ಕಾಸರಗೋಡು: ಕೇರಳ-ಕರ್ನಾಟಕ ಗಡಿ ರಸ್ತೆಯಲ್ಲಿ ಹಾಕಲಾಗಿರುವ ಮಣ್ಣನ್ನು ತೆರವುಗೊಳಿಸದಿದ್ದಲ್ಲಿ ಸ್ವಾತಂತ್ರ್ಯ ದಿನದಂದು ಮಣ್ಣು ತೆರವುಗೊಳಿಸುವ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಬಿಜೆಪಿ ಯುವಮೋರ್ಚಾ ಕಾಸರಗೋಡು ಜಿಲ್ಲಾ ಘಟಕ ಮುನ್ನೆಚ್ಚರಿಕೆ ನೀಡಿದೆ.

ಕೇಂದ್ರ ಸರಕಾರದ ಮಾರ್ಗ ಸೂಚಿಯಂತೆ ಅಂತಾರಾಜ್ಯ ಪ್ರಯಾಣಕ್ಕೆ ವಿಶೇಷ ಅನುಮತಿ ಅಗತ್ಯ ಇಲ್ಲ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ನಿಬಂಧನೆಗಳೊಂದಿಗೆ ಅಂತಾರಾಜ್ಯ ಪ್ರಯಾಣಕ್ಕೆ ಅನುಮತಿ ಮಾತ್ರ ನೀಡಲಾಗಿದೆ. ಇದು ಕೇಂದ್ರದ ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂದು ಯುವಮೋರ್ಚಾ ಆರೋಪಿಸಿದೆ.
ಅಂತಾರಾಜ್ಯ ಪಾಸ್ ನೀಡಲು ಅವೈಜ್ಞಾನಿಕ ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ. ಇದು ಅಂಗೀಕರಿಸಲು ಸಾಧ್ಯ ಇಲ್ಲ. ನೂರಾರು ಮಂದಿಗೆ ಸಮಸ್ಯೆ ಉಂಟಾಗಿದ್ದು, ಕೂಡಲೇ ಇದನ್ನು ಪರಿಹರಿಸಬೇಕು ಎಂದು ಯುವ ಮೋರ್ಚಾ ಜಿಲ್ಲಾ ಸಮಿತಿ ಸಭೆ ಅಭಿಪ್ರಾಯ ಪಟ್ಟಿದೆ.
ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು . ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ , ಯುವಮೋರ್ಚಾ ಜಿಲ್ಲಾಧ್ಯಕ್ಷ ಅಂಜು ಜೆಸ್ಟಿ , ಶ್ರೀಜಿತ್ , ಜಯರಾಜ್ , ವೈಶಾಖ್ ಮೊದಲಾದವರು ಮಾತನಾಡಿದರು.