HEALTH TIPS

ಕೊರೋನಾವೈರಸ್ ನಿಂದ 'ಮುಕ್ತಿ'ಪಡೆದ ಬಿಗ್ ಬಿ: ಆಸ್ಪತ್ರೆಯಿಂದ ಅಮಿತಾಭ್ ಬಚ್ಚನ್ ಬಿಡುಗಡೆ

    
            ಮುಂಬೈ: ಕೊರೋನಾವೈರಸ್ ಸೋಂಕಿನಿಂದ ಮುಕ್ತರಾಗಿರುವ ಅಮಿತಾಭ್ ಬಚ್ಚನ್ ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದು, ಮನೆಗೆ ಮರಳಿದ್ದಾರೆ.ಕೊನೆಗೂ ಸೋಂಕಿನಿಂದ ಮುಕ್ತರಾದ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಹೃತೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
            ಜುಲೈ 11 ರಂದು ಕೋವಿಡ್-19 ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಪುತ್ರ ಅಭಿಷೇಕ್ ಬಚ್ಚನ್ ಅವರೊಂದಿಗೆ 77 ವರ್ಷದ ನಟ ಅಮಿತಾಭ್ ಬಚ್ಚನ್ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. 44 ವರ್ಷದ ಅಭಿಷೇಕ್ ಗೆ ಈಗಲೂ ಪಾಸಿಟಿವ್ ಇದ್ದು, ವೈದ್ಯಕೀಯ ಚಿಕಿತ್ಸೆ ಮುಂದುವರೆಸಲಾಗಿದೆ.
            ಕೊರೋನಾ ಸೋಂಕಿನಿಂದ ಮುಕ್ತರಾಗಿ ಮನೆಗೆ ಮರಳಿದ್ದೇನೆ.ಆದರೆ,ಅಭಿಷೇಕ್ ಬಚ್ಚನ್ ಇನ್ನೂ ಆಸ್ಪತ್ರೆಯಲ್ಲಿ ಇರುವುದಾಗಿ  ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
          ಕೋರನಾವೈರಸ್ ವಿರುದ್ಧ ಹೋರಾಡುವಲ್ಲಿ ವೈದ್ಯರು ಸಮಾಲೋಚನೆ, ಮಾಹಿತಿ ವಿನಿಮಯ ಮೂಲಕ ದಣಿವರಿಯದ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಪ್ರತಿ ಕ್ಷಣವೂ ಎಲ್ಲವೂ ಸರಿಯಾಗುವ ಭರವಸೆ ಮೂಡಿಸುವ ಮೂಲಕ ಜೀವ ಕಾಪಾಡಿದ್ದಾರೆ.ಆದರೆ, ಅಭಿಷೇಕ್ ಬಚ್ಚನ್ ಇನ್ನೂ ಆಸ್ಪತ್ರೆಯಲ್ಲಿದ್ದು, ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ. ಅಭಿಷೇಕ್ ಪತ್ನಿಐಶ್ವರ್ಯಾ ರೈ, ಮತ್ತು ಪುತ್ರಿ ಆರಾಧ್ಯ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

T 3613 - I have tested CoVid- have been discharged. I am back home in solitary quarantine. Grace of the Almighty, blessings of Ma Babuji, prayers & duas of near & dear & friends fans EF .. and the excellent care and nursing at Nanavati made it possible for me to see this day .
Image

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries