ಕಾಸರಗೋಡು: ಜಿಲ್ಲೆಯ ಕ್ಲಸ್ಟರ್-ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳ ಸಹಿತ ಯಾವುದೇ ವಿಧದ ಕಲೆಕ್ಷನ್ ಏಂಜೆಂಟರಿಗೆ ಚಟುವಟಿಕೆ ನಡೆಸಲು ಅನುಮತಿಯಿಲ್ಲ ಎಂದು ಸಭೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಉಳಿದ ಪ್ರದೇಶಗಳಲ್ಲಿ ಈ ಚಟುವಟಿಕೆ ನಡೆಸುವ ಏಜೆಂಟರು ಮಾಸ್ಕ್, ಗ್ಲೌಸ್, ಸಾನಿಟೈಸರ್ ಇತ್ಯಾದಿಗಳನ್ನು ಕಡ್ಡಾಯವಾಗಿ ಬಳಸಬೇಕು. ಆಯಾ ಸಂಸ್ಥೆಗಳ ಮುಖ್ಯಸ್ಥರು ಈ ಬಗ್ಗೆ ಖಚಿತತೆ ಮೂಡಿಸಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆಟೋರಿಕ್ಷಾ ಸಂಚಾರಕ್ಕೆ ನಿಷೇಧ ಹೇರದೇ ಇದ್ದರೂ, ಕ್ಲಸ್ಟರ್-ಕಂಟೈ ನ್ಮೆಂಟ್ ಝೋನ್ ಗಳ ಮೂಲಕ ಹಾದು ಹೋಗಬಹುದೇ ವಿನಃ ಪಾಕಿರ್ಂಗ್, ಪ್ರಯಾಣಿಕರ ಹೇರಿಕೆ, ಇಳಿಸುವಿಕೆ ಸಲ್ಲದು ಎಂದು ತಿಳಿಸಲಾಗಿದೆ.
ಸಾರ್ವಜನಿಕರು ಹಾರ್ಬರ್ ಗೆ ಪ್ರವೇಶ ನಿಷೇಧ:
ಸಾರ್ವಜನಿಕರು ಹಾರ್ಬರ್ ಗೆ ಪ್ರವೇಶ ನಡೆಸಕೂಡದು. ರಖಂ ವ್ಯಾಪಾರಿಗಳಲ್ಲದೆ, ಚಿಲ್ಲರೆ ವ್ಯಾಪಾರಿಗಳಿಗೆ ಇಲ್ಲಿ ಪ್ರವೇಶ ಇರುವುದಿಲ್ಲ. ರಾಜ್ಯ ಸರಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಇಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂಬ ಬಗ್ಗೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಖಚಿತತೆ ಮೂಡಿಸಬೇಕು ಎಂದು ಸಭೆ ಆದೇಶಿಸಿದೆ.
ಕಂಟೈ ನ್ಮೆಂಟ್ ಝೋನ್ಗಳ ನಿಗದಿ ಸಂಬಂಧ ಪೆÇಲೀಸರು ನಿಖರ ಸಹಕಾರ ನೀಡಬೇಕು. ಆರೋಗ್ಯ ಇಲಾಖೆ ನೀಡುವವರದಿಯ ಹಿನ್ನೆಲೆಯಲ್ಲಿ ಕಂದಾಯ-ಪೆÇಲೀಸ್ ಇಲಾಖೆಗಳು ತಪಾಸಣೆ ನಡೆಸಿ ನಂತರವಷ್ಟೇ ಕಂಟೈ ನ್ಮೆಂಟ್ ಝೋನ್ ಗಳ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಡಿ.ವೈ.ಎಸ್.ಪಿ. ಮೈಕಲ್ ಸೆಬಾಸ್ಟಿನ್, ಜಿಲ್ಲಾ ವಾರ್ಯಾಧಿಕಾರಿ ಮಧುಸೂದನನ್ ಎಂ., ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.