HEALTH TIPS

ಕಾಸರಗೋಡು ಸಂಸದರ ಕಾರು ಚಾಲಕನಿಗೆ ಕೋವಿಡ್ ದೃಢ-ಸಂಸದರು ಕ್ವಾರಂಟೈನ್ ಗೆ

 

             ಕಾಸರಗೋಡು: ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರ ಚಾಲಕನಿಗೆ ಕೋವಿಡ್ ಖಚಿತಪಡಿಸಲಾಗಿದ್ದು ಸಂಸದರು ತಮ್ಮ ಕಾಞಂಗಾಡಿನ ನಿವಾಸದಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಸಂಸದರ ಕಚೇರಿಯನ್ನು ಮುಚ್ಚಲಾಗಿದೆ. ಶನಿವಾರ ಸಮಸದರ ಮತ್ತು ಚಾಲಕರ ಗಂಟಲ ದ್ರವ ಪರಿಶೀಲನೆ ನಡೆಸಿದ ವರದಿಯಲ್ಲಿ ಚಾಲಕನಿಗೆ ಕೋವಿಡ್ ದೃಢೀಕರಿಸಲ್ಪಟ್ಟಿದೆ. 

         ಸಂಪರ್ಕದ ಮೂಲಕ ಸಂಸದರ ಚಾಲಕನಿಗೆ ಕೋವಿಡ್ ಹರಡಿರಬೇಕೆಂದು ಶಂಕಿಸಲಾಗಿದೆ. ಚಾಲಕನಿಗೆ ದೃಢಪಡಿಸಿದ ಬಳಿಕ  ರಾಜಮೋಹನ್ ಉಣ್ಣಿತ್ತಾನ್ ಸಂಸದ ಕಚೇರಿಯನ್ನು ಹತ್ತು ದಿನಗಳ ಕಾಲ ಮುಚ್ಚಲು ಸೂಚಿಸಿದರು. ಸಂಸದರ ಎಲ್ಲಾ ಕಾರ್ಯಕ್ರಮಗಳನ್ನೂ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಸಂಸದರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

        ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ  73 ಜನರಿಗೆ ಕೋವಿಡ್ ದೃಢಪಡಿಸಲಾಗಿತ್ತು. ಸೋಂಕುಮೂಲ ಪತ್ತೆಯಾಗದೆ ಆರು ಸೋಂಕಿತರನ್ನು ಪತ್ತೆಹಚ್ಚಲಾಗಿದೆ.  ಇತರ ರಾಜ್ಯಗಳಿಂದ ಬಂದ ಮೂವರ ಸಹಿತ ಸುಮಾರು 70 ಜನರಿಗೆ ಶನಿವಾರ ಸೋಂಕು ಪತ್ತೆಯಾಗಿತ್ತು. ಕೋವಿಡ್ ಪರೀಕ್ಷೆ ನಡೆಸಿದ 33 ಮಂದಿಗಳ ಫಲಿತಾಂಶ ನಕಾರಾತ್ಮಕವಾಗಿತ್ತು. ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿ 4504 ಮಂದಿಗಳಿದ್ದು, ಇದರಲ್ಲಿ ಮನೆಗಳಲ್ಲಿ 3128 ಮತ್ತು ಆಸ್ಪತ್ರೆ ಮತ್ತು ವಿವಿಧ ಕೇಂದ್ರಗಳಲ್ಲಿ 1376 ಮಂದಿಗಳಿದ್ದಾರೆ. ಶನಿವಾರ ಹೊಸತಾಗಿ 349 ಜನರನ್ನು ಕ್ವಾರಂಟೈನ್ ಗೆ ಕಳಿಸಲಾಗಿದೆ. 



Registration For Admission Click Here  

Contact For Advertise 9567181417

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries