HEALTH TIPS

ರಷ್ಯಾಕೋವಿಡ್ ಲಸಿಕೆಯ ಸುರಕ್ಷತಾ ಡೇಟಾ ಪರಿಶೀಲನೆಗೆ ಮುಂದಾದ ಡಬ್ಲ್ಯುಎಚ್‌ಒ

          ಜಿನೇವಾ: ಕೋವಿಡ್ -19 ಲಸಿಕೆಯನ್ನು ರೋಗಿಗಳಿಗೆ ನೀಡಲು ಡಬ್ಲ್ಯುಎಚ್‌ಒ   ಅನುಮೋದನೆಯ  ಸ್ಟ್ಯಾಂಪ್ ಕಠಿಣ ಸುರಕ್ಷತಾ ದತ್ತಾಂಶ ಪರಿಶೀಲನೆಯ ಅಗತ್ಯವಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ,  ರಷ್ಯಾ ಮಂಗಳವಾರ ತನ್ನ ಕೋವಿಡ್ ಲಸಿಕೆ ನೊಂದಾಯಿಸಿದ ಘೋಷಣೆ ಮಾಡಿದ ಬಳಿಕ ಡಬ್ಲ್ಯುಎಚ್‌ಒ   ಈ ಹೇಳಿಕೆ ಹೊರಬಿದ್ದಿದೆ.

           ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೂತನ ಕೊರೋನಾ ವಿರುದ್ಧ ಹೋರಾಡಬಲ್ಲ ಹಾಗೂ ಸುಸ್ಥಿರಲಸಿಕೆಯನ್ನು ನೊಂದಾಯಿಸಿದ ಮೊದಲ ದೇಶವಾಗಿ ರಷ್ಯಾ ಮಾರ್ಪಟ್ಟಿದೆ ಎಂದು ಮಂಗಳವಾರ ಘೋಷಿಸಿದ್ದಾರೆ. "ನಾವು ರಷ್ಯಾದ ಆರೋಗ್ಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಮತ್ತು ಲಸಿಕೆಯ ಡಬ್ಲ್ಯುಎಚ್ ಓ ಪೂರ್ವ ಅರ್ಹತೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ" ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ವಕ್ತಾರ ತಾರಿಕ್ ಜಸರೆವಿಕ್ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಜಿನೀವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

        "ಯಾವುದೇ ಲಸಿಕೆಯ ಪೂರ್ವ-ಅರ್ಹತೆಯು ಅಗತ್ಯವಿರುವ ಎಲ್ಲಾ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಡೇಟಾದ ಕಠಿಣ ವಿಮರ್ಶೆ ಮತ್ತು ಮೌಲ್ಯಮಾಪನವನ್ನು ಒಳಗೊಂಡಿರುವಿಕೆ ಅತ್ಯಂತ ಮುಖ್ಯ" ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಗ,ಆಲೇಯ ಸಂಶೋಧನಾ ಸಂಸ್ಥೆ ದೇಶದ ರಕ್ಷಣಾ ಸಚಿವಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ

          ಜುಲೈ 31 ರಂದು ತಯಾರಾದ ಇತ್ತೀಚಿನ ಡಬ್ಲ್ಯುಎಚ್‌ಒ ಅನಾಲಿಸಿಸ್ ಪ್ರಕಾರ ವಿಶ್ವದಾದ್ಯಂತ ಒಟ್ಟು 165 ಸಂಸ್ಥೆಗಳು ಲಸಿಕೆಗಳನ್ನು ಅಭಿವೃದ್ದಿಪಡಿಸುತ್ತಿವೆ. ಅವುಗಳಲ್ಲಿ, 139 ಇನ್ನೂ ಪ್ರಿ -ಕ್ಲಿನಿಕಲ್ ಮೌಲ್ಯಮಾಪನದಲ್ಲಿವೆ, ಉಳಿದ 26 ಮಾನವರ ಮೇಲೆ ಪರೀಕ್ಷೆಯ ವಿವಿಧ ಹಂತಗಳಲ್ಲಿವೆ, ಅವುಗಳಲ್ಲಿ ಆರು ಕ್ಲಿನಿಕಲ್ ಮೌಲ್ಯಮಾಪನದ 3 ನೇ ಹಂತವನ್ನು ತಲುಪಿದೆ.

      ರಷ್ಯಾದಲ್ಲಿ ಉತ್ಪಾದನೆಯಾಗುತ್ತಿರುವ ಲಸಿಕೆ ಮಾನವರ ಮೇಲೆ ಪರೀಕ್ಷಿಸಲಾಗುತ್ತಿರುವ 26 ಸಂಸ್ಥೆಗಳ ಲಸಿಕೆಯಲ್ಲಿ  1 ನೇ ಹಂತದಲ್ಲಿದೆ ಎಂದು ಪಟ್ಟಿ ಮಾಡಲಾಗಿದೆ. 

          ಲಸಿಕೆ ಯೋಜನೆಗೆ ಹಣಕಾಸು ಒದಗಿಸುವ ರಷ್ಯಾದ ನೇರ ಹೂಡಿಕೆ ನಿಧಿಯ ಮುಖ್ಯಸ್ಥ ಕಿರಿಲ್ ಡಿಮಿಟ್ರಿವ್, 3 ನೇ ಹಂತದ ಪ್ರಯೋಗಗಳು ಬುಧವಾರದಿಂದ ಪ್ರಾರಂಭವಾಗಲಿವೆ, ಕೈಗಾರಿಕಾ ಉತ್ಪಾದನೆಯನ್ನು ಸೆಪ್ಟೆಂಬರ್‌ನಿಂದ ನಿರೀಕ್ಷಿಸಲಾಗಿದೆ ಮತ್ತು 20 ದೇಶಗಳು ಒಂದು ಬಿಲಿಯನ್‌ಗಿಂತ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ನೀಡುವಂತೆ ಬೇಡಿಕೆ ಇಟ್ಟಿದೆ ಎಂದು ಹೇಳಿದ್ದಾರೆ.

                ಸ್ಟ್ಯಾಂಪ್ ಫಾರ್ ಕ್ವಾಲಿಟಿ:

        "ಪ್ರತಿ ದೇಶವು ರಾಷ್ಟ್ರೀಯ ನಿಯಂತ್ರಕ ಏಜೆನ್ಸಿಗಳನ್ನು ಹೊಂದಿದ್ದು ಅದು ತನ್ನ ಪ್ರದೇಶದಲ್ಲಿ ಲಸಿಕೆಗಳು ಅಥವಾ ಔಷಧಗಳನ್ನು ಅನುಮೋದಿಸುತ್ತದೆ. ಡಬ್ಲ್ಯುಎಚ್‌ಒ  ಲಸಿಕೆಗಳಿಗೆ, ಔಷಧಗಳಿಗೆ  ಪ್ರಿ ಕ್ವಾಲಿಫಿಕೇಷನ್ ಪ್ರಕ್ರಿಯೆಯನ್ನು ಹೊಂದಿದೆ. ತಯಾರಕರು ಡಬ್ಲ್ಯುಎಚ್‌ಒ  ಪ್ರಿ ಕ್ವಾಲಿಫಿಕೇಷನ್ ಹೊಂದಲು ಕೇಳುತ್ತಾರೆ ಏಕೆಂದರೆ ಇದು ಒಂದು ರೀತಿಯ ಕ್ವಾಲಿಟಿ ಸ್ಟ್ಯಾಂಪ್. ಇದನ್ನು ಪಡೆಯಲು, ಕ್ಲಿನಿಕಲ್ ಪ್ರಯೋಗಗಳ ಮೂಲಕ ಸಂಗ್ರಹಿಸಲಾದ ಅಗತ್ಯವಿರುವ ಎಲ್ಲಾ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ದತ್ತಾಂಶಗಳ ವಿಮರ್ಶೆ ಮತ್ತು ಮೌಲ್ಯಮಾಪನ ಅಗತ್ಯ. "

          ಸಾಂಕ್ರಾಮಿಕ ರೋಗವು ಲಸಿಕೆ ಮೂಲಕ ಗುಣಮುಖವಾಗಲು  ಧನಸಹಾಯ ಮತ್ತು ಸಂಶೋಧನೆ ಕ್ಷೇತ್ರಕ್ಕೆ ವಿಶ್ವಾದ್ಯಂತ ಶತಕೋಟಿ ರು. ಹರಿದುಬರುತ್ತಿದೆ. "ಹಲವಾರು ಸಂಸ್ಥೆಗಳು  ಲಸಿಕೆ ಅಭಿವೃದ್ಧಿ ಗಾಗಿ ಮುಂದೆ ಬಂದಿದ್ದು ಅದರಿಂದ ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ ಮತ್ತು ನಾವು ಯಾವಾಗಲೂ ಹೇಳುತ್ತಿದ್ದಂತೆ, ಈ ಕೆಲವು ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗುತ್ತಿದೆ ಎಂದು ನಾವು ಭಾವಿಸುತ್ತೇವೆ" ಎಂದು ಜಸರೆವಿಕ್ ಹೇಳಿದರು.

      ಇದೇ ವೇಳೆ ಅವರು ಲಸಿಕೆ ತಯಾರಿಯಲ್ಲಿನ ಪ್ರಗತಿಯ ವೇಗ ಹೆಚ್ಚಳವು ರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುವುದು ಎಂದು ಅರ್ಥವಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries