ಮಂಜೇಶ್ವರ: ಮೀಂಜ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಪಂಚಲೋಹದ ಉತ್ಸವ ಮೂರ್ತಿ ಸಹಿತ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ.
ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ ಅವರು ಮಂಗಳವಾರ ಬೆಳಗ್ಗೆ ಎಂದಿನಂತೆ ದೇವಸ್ಥಾನಕ್ಕೆ ಪೂಜೆಗೆ ತಲುಪಿದಾಗ ಕಳವು ಕೃತ್ಯ ಕಂಡು ಬಂತು.
ಕ್ಷೇತ್ರದ ಗೋಪುರದ ಮರದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅರ್ಚಕರ ಕೊಠಡಿಯಲ್ಲಿದ್ದ ಗರ್ಭಗುಡಿಯ ಕೀಲಿಕೈ ತೆಗೆದು ಗರ್ಭಗುಡಿಯ ಬಾಗಿಲು ತೆರೆದು ಕಳವು ಮಾಡಲಾಗಿದೆ.
ಗರ್ಭಗುಡಿಯಲ್ಲಿನ ಶಿವಲಿಂಗದಲ್ಲಿದ್ದ 2 ಜತೆ ಬೆಳ್ಳಿಯ ಮುಕ್ಕಣ್ಣು, ಬೆಳ್ಳಿಯ ಹರಿವಾಣ, ಧಾರೆಯ ಬಟ್ಟಲು ಕಳವು ಮಾಡಲಾಗಿದೆ. ಇದರ ಜೊತೆಗೆ ಇತರ ಕೆಲವು ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಆ ಬಳಿಕ ದೇವಸ್ಥಾನದ ಎರಡೂ ಕಚೇರಿಗಳಲ್ಲೂ ಕಳವು ಯತ್ನ ನಡೆದಿದೆ. ಆದರೆ ಇಲ್ಲಿ ಏನೂ ಇರಲಿಲ್ಲ ಎನ್ನಲಾಗಿದೆ. ಕಾಣಿಕೆ ಹುಂಡಿಗಳನ್ನು ಕಳ್ಳರು ಮುರಿದಿದ್ದಾರೆ. ಆದರೆ ಕಳೆದ ರವಿವಾರ ಇದನ್ನು ತೆರೆದು ಅ„ಕಾರಿಗಳು ಹಣ ತೆಗೆದ ಕಾರಣ ಕಳ್ಳರಿಗೆ ವಿಶೇಷವಾಗಿ ಏನೂ ಲಭಿಸಿರಲಿಕ್ಕಿಲ್ಲ ಎಂದು ಶಂಕಿಸಲಾಗಿದೆ.
ಕಳವು ನಡೆದ ಮಾಹಿತಿ ತಿಳಿದು ಸ್ಥಳಕ್ಕೆ ದೇವಸ್ಥಾನ ಸಮಿತಿಯ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ತಲುಪಿ ಮಂಜೇಶ್ವರ ಪೆÇಲೀಸರಿಗೆ ದೂರು ನೀಡಿದರು. ಎಸ್.ಐ. ರಾಘವನ್ ನೇತೃತ್ವದ ಪೆÇಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು.