ಕಾಸರಗೋಡು: ಕೋವಿಡ್ 19 ಹಿನ್ನೆಲೆಯಲ್ಲಿ ಟ್ರಾಲಿಂಗ್ ನಿಷೇಧದ ನಂತರ ಮಡಕ್ಕರ ಮೀನು ಇಳಿಕಾ ಕೇಂದ್ರ ತೆರೆಯುವ ವೇಳೆ ಹಾರ್ಬರ್ ಪ್ರವೇಶಲ್ಲೆ ಕಟ್ಟುನಿಟ್ಟುಗಳಿಂದಿಗೆ ಅನುಮತಿಯಿರುವುದು.
ಜಿಲ್ಲಾ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ಈ ಸಂಬಂಧ ಮೀನುಗಾರರ ಸಂಘಟನೆಗಳ ವಿವಿಧ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪಿ.ವಿ. ಸತೀಶನ್ ಅಧ್ಯಕ್ಷತೆ ವಹಿಸಿದ್ದರು.
ಮೀನುಗಾರರು ಮತ್ತು ಮೀನು ವ್ಯಾಪಾರಿಗಳಿಗೆ ಮಾತ್ರ ನಿಬಂಧನೆಗಳ ಪ್ರಕಾರ ಇಲ್ಲಿ ಪ್ರವೇಶವಿರುವುದು. ಚಿಲ್ಲರೆ ವ್ಯಾಪಾರಿಗಳಿಗೆ ಪ್ರವೇಶವಿರುವುದಿಲ್ಲ. ಕಂಟೈ ನ್ಮೆಂಟ್ ಝೋನ್ಗಳಲ್ಲಿ ವಾಸವಾಗಿರುವ ಮಮದಿಗೂ ಪ್ರವೇಶ ಇರುವುದಿಲ್ಲ. ಇವರಿಗಿರುವ ಮೀನುಗಳು ಮಡಕ್ಕರ, ಕಾಡಂಗೋಡು ಪ್ರದೇಶಗಳಲ್ಲಿ ಚಟುವಟಿಕೆ ನಡೆಸುವ ಮೀನುಕಾರ್ಮಿಕರ ಅಭಿವೃದ್ಧಿ-ಕಲ್ಯಾಣ ಸ್ವಯಂಸೇವಾ ಸಂಘಟನೆಗಳು ಆರ್ಡರ್ ಪ್ರಕಾರ ತಲಪಿಸುವರು. ಹಾರ್ಬರ್ ನ ಮೀನು ಹರಾಜು ಪೂರ್ಣರೂಪದಲ್ಲಿ ನಿಷೇಧಿಸಲಾಗಿದೆ.