ಕಾಸರಗೋಡು: ಶ್ರೀ ರಾಮಚಂದ್ರನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ವಿಶಾಲ ಹಾಗೂ ವೈಭವಪೂರ್ಣ ಶ್ರೀ ರಾಮಚಂದ್ರನ ಮಂದಿರದ ನಿರ್ಮಾಣಕ್ಕಾಗಿ ಆ.5 ರಂದು ಶಿಲಾನ್ಯಾಸ ನೆರವೇರಿದ ಹಿನ್ನೆಲೆಯಲ್ಲಿ ಕಾಸರಗೋಡು ನಗರದ ಕೋಟೆಕಣಿಯ ಶ್ರೀ ರಾಮನಾಥ ದೇವಸ್ಥಾನದಲ್ಲಿ ಭಕ್ತಾದಿಗಳು ದೀಪ ಬೆಳಗಿ ಸಂಭ್ರಮಪಟ್ಟರು.
ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಆಶ್ರಯದಲ್ಲಿ ಕೊರೊನಾ ನಿಬಂಧನೆಗಳಂತೆ ವಿವಿಧ ಕಾರ್ಯಕ್ರಮ ನಡೆಯಿತು. ಶ್ರೀ ರಾಮನಾಮ ಸ್ತೋತ್ರ ಪಠಣ, ವಿಶೇಷ ಪೂಜೆ, ದೀಪೆÇೀತ್ಸವ ಜರಗಿತು. ಆ ಬಳಿಕ ಸಿಹಿ ವಿತರಿಸಲಾಯಿತು. ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಅವರು ನೇತೃತ್ವ ವಹಿಸಿದ್ದರು.