ಮಧೂರು: ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಕನ್ನಡ ಗ್ರಾಮದ ಆಶ್ರಯದಲ್ಲಿ ಅಯೋಧ್ಯೆಯಲ್ಲಿ ಕರ ಸೇವೆಗೆ ತೆರಳಿದ್ದ ಕಾಸರಗೋಡಿನ ಕರ ಸೇವಕರಿಗೆ ಗೌರವಾಭಿನಂದನೆ ಕಾರ್ಯಕ್ರಮ ಬುಧವಾರ ನಡೆಯಿತು.
ಕರ ಸೇವಕರಾದ ದಿನೇಶ್ ಪಾರೆಕಟ್ಟೆ, ಕೇಸರಿ ರವಿ, ಜಯಚಂದ್ರ ಪಾರೆಕಟ್ಟೆ, ಗೋಪಾಲಕೃಷ್ಣ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಕಾಸರಗೋಡು ನಗರಸಭಾ ಸದಸ್ಯ ಶಂಕರ್ ಕೆ. ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುರಳಿ ಪಾರೆಕಟ್ಟೆ, ಕುಶಲ, ಅಮಿತ್, ಶೇಖರ್, ರಕ್ಷಿತ್, ಲೋಹಿತ್, ವಿನೋದ್‍ರಾಜ್, ಹರೀಶ, ಕಾವ್ಯ, ಜಯರಾಮ, ಕೃಪಾನಿಧಿ, ವಿನಯ, ರಾಜೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.