HEALTH TIPS

ಜನಾಭಿಮತವೇ ಸತ್ಯ-ಕೊರೋನಾ ನಿಯಂತ್ರಿಸುವಲ್ಲಿ ಲಾಕ್ ಡೌನ್, ಕಂಟೈನ್ ಮೆಂಟ್ ಝೋನ್ ಸಂಪೂರ್ಣ ವಿಫಲ: ವರದಿ ಹೇಳಿದ್ದೇನು?

   

              ನವದೆಹಲಿ: ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಹೇರಲಾಗಿದ್ದ ಲಾಕ್ ಡೌನ್ ಮತ್ತು ಕಂಟೈನ್ ಮೆಂಟ್ ಝೋನ್ ಕ್ರಮಗಳಿಂದ ಸೋಂಕು ಪ್ರಸರಣದ ಮೇಲೆ ಯಾವುದೇ ರೀತಿಯ ಪರಿಣಾಮವಾಗಿಲ್ಲ ಎಂದು ಅಧ್ಯಯನವೊಂದು ಹೇಳಿದೆ.

          ಲಾಕ್ ಡೌನ್ ಸಂದರ್ಭದಲ್ಲಿ ದೇಶದಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಕೇಸ್ ಡಬ್ಲಿಂಗ್ ಪ್ರಮಾಣವನ್ನು ಅಧ್ಯಯನ ಮಾಡಲಾಗಿದ್ದು, ಈ ಅಧ್ಯಯನದ ಪ್ರಕಾರ ದೇಶದಲ್ಲಿ ಕೊರೋನಾ ಸೋಂಕು ತಡೆಯುವಲ್ಲಿ ಲಾಕ್ ಡೌನ್ ಮತ್ತು ಕಂಟೈನ್ ಮೆಂಟ್ ಝೋನ್ ಗಳ ಕ್ರಮಗಳು ಉಪಯೋಗವಾಗಿಲ್ಲ ಎಂದು ಅಭಿಪ್ರಾಯಪಡಲಾಗಿದೆ. 

         ಆದರೆ ಈ ಬಗ್ಗೆ ಎಲ್ಲೆಡೆ  ಜನಸಾಮಾನ್ಯರೇ ವ್ಯರ್ಥವೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದಕ್ಕೆ ಈ ಅಧ್ಯಯನ ವರದಿ ಪುಷ್ಠಿ ನೀಡಿದೆ.  

       ಸೋಂಕು ಬೆಳವಣಿಗೆಯ ದರ, ದ್ವಿಗುಣಗೊಳಿಸುವ ಸಮಯ ಮತ್ತು ಸಕಾರಾತ್ಮಕತೆ ದರ (ಜನರ ಶೇಕಡಾವಾರು, ಪರೀಕ್ಷಿಸಿದ ಜನರ ಸಂಖ್ಯೆಯಲ್ಲಿ, ಸೋಂಕು ಕಂಡುಬರುವವರು) ಎಂಬ ಮೂರು ಅಂಶಗಳ ಮೇಲೆ ಜುಲೈ ತಿಂಗಳಿನ ಅನ್ ಲಾಕ್ 2.0 ವೇಳೆ ಅಧ್ಯಯನ ನಡೆಸಲಾಗಿತ್ತು. 

        ಅದರಂತೆ ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಕೇರಳ, ಮಧ್ಯಪ್ರದೇಶ, ಜಾಖರ್ಂಡ್ ಮತ್ತು ತ್ರಿಪುರ ರಾಜ್ಯಗಳಲ್ಲಿ ಜುಲೈನಲ್ಲಿ ಸಂಪೂರ್ಣ ಅಥವಾ ಭಾಗಶಃ ಅಥವಾ ಮಿನಿ ಲಾಕ್ ಡೌನ್ ವಿಧಿಸಿದರೂ ಸೋಂಕು ಪ್ರಸರಣದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ.  ರಾಜಸ್ಥಾನ, ಪಂಜಾಬ್, ಚಂಡೀಘಢ್ ನಲ್ಲಿ ಅನ್ಲಾಕ್ 2 ರ ಸಮಯದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. 

        ಈ ಬಗ್ಗೆ ಮಾಹಿತಿ ನೀಡಿರುವ ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಜಮ್ಮಿ ಎನ್ ರಾವ್ ಅವರು, ಲಾಕ್ಡೌನ್ ಸೋಂಕಿನ ಹರಡುವಿಕೆಯನ್ನು ವಿಳಂಬಗೊಳಿಸಿದೆ. ಆದರೆ ಅನ್ ಲಾಕ್ ವೇಳೆ ನಾವು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿದ್ದರೆ ಅದೇ ಸೋಂಕು ಪ್ರಸರಣ ಮತ್ತೆ ಆರಂಭವಾಗುತ್ತದೆ ಎಂದು ಹೇಳಿದ್ದಾರೆ. ಕೆಲ ರಾಜ್ಯಗಳು ಪರೀಕ್ಷೆ ಪ್ರಮಾಣ ಮತ್ತು ಅದರ ವೇಗವನ್ನು ಹೆಚ್ಚಿಸಿವೆ. ಆದರೆ ವ್ಯಕ್ತಿಗತ ಸಂಪರ್ಕ ಪತ್ತೆ ಹಚ್ಚುವಿಕೆ, ಪ್ರತ್ಯೇಕಿಸುವಿಕೆ, ಸೋಂಕಿನ ಅಂಶಗಳೂ ಕೂಡ ಒಳಗೊಂಡಿರುತ್ತದೆ ಎಂದು ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ನ ಉಮ್ಮನ್ ಜಾನ್ ಹೇಳಿದ್ದಾರೆ.

      ಜೊತೆಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ ಆರ್ ಬಾಬು ಅವರು ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ದೊಡ್ಡ ಜನಸಂಖ್ಯಾ ಸಾಂದ್ರತೆಯಲ್ಲಿ ಕಡಿಮೆ ಅಥವಾ ಕಳಪೆ ಪರೀಕ್ಷೆ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳಿಂದಾಗಿ ಸೋಂಕಿನ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಿದ್ದಾರೆ. 

           ಜುಲೈ ತಿಂಗಳಿನಲ್ಲಿ ಅತೀ ಹೆಚ್ಚು ಸೋಂಕು ಪ್ರಮಾಣ ಕಂಡ ರಾಜ್ಯಗಳ ವಿವರ:

            ಆಂಧ್ರ ಪ್ರದೇಶ

       ದೇಶದಲ್ಲಿ ಅತೀ ಹೆಚ್ಚು ಸಕ್ರಿಯ ಕೊರೋನಾ ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿ ಆಂಧ್ರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಆಂಧ್ರ ಪ್ರದೇಶದ ಎಲ್ಲ 13 ಜಿಲ್ಲೆಗಳಗೂ ಸೋಂಕು ವ್ಯಾಪಿಸಿದ್ದು, ಜುಲೆuಟಿಜeಜಿiಟಿeಜ ತಿಂಗಳಿನಲ್ಲಿ ಇಲ್ಲಿ ಸೋಂಕು ಪ್ರಸರಣ ಪ್ರಮಾಣ ಶೇ.7.42ಕ್ಕೆ ಏರಿಕೆಯಾಗಿತ್ತು. ಇದು ದೇಶದಲ್ಲೇ ಅತೀ ಹೆಚ್ಚು ಎನ್ನವಾಗಿದೆ. ಜೂನ್ ತಿಂಗಳಿನಲ್ಲಿ ಇದೇ ಪ್ರಮಾಣ ಶೇ.4.69ರಷ್ಟಿತ್ತು. ಸೋಂಕು ದ್ವಿಗುಣ ಅವಧಿ ಜೂನ್ ತಿಂಗಳಿನಲ್ಲಿ 14.9 ದಿನಗಳಷ್ಟಿತ್ತು. ಆದರೆ ಜುಲೈನಲ್ಲಿ ಇದರ ವೇಗ ಹೆಚ್ಚಾಗಿ ಈ ಪ್ರಮಾಣ 9.43 ದಿನಗಳಿಗೆ ಕುಸಿದಿದೆ.  

        ಕರ್ನಾಟಕ

     ಜೂನ್ ತಿಂಗಳಿನಲ್ಲಿ ಕರ್ನಾಟಕ ಸಕ್ರಿಯ ಪ್ರಕರಣಗಳು ಮತ್ತು ಹೊಸ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ 7ನೇ ಸ್ಥಾನದಲ್ಲಿತ್ತು. ಆದರೆ ಜುಲೈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಪರಿಣಾಮ ದೇಶದಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಒಟ್ಟಾರೆ ಸೋಂಕಿತರ ಪಟ್ಟಿಯಲ್ಲೂ ಕರ್ನಾಟಕ ಐದನೇ ಸ್ಥಾನಕ್ಕೇರಿತ್ತು. ಜೂನ್ ತಿಂಗಳಲ್ಲಿ ಸರಾಸರಿ 1 ಸಾವಿರದಷ್ಟಿದ್ದ ದಿನ ನಿತ್ಯ ಸೋಂಕು ಪ್ರಕರಣಗಳ ಸಂಖ್ಯೆ ಬಳಿಕ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು.   

       ಕರ್ನಾಟಕ ಮಾತ್ರವಲ್ಲದೇ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲೂ ಇದೇ ಪರಿಸ್ಥಿತಿ ಇತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries