HEALTH TIPS

ಕೊರೊನಾಗಿಂತ ಅದರ ಭಯದಿಂದ ಸತ್ತವರೇ ಹೆಚ್ಚು: ಡಾ. ಮಂಜುನಾಥ್

    ಬೆಂಗಳೂರು: ಕೊರೊನಾ ವೈರಸ್ ಕುರಿತಂತೆ ಆರಂಭದಲ್ಲಿದ್ದ ಆತಂಕ ಈಗ ಕಡಿಮೆಯಾಗಿದೆ. ಅದೊಂದು ಸಾಮಾನ್ಯ ಖಾಯಿಲೆ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಜನ ಸಾಮಾನ್ಯರ ಜೀವನವೂ ನಿಧಾನವಾಗಿ ಸಹಜತೆಗೆ ಬರುತ್ತಿದೆ. ಆದರೂ ಕೋವಿಡ್-19 ಸೋಂಕಿತರನ್ನು ಸಮಾಜದಲ್ಲಿ ನೋಡುವ ರೀತಿ ಮಾತ್ರ ಬದಲಾಗಿಲ್ಲ. ಸೋಂಕು ತಗುಲಿದರೆ ಸಾವು ಎಂಬಂತೆಯೆ ಜನರು ವರ್ತನೆ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಹಿಂದೆ ಜಾರಿಗೆ ತಂದಿದ್ದ ಮಾರ್ಗಸೂಚಿಗಳು ಕೂಡ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.

          ಮಾರಣಾಂತಿಕವಲ್ಲದ ಕೋವಿಡ್-19 ಸೊಂಕಿತರನ್ನು ಕಳಂಕಿತರಂತೆ ನೋಡಲಾಗುತ್ತಿದೆ. ಇಷ್ಟು ದಿನ ಕೊರೊನಾ ವೈರಸ್ ಬಗ್ಗೆ ಆತಂಕದ ಹೇಳಿಕೆ ನೀಡುತ್ತಿದ್ದವರು ಇದೀಗ ದಿಢೀರ್ ಬದಲಾಗುತ್ತಿದ್ದಾರೆ. ಅದೊಂದು ಜಾಗತಿಕವಾಗಿ ಕಾಡುತ್ತಿರುವ ಸಾಮಾನ್ಯ ಖಾಯಿಲೆ. ಯಾರಿಗೇ ಬೇಕಾದರೂ ಬರಬಹುದು, ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕೊರೊನಾ ವೈರಸ್ ಖಾಯಿಲೆಯನ್ನು ಮಾರಣಾಂತಿಕ ಎಂದು ಬಿಂಬಿಸಿ ಇದೀಗ ಸಾಮಾನ್ಯ ಎಂದು ಹೇಳುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

         ಕೋವಿಡ್ ಚಿಂತನ ಮಂಥನ ಇಷ್ಟು ದಿನ ತಿಳುವಳಿಕೆ ಕೊಡುವ ಬದಲು ಆತಂಕ ಸೃಷ್ಟಿಯಾಗಿದ್ದರಿಂದ ಆಗಿರುವ ಅನಾಹುತಗಳನ್ನು ತಡೆಯುವ ಪ್ರಯತ್ನಗಳು ಆರಂಭವಾಗಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಮೂಲಕ 'ಕೋವಿಡ್ ಕಳಂಕ: ಚಿಂತನ-ಮಂಥನ' ವರ್ಚುವಲ್ ಕಾರ್ಯಕ್ರಮ ನಡೆಸಿ ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. 
     ನಿನ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಸೋಂಕಿತರಿಗೆ ದೈರ್ಯ ತುಂಬುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಗುಣಮುಖರಾದವರನ್ನು ಗೌರವದಿಂದ ಕಾಣಬೇಕು. ಅದೊಂದು ಕಳಂಕ ಎಂಬಂತೆ ಯಾರು ಸಹ ನಡೆದುಕೊಳ್ಳಬಾರದು. ಈ ಕಳಂಕವನ್ನು ಹೋಗಲಾಡಿಸುವುದರಲ್ಲಿ ಸಮಾಜದ ಪಾತ್ರ ಅತಿ ಮುಖ್ಯ ಎಂದು ಮನವಿ ಮಾಡಿಕೊಂಡರು.
      ರೋಗದ ಭಯ :
    ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ. ಮಂಜುನಾಥ್ ಅವರು ಮಾತಾನಾಡಿ, ಕೊರೊನಾ ಬಂದು ಸತ್ತವರಿಗಿಂತ, ಅದರ ಭಯದಿಂದ ಸತ್ತವರು ಹೆಚ್ಚಾಗಿದೆ. ಇದು ಸಮಾಜದ ಮನಸ್ಥಿತಿಯನ್ನು ತೋರಿಸುತ್ತದೆ. ಇದೊಂದು ಸಾಮಾನ್ಯವಾಗಿ ಬಂದು ಹೋಗುವ ಕಾಯಿಲೆ. ಯಾರು ಸಹ ಅದಕ್ಕೆ ಭಯಪಡಬಾರದು. ಜನರಲ್ಲಿ ಧೈರ್ಯ ತುಂಬುವ ಸಕರಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುವ ದೊಡ್ಡ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದರು. ಕೋವಿಡ್ ಕಳಂಕವನ್ನು ಹೋಗಲಾಡಿಸುವುದು ಹೇಗೆ ಎಂಬುದನ್ನು ನಾವು ಚರ್ಚೆ ಮಾಡಬೇಕಿದೆ. ರೋಗವನ್ನಾಗಲಿ ಅಥವಾ ಸೋಂಕಿತರನ್ನಾಗಲಿ ವೈಭವೀಕರಿಸುವ ಅಗತ್ಯವಿಲ್ಲ. ಗುಣಮುಖರಾದಾಗ ಅವರು ಎಲ್ಲಾರಂತೆಯೇ ಆರೋಗ್ಯರು ಎಂಬುದನ್ನು ಮರೆತು ಮಾನವೀಯತೆ ಕಳೆದುಕೊಳ್ಳಬಾರದು ಎಂದು ಡಾ. ಮಂಜುನಾಥ್ ಅವರು ಅಭಿಪ್ರಾಯಪಟ್ಟರು.
                        ಅನುಭವ ಹಂಚಿಕೊಂಡ ಸುಮಲತಾ:
         ವರ್ಚುವಲ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು, ನಾನು ಸಹ ಈ ಸೋಂಕಿಗೆ ತುತ್ತಾಗಿದ್ದೆ ಎಂದು ಹೇಳಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೊಂದು ಸಾಮಾನ್ಯ ಕಾಯಿಲೆಯನ್ನು ಪೆಡಂಭೂತವಾಗಿ ಚಿತ್ರಿಸಲಾಗುತ್ತಿದೆ. ಇದರಿಂದ ವಾಸಿಯಾದ ಅನೇಕ ವಿಐಪಿಗಳನ್ನು ಹಾಗೂ ಸಾಮಾನ್ಯ ಜನರನ್ನು ಸಮಾಜ ಕಾಣುವ ದೃಷ್ಟಿಕೋನ ಬದಲಾಗಬೇಕಿದೆ ಎಂದರು.
          ಸಮಾಜದ ದೃಷ್ಟಿಕೋನ:
    ಮುಖ್ಯವಾಗಿ ಕೊರೊನಾ ವೈರಸ್ ಕುರಿತು ಸಮಾಜದ ದೃಷ್ಟಿಕೋನ ಹೇಗಿದೆ? ಮತ್ತು ಅದನ್ನು ಬದಲಾಯಿಸುವ ಕುರಿತು ಇದೀಗ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸೋಂಕಿತರ ಬಗ್ಗೆ ಇರುವ ಮನೋಭಾವನೆಯನ್ನು ಬದಲಾಯಿಸಲು ಪ್ರಯತ್ನ ಆರಂಭಿಸಿದೆ. ಆದರೆ ಸರ್ಕಾರ ಆಗಾಗ ಮಾರ್ಗಸೂಚಿಗಳನ್ನು ಬದಲಾಯಿಸುವ ಮೂಲಕ, ಕೊರೊನಾವೈರಸ್‍ನಿಂದ ಮೃತಪಟ್ಟವರ ದೇಹಗಳ ವಿಲೇವಾರಿ ಸಂದರ್ಭದಲ್ಲಿ ಸೂಕ್ತ ತಿಳಿವಳಿಕೆ ಕೊಡದೇ ಇದ್ದುದು ಈಗಿನ ಸಮಸ್ಯೆ ಕಾರಣ ಎಂದೂ ಅನೇಕರು ಸಮಾಜದಲ್ಲಿ ಚರ್ಚಿಸುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries