗಿಗಳು ಬಳಸುವ ಉಪಕರಣಗಳ ಮೂಲಕ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕು. ಸ್ಮಾರ್ಟ್ ಪೋನ್ ಬಳಕೆಗೆ ಅವಕಾಶವನ್ನು ನಿಗದಿತ ಸಮಯದಂತ ಮಾರ್ಗ ಸೂಚಿಯ ನಿಯಮಗಳನ್ನಾದರೂ ರಚಿಸಿ ಆಸ್ಪತ್ರೆಗಳು ಅವಕಾಶ ನೀಡುವಂತೆ ತಿಳಿಸಿದೆ.