ಮಂಜೇಶ್ವರ: ಆನೆಕಲ್ಲು ವಾಣೀ ವಿಜಯ ಅನುದಾನಿತ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರೋತ್ಸವವನ್ನು ಸರಳ ರೀತಿಯಲ್ಲಿ ಹಾಗೂ ಕೋವಿಡ್ ಅಂತರವನ್ನ ಕಾಯ್ದುಕೊಂಡು ಆಚರಿಸಲಾಯಿತು.
ಗ್ರಾ.ಪಂ. ಸದಸ್ಯೆ ಸೀತಾ ಧ್ವಜಾರೋಹಣಗೈದರು. ಶಾಲಾ ಪಿ. ಟಿ. ಎ ಅಧ್ಯಕ್ಷ ಅಶ್ರಫ್,ನಿವೃತ್ತ ಮುಖ್ಯ ಶಿಕ್ಷಕ ಸತ್ಯನಾರಾಯಣ ಭಟ್, ಮುಖ್ಯೋಪಾಧ್ಯಾಯಿನಿ ರೇಣುಕಾ ಶುಭ ಹಾರೈಸಿದರು. ಮಾತೃ ಸಂಘದ ಅಧ್ಯಕ್ಷೆ ಸೀತಾ,ರಕ್ಷಕರು, ಅಧ್ಯಾಪಕ ವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.