ಕಾಸರಗೋಡು: ಪ್ಲಸ್-ವನ್ ಪ್ರವೇಶಾತಿಗೆ ಬಿ.ಆರ್.ಸಿಗಳು ಸಹಾಯ ಕೇಂದ್ರಗಳನ್ನು ಸಿದ್ಧ ಪಡಿಸಿದ್ದು.
. ವಿದ್ಯಾರ್ಥಿಗಳಿಗಾಗಿ ಇಲ್ಲಿನ ಸಹಾಯ ಡೆಸ್ಕ್ ಗಳು ಚಟುವಟಿಕೆ, ನಡೆಸುತ್ತಿವೆ.
ಸಮಗ್ರ ಶಿಕ್ಷಣ ಅಭಿಯಾನದ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ಈ ಸಹಾಯ ಕೇಂದ್ರಗಳು ಸಿದ್ಧಗೊಂಡಿವೆ. ಚಟುವಟಿಕೆ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ಇವು ಚಟುವಟಿಕೆ ನಡೆಸಲಿವೆ. ಕಂಟೆನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ ಇತರ ಪ್ರದೇಶಗಳ ಬಿ.ಆರ್.ಸಿಗಳಲ್ಲಿ ಈ ಹೆಲ್ಪ್ ಡೆಸ್ಕ್ ಗಳು ಸಕ್ರಿಯ ವಾಗಿವೆ.
ಪ್ರತಿ ಕೇಂದ್ರಗಳಲ್ಲಿ ಕೋವಿಡ್ ಪ್ರತಿರೋಧ ಸಂಹಿತೆಗಳ ಅನುಸಾರ ಕಾರ್ಯಚಟುವಟಿಕೆಗಳು ನಡೆಯುವುವು. ಬಿ.ಆರ್.ಸಿ. ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಚಾಲಕರು ಮೊದಲಾದವರ ಸಹಕಾರದೊಂದಿಗೆ ಮಕ್ಕಳಿಗೆ ಉಚಿತವಾಗಿ ಅರ್ಜಿ ಫಾರಂ, ಅಗತ್ಯದ ಮಾಹಿತಿ ಇತ್ಯಾದಿ ಒದಗಿಸುವ ಕಾಯಕ ನಡೆಸುತ್ತಿವೆ.
ಲಾಕ್ ಡೌನ್ ಅವಧಿಯಲ್ಲಿ ಇಂಟರ್ ನೆಟ್ ಕೆಫೆಗಳು ಚಟುವಟಿಕೆ ನಡೆಸಿದೇ ಇರುವ ಕಾರಣ ಸಮಸ್ಯೆ ಇತ್ಯಾದಿಗಳಿಂದ ವಿದ್ಯಾರ್ಥಿಗಳಿಗೆ ಸಹಾಯ ಒದಗಿಸುವ, ಪ್ರವೇಶಾತಿಗಿರುವ ಆನ್ ಲೈನ್ ಕ್ರಮಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಇವು ಪೂರಕ ವಾಗಿವೆ ಎಂದು ಹೊಸದುರ್ಗ ಬಿ.ಆರ್.ಸಿ. ಕಾರ್ಯಕ್ರಮ ಅಧಿಕಾರಿ ಪಿ.ವಿ.ಉಣ್ಣಿರಾಜನ್ ತಿಳಿಸಿದರು.
ಸಹಾಯ ಕೇಂದ್ರಗಳು:
ಮಂಜೇಶ್ವರ ಬಿ.ಆರ್.ಸಿ.ಯ ನೇತೃತ್ವದಲ್ಲಿ ಮುಳಿಂಜ ಮಂಜೇಶ್ವರ ಬಿ.ಆರ್.ಸಿ ಕಚೇರಿ, ಕಡಂಬಾರ್ ಜಿ.ಯು.ಪಿ.ಎಸ್. ಎಂಬ 2 ಕೇಂದ್ರಗಳು, ಕಾಸರಗೋಡು ಬಿ.ಆರ್.ಸಿ. ನೇತೃತ್ವದಲ್ಲಿ ಕಳ್ಳಿಗೆ ಎಲ್.ಪಿ.ಎಸ್., ಉಳಿಯತ್ತಡ್ಕದ ಕಾಸರಗೋಡು ಬಿ.ಆರ್.ಸಿ. ಕಚೇರಿ, ಕುತ್ತಿಕೋಲು ಎ.ಯು.ಪಿ.ಎಸ್., ಕುಂಡಂಕುಳಿ ಜಿ.ಎಚ್.ಎಸ್.ಎಸ್. ಎಂಬ 4 ಕೇಂದ್ರಗಳು.
ಬೇಕಲ ಬಿ.ಆರ್.ಸಿ.ಯ ನೇತೃತ್ವದಲ್ಲಿ ಬಾರೆ ಜಿ.ಡಬ್ಲ್ಯೂ.ಎಲ್.ಪಿ.ಎಸ್., ಪಳ್ಳಿಕ್ಕರೆ ಜಿ.ಯು.ಪಿ.ಎಸ್.,ಪುದಿಯಕಂಡಂ ಜಿ.ಯು.ಪಿ.ಎಸ್. ಎಂಬ 3 ಕೇಂದ್ರಗಳು. ಚಿತ್ತಾರಿಕಲ್ಲ್ ಬಿ.ಆರ್.ಸಿ.ಯ ನೇತೃತ್ವದಲ್ಲಿ ಕರಿಂಬಿಲ್ ಎಚ್.ಎಸ್. ಕುಂಬಳಪಳ್ಳಿ, ಬಳಾಲ್ ಜಿ.ಎಚ್.ಎಸ್.ಎಸ್., ಭೀಮನಡಿ ವಿಮಲಾ ಎಲ್.ಪಿ.ಎಸ್. ಕಣ್ಣಿವಯಲ್ ಜಿ.ಯು.ಪಿ.ಎಸ್. ಎಂಬ 3 ಕೇಂದ್ರಗಳು.
ಹೊಸದುರ್ಗ ಬಿ.ಆರ್.ಸಿ.ಯ ನೇತೃತ್ವದಲ್ಲಿ ನೀಲೇಶ್ವರ ಎನ್.ಕ.ಎಬಿ.ಎಂ.ಯು.ಪಿ.ಎಸ್, ಹೊಸದುರ್ಗ ಬಿ.ಆರ್.ಸಿ., ಬೇಳೂರು ಜು.ಯು.ಪಿ.ಎಸ್, ಮಡಿಕೈ(2) ಜಿ.ವಿ.ಎಚ್.ಎಸ್.ಎಸ್, ಚಾಮುಂಡಿಕುನ್ನು ಜಿ.ಎಚ್.ಎಸ್. ಎಂಬ 5 ಕೇಂದ್ರಗಳು, ಚೆರುವತ್ತೂರು ಬಿ.ಆರ್.ಸಿ. ನೇತೃತ್ವದಲ್ಲಿ ನಾಲಿಲಾಂಕಡಂ ಜಿ.ಯು.ಪಿ.ಎಸ್, ಚೆರುವತ್ತೂರು ಬಿ.ಆರ್.ಸಿ., ಚೆರುವತ್ತೂರು ಜಿ.ಡಬ್ಲ್ಯೂ.ಯು.ಪಿ.ಎಸ್., ನಾರ್ತ್ ತ್ರಿಕರಿಪುರ ಎ.ಎಲ್.ಪಿ.ಎಸ್. ಎಂಬ 5 ಕೇಂದ್ರಗಳು ಈ ನಿಟ್ಟಿನಲ್ಲಿ ಚಟುವಟಿಕೆ ನಡೆಸುತ್ತಿವೆ.