ಕಾಸರಗೋಡು : ಕಾಸರಗೋಡು ಜಿಲ್ಲಾ ಶುಚಿತ್ವ ಮಿಷನ್ ವತಿಯಿಂದ ಆ.8ರಿಂದ 15 ವರೆಗೆ ನಡೆಯುವ "ಗಂಧ್ ಗೀ ಮುಕ್ತ್ ಭಾರತ್(ತ್ಯಾಜ್ಯ ಮುಕ್ತ ಭಾರತ)" ಎಂಬ ಹೆಸರಿನ ಅಭಿಯಾನವೊಂದು ನಡೆಯಲಿದ್ದು, ಇದರ ಅಂಗವಾಗಿ ಜಿಲ್ಲೆಯ ಶಾಲಾ ಮಕ್ಕಳಿಗಾಗಿ ಆನ್ ಲೈನ್ ಸ್ಪರ್ಧೆಗಳು ನಡೆಯಲಿವೆ. ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಹೈಯರ್ ಸೆಕೆಂಡರಿ ವಿಭಾಗಗಳ ವಿದ್ಯಾರ್ಥಿಗಳಿಗಾಗಿ ಚಿತ್ರ, ಪ್ರಬಂಧ, ಭಿತ್ತಿಪತ್ರ ರಚನೆಗಳ ಸ್ಪರ್ಧೆ ನಡೆಯಲಿವೆ.
ಹಿರಿಯ ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ https://chat.whatsapp.com/FFzRXWrW6yA1V3G1W3GD8J ಎಂಬ ಲಿಂಕ್ ಮೂಲಕ, ಪ್ರಬಂಧ ಸ್ಪರ್ಧೆ ಪ್ರೌಢಶಾಲಾ ವಿಭಾಗ ವಿದ್ಯಾರ್ಥಿಗಳಿಗಾಗಿ https://chat.whatsapp.com/COVwLM9G2FrHG06zrPH4G6 ಎಂಬ ಲಿಂಕ್ ಮೂಲಕ, ಭಿತ್ತಿಪತ್ರ ರಚನೆ ಸ್ಪರ್ಧೆ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗಾಗಿ https://chat.whatsapp.com/B5vfMAdsHldB7rosd7Dsw4 ಎಂಬ ಲಿಂಕ್ ಮೂಲಕ ಗ್ರೂಪ್ ನಲ್ಲಿ ಸದಸ್ಯರಾಗಬೇಕು. ರಚನೆಗಳನ್ನು ಆ.24ರ ಮುಂಚಿತವಾಗಿ ಸಲ್ಲಿಸಬೇಕು. "ತ್ಯಾಜ್ಯ ಮುಕ್ತ ನನ್ನ ಗ್ರಾಮ" ಎಂಬುದು ಎಲ್ಲ ಸ್ಪರ್ಧೆಗಳ ವಿಷಯವಾಗಿರುವುದು. ಮಾಹಿತಿಗೆ ದೂರವಾಣಿ ಸಂಖ್ಯೆ: 9446958519, 9995968221.