ಬದಿಯಡ್ಕ: ಭಾರತೀಯ ಜನತಾ ಯುವಮೋರ್ಛಾ ಮಾನ್ಯ ಘಟಕ(17ನೇ ವಾರ್ಡ್) ವತಿಯಿಂದ ಅಯೋಧ್ಯೆಗೆ ಕರಸೇವೆಗೆ ತೆರಳಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಮಾನ್ಯದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜನತಾ ಪಕ್ಷದ ಬದಿಯಡ್ಕ ಪಂಚಾಯತಿ ಸಮಿತಿ ಅಧ್ಯಕ್ಷ ಶಂಕರ. ಡಿ ವಹಿಸಿದ್ದರು. ಕಾರ್ಯಕ್ರಮವನ್ನು ಬಿಜೆಪಿಯ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷ ಹರೀಶ್ ನಾರಂಪಾಡಿ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮ ಕುಮಾರಿ, ಬದಿಯಡ್ಕ ಪಂಚಾಯತಿ ಮಾಜಿ ಸದಸ್ಯ ಮಂಜುನಾಥ.ಡಿ ಮಾನ್ಯ, ಮಹಿಳಾ ಮೋರ್ಛಾ ಕಾಸರಗೋಡು ಮಂಡಲ ಅಧ್ಯಕ್ಷೆ ರಜನಿ ಸಂದೀಪ್, ಹಿರಿಯ ಸ್ವಯಂ ಸೇವಕರಾದ ವಿನಯ ಕುಮಾರ್. ಎಂ.ಎಸ್, ಯುವಮೋರ್ಛಾ ಬದಿಯಡ್ಕ ಪಂಚಾಯತಿ ಸಮಿತಿ ಕಾರ್ಯದರ್ಶಿ ಸುಜಿತ್ ಬೇಳ ಉಪಸ್ಥಿತರಿದ್ದರು.
ಅಯೋಧ್ಯೆಗೆ ಕರಸೇವೆಗೆ ತೆರಳಿದ ಕಾರ್ಯಕರ್ತರಾದ ತಿರುಮಲೇಶ್ವರ ಮಾನ್ಯ, ಶಶಿಧರ ಆಚಾರಿ, ಬಾಲಚಂದ್ರ ಮಣಿಯಾಣಿ ಏಣಿಯರ್ಪು, ಮಂಜುನಾಥ.ಡಿ.ಮಾನ್ಯ, ದಿನೇಶ್ ಮಾನ್ಯ, ಗಿರೀಶ್ ಮಾನ್ಯರವರಿಗೆ ಶಾಲು ಹೊದಿಸಿ ಅಭಿನಂದನೆ ಸಲ್ಲಿಸಲಾಯಿತು. ಯಜ್ಞೇಶ್ ಸ್ವಾಗತಿಸಿ, ವಿವೇಕ್ ಮಾನ್ಯ ವಂದಿಸಿದರು. ಚಂದ್ರೇಶ್ ಮಾನ್ಯ ನಿರೂಪಿಸಿದರು.