ನವದೆಹಲಿ: ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಅಂತಿಮ ವರ್ಷ / ಸೆಮಿಸ್ಟರ್ ಪರೀಕ್ಷೆ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸದೆ ಮುಂದಿನ ತರಗತಿಗೆ ಉತ್ತೀರ್ಣತೆ ನೀಡಲು ಸಾಧ್ಯವಿಲ್ಲ. ಜೊತೆಗೆ ಪರೀಕ್ಷೆಗಳನ್ನು ನಡೆಸುವ ದಿನಾಂಕವನ್ನು ವಿಸ್ತರಿಸಲು ಯುಜಿಸಿ ವಿವಿಧ ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಡಾ.ಎಂ.ಆರ್. ಶಾ ಹಾಗೂ ಸುಭಾಶ್ ರೆಡ್ಡಿ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ನೀಡಿದೆ.
ಅಂತಿಮ ವರ್ಷ / ಸೆಮಿಸ್ಟರ್ ಪರೀಕ್ಷೆಗಳನ್ನು ಸೆಪ್ಟೆಂಬರ್ 30 ರೊಳಗೆ ಪೂರ್ಣಗೊಳಿಸಲು ಯುಜಿಸಿ ನೀಡಿರುವ ಅಂತಿಮ ದಿನಾಂಕವನ್ನು ಪ್ರಶ್ನಿಸಿ ಯುಜಿಸಿ ವಿದ್ಯಾರ್ಥಿಗಳು, ಯುವ ಮುಖಂಡರು, ಮಹಾರಾಷ್ಟ್ರ ಸಚಿವರೂ ಆಗಿರುವ ಆದಿತ್ಯ ಠಾಕ್ರೆ ಸಹಿತ ಅನೇಕರು ನೀಡಿರುವ ಅರ್ಜಿಯ ಸಂಬಂಧ ಕಟ್ಲೆ ಪರಿಶೀಲಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.
ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏಕೀಕೃತ ರೀತಿಯಲ್ಲಿ ಅಧ್ಯಯನ ಮತ್ತು ಅಕಾಡೆಮಿಕ್ ಮಾರ್ಗದರ್ಶಿ ಕ್ಯಾಲೆಂಡರ್ ನ್ನು ಸಿದ್ದಪಡಿಸಿದ ಯುಜಿಸಿಯ ನಿಬಂಧನೆಗಳನ್ನು ನ್ಯಾಯಾಲಯವು ಪರಿಶೀಲಿಸಿ ಈ ವಿಷಯದಲ್ಲಿ ವಿವಿಗಳು ಅವನ್ನು ಜಾರಿಗೊಳಿಸುವುದಕ್ಕೆ ಹೊಣೆಗಾರರಾಗಿರಬೇಕೆಂದು ನಿರ್ದೇಶಿಸಿತು. ಆದ್ದರಿಂದ, ಯುಜಿಸಿಯ ಸೂಚನೆಯಂತೆ ಪರೀಕ್ಷೆಗಳನ್ನು ನಡೆಸುವುದು ಕಡ್ಡಾಯವಾಗಿದೆ. ಉನ್ನತ ಶಿಕ್ಷಣಕ್ಕಾಗಿ, ಉದ್ಯೋಗ ಸಾಧ್ಯತೆಗಳಿಗಾಗಿ ಪರೀಕ್ಷೆಗಳನ್ನು ನಡೆಸುವುದು ತುರ್ತು ಅಗತ್ಯವಾಗಿದೆ. ಮತ್ತು ಈ ಹಂತಗಳನ್ನು ಏಕೀಕೃತ ರೀತಿಯಲ್ಲಿ ಪೂರ್ಣಗೊಳಿಸುವ ಬಾಧ್ಯತೆಯೂ ವಿವಿಗಳಿಗಿವೆ. ಈ ಹಿಂದಿನ ವರ್ಷಗಳ ಕಾರ್ಯಕ್ಷಮತೆ ಮತ್ತು ಆಂತರಿಕ ಮೌಲ್ಯಮಾಪನವನ್ನು ಗಣನೆಗೆ ತೆಗೆದುಕೊಂಡು ಅಂತಿಮ ವರ್ಷದ ಪರೀಕ್ಷಾ ಫಲಿತಾಂಶಗಳನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳಿಗಾಗಲಿ, ದುರಂತ ನಿವಾರಣಾ ಅಥೋರಿಟಿಗಾಗಲಿ ಯಾವ ಹಕ್ಕೂ ಇಲ್ಲವೆಂದು ನ್ಯಾಯಾಲಯ ಬೊಟ್ಟುಮಾಡಿ ತಿಳಿಸಿದೆ.