HEALTH TIPS

ಅಧಿಸೂಚನೆ ನೀಡದ ಹುದ್ದೆಗೆ ರಾಜೀನಾಮೆ ನೀಡಿದ ಕೆ.ಆರ್.ಮೀರಾ

 

       ಕೋಟ್ಟಯಂ: ಮಹಾತ್ಮಗಾಂದಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೆಟರ್ಸ್‍ನ ಅಧ್ಯಯನ ಮಂಡಳಿ ಸಂಬಂಧ ಕಾನೂನು ವಿವಾದಕ್ಕೆ ಬರಹಗಾರ್ತಿ ಕೆ.ಆರ್. ಮೀರಾ ಪ್ರತಿಕ್ರಿಯಿಸಿದ್ದು  ಸ್ಕೂಲ್ ಆಫ್ ಲೆಟರ್ಸ್‍ನ ತಜ್ಞರ ಸಮಿತಿಗೆ ನೇಮಕವಾಗಿರುವೆ ಎಂಬ ಅಧಿಕೃತ ಸಂದೇಶಗಳು ಲಭಿಸಿದ ಹುದ್ದೆಗೆ ತಾನು ರಾಜೀನಾಮೆ ನೀಡಿದ್ದೇನೆ ಎಂದು ಲೇಖಕಿ ಪ್ರತಿಕ್ರಿಯಿಸಿದ್ದಾರೆ.

       ನಾನು ಈ ಅಧ್ಯಯನ ಮಂಡಳಿಯ ನೇಮಕಾತಿಗೆ ರಾಜೀನಾಮೆ ನೀಡಿದ್ದೇನೆ. ನಾನು ಈ ಹುದ್ದೆಗೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಸೂಚನೆ ನೀಡಲಾಗಿತ್ತು ಮತ್ತು ಇನ್ನೂ ನನಗೆ ತಿಳಿಸಿಲ್ಲ ಎಂದು  ಕೆ.ಆರ್ ಮೀರಾ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ. "ಆನ್‍ಲೈನ್ ಮಾಧ್ಯಮವೊಂದು ನನ್ನನ್ನು ಅಧ್ಯಯನ ಮಂಡಳಿಯಲ್ಲಿ ಸೇರಿಸಿದೆ ಎಂಬ ಸುದ್ದಿ ಬಂದಿದೆ ಎಂದು ಪತ್ರಕರ್ತರ ಸ್ನೇಹಿತರೊಬ್ಬರು ಹೇಳಿದ್ದರು. ನಾನು ತಕ್ಷಣವೇ ಉಪಕುಲಪತಿಯನ್ನು ಕರೆದು ಮಾಹಿತಿ ಕೇಳಿದೆ. ಅವರು ಪ್ರತಿಕ್ರಿಯಿಸಿ ನೀವು ಅಧ್ಯಯನ ಮಂಡಳಿಯಲ್ಲಿ ಇರುವುದು ಗೌರವವೆಂದು ನಾನು ಭಾವಿಸುತ್ತೇನೆ ಎಂದಿದ್ದರು ಎಂದು ಮೀರಾ ಅವರು ತಿಳಿಸಿದ್ದಾರೆ. 

      "ಶಾಲಾ ಶಿಕ್ಷಣ ಪಠ್ಯಕ್ರಮ ಸಮಿತಿಯಲ್ಲಿ ನನ್ನ ಹೆಸರನ್ನು ಒಳಗೊಂಡಿರುವ ಪತ್ರವನ್ನು ನಾನು ಸ್ವೀಕರಿಸಿದ್ದೆ. ಆದರೆ ನಿರ್ದೇಶಕ ಮಂಡಳಿಯಿಂದ ಸೇರಿಸದಂತೆ ಕೇಳಿದ್ದೆ. ನಾನು ಇಲ್ಲಿಯವರೆಗೆ ಯಾವುದೇ ಸಭೆಗೆ ಹಾಜರಾಗಿಲ್ಲ ಮತ್ತು ಆ  ಹೆಸರಲ್ಲಿ ಒಂದು ಪೈಸೆಯನ್ನೂ ಸ್ವೀಕರಿಸಿಲ್ಲ. ನಾನು ಯುನೈಟೆಡ್ ಸ್ಟೇಟ್ಸ್‍ನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಭಾರತದ ಮಾನವಿಕ ಕೇಂದ್ರದ ಸಹಿತ ವಿದೇಶಗಳಲ್ಲಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ್ದೇನೆ ಎಂದು ಮೀರಾ ತಮ್ಮ ಶೈಕ್ಷಣಿಕ ಅರ್ಹತೆಯನ್ನೂ ಸ್ಪಷ್ಟಪಡಿಸಿದ್ದಾರೆ.

      ಎಂಜಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೆಟರ್ಸ್ ಇಂಗ್ಲಿಷ್ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‍ಗಳನ್ನು ನೀಡುತ್ತದೆ. ಮೀರಾ ಅವರನ್ನು  ಅಧ್ಯಯನ ಮಂಡಳಿಗೆ ನೇಮಕಾತಿಯನ್ನು ರಾಜ್ಯಪಾಲರು ಉಪಕುಲಪತಿಗಳ ಶಿಫಾರಸಿನ ಮೇರೆಗೆ ಮಾಡುತ್ತಾರೆ. ಪಠ್ಯಕ್ರಮವನ್ನು ಪರಿಷ್ಕರಿಸುವ ಮತ್ತು ಪರಿಷ್ಕøತ ಪಠ್ಯಕ್ರಮವನ್ನು ಅನುಮೋದಿಸುವ ಜವಾಬ್ದಾರಿಯನ್ನು ಅಧ್ಯಯನ ಮಂಡಳಿ ಹೊಂದಿದೆ. ಉಪಕುಲಪತಿ ಹಾಗೂ ತಜ್ಞರ ಸಮಿತಿಯು ಅಧ್ಯಯನ ಮಂಡಳಿಗೆ ಶಿಫಾರಸು ಮಾಡುತ್ತದೆ. ಈ ಬಾರಿ ತಜ್ಞರ ಸಮಿತಿಯ ಶಿಫಾರಸಿನಲ್ಲಿ ಕೆ.ಆರ್. ಮೀರಾ ಅವರ ಹೆಸರನ್ನು ಸೇರಿಸಲಾಗಿಲ್ಲ ಮತ್ತು ಶಿಕ್ಷಣ ಇಲಾಖೆ ತಜ್ಞರ ಸಮಿತಿಯ ಶಿಫಾರಸನ್ನು ತಿರಸ್ಕರಿಸಿದೆ. ಕೆ.ಆರ್. ಮೀರಾ ಅವರನ್ನು ಪಟ್ಟಿಯಲ್ಲಿ ಸೇರಿಸಿದೆ ಎಂದು ಆರೋಪ ಕೇಳಿಬಂದಿದೆ. ಶೈಕ್ಷಣಿಕ ಅರ್ಹತೆಗಳನ್ನು ಲೆಕ್ಕಿಸದೆ ಅಧ್ಯಯನ ಮಂಡಳಿಗೆ ತಜ್ಞರನ್ನು ನೇಮಿಸಿದ ಇತಿಹಾಸವಿದೆ ಎಂದು ಎಂಜಿ ವಿಶ್ವವಿದ್ಯಾಲಯ ಪ್ರತಿಕ್ರಿಯಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries