ಕಾಸರಗೋಡು: ಮೀನುಗಾರರ ಕಲ್ಯಾಣ ನಿಧಿ ಮಂಡಳಿ ಸದಸ್ಯರಾಗಿರುವ ಕಾಸರಗೋಡು ಜಿಲ್ಲೆಯ ಮೀನುಗಾರರ ಮಕ್ಕಳಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಹತ್ತನೇ, ಪ್ಲಸ್ ಟು, ವಿ.ಎಚ್.ಎಸ್.ಇ. ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಸಿರುವವರಿಗೆ ಶಿಕ್ಷಣ ಬಹುಮಾನ ನೀಡುವ ನಿಟ್ಟಿನಲ್ಲಿ ಅರ್ಹರ ಹೆತ್ತವರಿಂದ ಅರ್ಜಿ ಕೋರಲಾಗಿದೆ. ಸರ್ಟಿಫಿಕೆಟ್ ಗಳ ದೃಡೀಕರಿಸಿದ ನಕಲು, ಹೆತ್ತವರ ಸಹಕಾರಿ ಸಂಘದ ಸದಸ್ಯತನ ಖಚಿತಪಡಿಸುವ ದೃಡೀಕರಣ ಪತ್ರ, ಮೀನುಗಾರರ ಕಲ್ಯಾಣ ನಿಧಿ ಮಂಡಳಿಯ ಪಾಸ್ ಪುಸ್ತಕದ ನಕಲು ಸಹಿತ ಆ.12ರ ಮುಂಚಿತವಾಗಿ ಮತ್ಸ್ಯ ಫೆಡ್ ಪ್ರಾಜೆಕ್ಟ್ ಕಚೇರಿಗೆ ಸಲ್ಲಿಸಬೇಕು. ಹೆಚ್ಚುವರಿ ಮಾಹಿತಿಗಾಗಿ ಸದಸ್ಯತನ ಹೊಂದಿರುವ ಸಹಕಾರಿ ಸಂಘವನ್ನು, ಕ್ಲಸ್ಟರ್ ಪ್ರಾಜೆಕ್ಟ್ ಕಚೇರಿಯನ್ನು, ಮತ್ಸ್ಯ ಫೆಡ್ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು: 9526041127, 9526041128, 9526041372.