ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಬಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿ ಮಂಜೇಶ್ವರ ಖಂಡ ಸಮೀತಿಯ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯನ್ನ ಹೊಸಂಗಡಿಯಲ್ಲಿರುವ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಲಯ ಪ್ರೇರಣಾದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಧ್ವಜಾರೋಹಣ ಕಾರ್ಯಕ್ರಮವನ್ನು ಲಕ್ಷ್ಮಣ್ ಭಕ್ತ ಮಂಜೇಶ್ವರ ನೆರವೇರಿಸಿ, ಶ್ರೀ ರಾಮ ದೇವರಿಗೆ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಅಖಂಡ ಭಾರತ ಸಂಕಲ್ಪವನ್ನು ಶ್ರೀರಾಮ ದೇವರಿಗೆ ಭಜನಾ ಸಂಕೀರ್ತನೆ ನಡೆಯಿತು. ವಿಶ್ವಹಿಂದು ಪರಿಷತ್ ಸ್ಥಾಪನ ದಿನಾಚರಣೆಯನ್ನು ಈ ಸಂದರ್ಭ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಒಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ. ನವೀನ್ ರಾಜ್ ಕೆ.ಜೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಶೈಲೇಶ್ ಅಂಜರೆ, ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಸುರೇಶ್ ಶೆಟ್ಟಿ ಪರಂಕಿಲ, ವಿಶ್ವ ಹಿಂದೂ ಪರಿಷತ್ ಮೀಂಜ ಖಂಡ ಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ಅಖಂಡ ಭಾರತ ಸಂಕಲ್ಪ ದಿನದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ವಿದ್ಯಾರ್ಥಿ ಪ್ರಮುಖ ಪುರುಷೋತ್ತಮ ಪ್ರತಾಪನಗರ ಬೌದ್ಧಿಕ್ ನೀಡಿದರು.