ಕಾಸರಗೋಡು: ರೀಬಿಲ್ಡ್ ಕೇರಳ ಯೋಜನೆಯ ಅಂಗವಾಗಿ ಪಶುಸಂಗೋಪನೆ ಇಲಾಖೆಯಲ್ಲಿ ಕಾಸರಗೋಡು ಜಿಲ್ಲೆಗಾಗಿ "ಉಪಜೀವನ ಸಹಾಯ ಪದ್ಧತಿ(ವೃತ್ತಿ ಬದುಕಿಗೆ ಸಹಾಯ ಯೋಜನೆ) ರೀ ಬಿಲ್ಡ್ ಕೇರಳ" ಅಂಗವಾಗಿ ನಗರಸಭೆ, ಗ್ರಾಮಪಂಚಾಯತ್ ಮಟ್ಟದಲ್ಲಿ ಮೃಗಾಸ್ಪತ್ರೆಗಳ ಮುಖಾಂತರ ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರಂ ಆಯಾ ಮೃಗಾಸ್ಪತ್ರೆಗಳಲ್ಲಿ ಲಭ್ಯವಿದೆ. 2018 ವರ್ಷದ ನೆರೆ ಹಾವಳಿಯಲ್ಲಿ ನಷ್ಟ ಅನುಭವಿಸಿರುವ ಜಾನುವಾರು ಸಾಕಣೆದಾರರಿಗೆ ರಾಜ್ಯ ದುರಂತ ನಿವಾರಣೆ ರಿಲೀಫ್ ಫಂಡ್ ನಿಂದ ಆರ್ಥಿಕ ಸಹಾಯ ಲಭಿಸಲಿದೆ. ಕರು ಸಾಕಣೆ-100 ಯೂನಿಟ್, ಶುಚಿತ್ವ ವಿರುವ ಹಟ್ಟಿ ನಿರ್ಮಾಣ-200 ಯೂನಿಟ್, ತಿನಿಸು ಹುಲ್ಲಿನ ಕೃಷಿ-100 ಯೂನಿಟ್, ಮೇಕೆ ಸಾಕಣೆ-50 ಯೂನಿಟ್, ಮನೆಯಂಗಳದಲ್ಲಿ ಕೋಳಿ ಸಾಕಣೆ ಯೋಜನೆಗಳಿಗೆ ಅರ್ಜಿ ಕೋರಲಾಗಿದೆ.