ತಿರುವನಂತಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ನಿರ್ಧಾರ ಪ್ರಕಟಿಸಿದೆ. ಮಾನ್ಯತೆ ಪಡೆದ ಖಾಸಗೀ ಲ್ಯಾಬ್ ಗಳಲ್ಲಿ ಕೋವಿಡ್ ಪರೀಕ್ಷೆ ಇನ್ನು ನಡೆಸಬಹುದಾಗಿದ್ದು ವೈದ್ಯರ ನಿರ್ದೇಶನದ ಅಗತ್ಯ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್ ಪರೀಕ್ಷೆಗೆ ಗುರುತಿನ ಚೀಟಿ ಮತ್ತು ಒಪ್ಪಿಗೆ ಪತ್ರ ಕಡ್ಡಾಯವಾಗಿದೆ. ಆರ್ ಟಿ ಪಿ ಸಿ ಆರ್, ಟ್ರುನಾಟ್, ಸಿಬಿನಾಟ್ ಮತ್ತು ಆಂಟಿಜೆನ್ ಪರೀಕ್ಷೆಗಳನ್ನು ಸಹ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟರೆ, ಅವರು ಮನೆಯ ಚಿಕಿತ್ಸೆಗೆ ಆಯ್ಕೆ ಮಾಡಬಹುದು. ಚಿಕಿತ್ಸೆಗಾಗಿ ಆಯ್ಕೆಮಾಡಿದ ಮನೆಯಲ್ಲಿ ರೋಗಿಗೆ ಉಳಿಯಲು ಸೌಲಭ್ಯಗಳು ಇರಬೇಕು.
ಆರೋಗ್ಯ ಇಲಾಖೆ ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಲ್ಯಾಬ್‍ಗಳು ಅನುಸರಿಸಬೇಕು:
ಲ್ಯಾಬ್ಸ್ ಮತ್ತು ಆಸ್ಪತ್ರೆಗಳು ಕೋವಿಡ್ ವಾಕ್ ಇನ್ ಕಿಯೋಸ್ಕ್ (ವಿಸ್ಕ್) ಮಾದರಿಯನ್ನು ಅಳವಡಿಸಿಕೊಳ್ಳಬಹುದು. ಕೋವಿಡ್ ಪರೀಕ್ಷೆಯಲ್ಲಿ ರೋಗಲಕ್ಷಣಗಳನ್ನು ತೋರಿಸಿದರೆ, ಅವರನ್ನು ಚಿಕಿತ್ಸಾ ಕೇಂದ್ರ ಅಥವಾ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಬಹುದು. ಸರ್ಕಾರವು ನಿಗದಿಪಡಿಸಿದ ದರದಲ್ಲಿ ತಪಾಸಣೆ ವಿಧಿಸಲಾಗುತ್ತದೆ. ಹೊಸ ನಿರ್ಧಾರವು ರೋಗಿಗಳ ಮಾಹಿತಿಯನ್ನು ಮೊದಲೇ ಪತ್ತೆಹಚ್ಚಲು ಮತ್ತು ಪರಿಣಾಮಕಾರಿ ಚಿಕಿತ್ಸೆಗೆ ಅನುವು ಮಾಡಿಕೊಡುತ್ತದೆ ಎಂದು ಸರ್ಕಾರ ಹೇಳಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನಿರ್ಧಾರ ಕೈಗೊಂಡಿದೆ. ಕೋವಿಡ್ ನಿನ್ನೆ 1212 ಜನರಲ್ಲಿ ದೃಢಪಟ್ಟಿತ್ತು. 880 ಬಾಧಿತರು ಗುಣಮುಖರಾಗಿರುವರು. 1,068 ಜನರಿಗೆ ಸಂಪರ್ಕದ ಮೂಲಕ ಸೋಂಕು ಪತ್ತೆಯಾಗಿದೆ. ತಿರುವನಂತಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ ಬಾಧಿತರಿರುವುದು ದೃಢಪಡಿಸಲಾಗಿದೆ.