ನವದೆಹಲಿ: ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ 2020ರ ಆಗಸ್ಟ್ 15 ನಿಜಕ್ಕೂ ಶಾಕಿಂಗ್ ದಿನ ಎನಿಸಿದೆ. ಟೀಮ್ ಇಂಡಿಯಾವನ್ನು ಮುನ್ನಡೆಸಿ ಎರಡು ವಿಶ್ವಕಪ್‌ಗಳನ್ನು ಗೆಲ್ಲಿಸಿಕೊಟ್ಟಿದ್ದ ಮಾಜಿ ನಾಯಕ ಎಂಎಸ್ ಧೋನಿ ಈ ದಿನ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ ಮತ್ತೋರ್ವ ಭಾರತದ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಕೂಡ ಆಟ ನಿಲ್ಲಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ಗೆ ರೈನಾ ನಿವೃತ್ತಿ ಘೋಷಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವುದರಲ್ಲಿದೆ. ಅದಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ಮತ್ತು ರೈನಾ ಶಾಕ್ ನೀಡಿದ್ದಾರೆ. ಎಂಎಸ್ ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. 'ನನ್ನನ್ನು ಪ್ರೀತಿಸಿದ್ದಕ್ಕಾಗಿ, ಬೆಂಬಲಿಸಿದಕ್ಕಾಗಿ ಅನಂತ ಧನ್ಯವಾದಗಳು. 1929 ಗಂಟೆಗಳಿಂದ ನಾನು ನಿವೃತ್ತಿಯಾಗಿದ್ದೇನೆಂದು ಪರಿಗಣಿಸಿ,' ಎಂದು ಧೋನಿ ಬರೆದುಕೊಂಡಿದ್ದರು. ಸುರೇಶ್ ರೈನಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲೇ ನಿವೃತ್ತಿಯ ನಿರ್ಧಾರ ಹೇಳಿಕೊಂಡಿದ್ದಾರೆ.ನಿನ್ನೊಂದಿಗೆ ಆಡುವುದಲ್ಲದೆ ಪ್ರೀತಿಸುವ ವಿಚಾರ ಬೇರೇನಿಲ್ಲ ಮಾಹಿ. ನನ್ನ ಹೃದಯ ಹೆಮ್ಮೆಯಿಂದ ತುಂಬಿದೆ. ನಿಮ್ಮ ಪಯಣವನ್ನೇ ಸೇರಿಕೊಳ್ಳಲು ಬಯಸಿದ್ದೇನೆ. ಥ್ಯಾಂಕ್ಯೂ ಇಂಡಿಯಾ. ಜೈ ಹಿಂದ್,' ಎಂದು ರೈನಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
Liked by and