ನವದೆಹಲಿ: ಮಿಲಿಟರಿ ಕ್ಷೇತ್ರದ ಅಗತ್ಯವನ್ನು ಪೂರೈಸಲು ಭಾರತವು ವಿದೇಶಿ ಸರ್ಕಾರಗಳು ಮತ್ತು ಸಾಗರೋತ್ತರ ಸರಬರಾಜುದಾರರನ್ನು ಅವಲಂಬಿಸುವ ಕಾಲ ಮುಗಿದಿದೆ, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಇತರ ಕ್ಷೇತ್ರಗಳಿಗಿಂತ ಹೆಚ್ಚು ನಿರ್ಣಾಯಕವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ಹಲವಾರು ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಆರ್ಡ್‌ನೆನ್ಸ್ ಫ್ಯಾಕ್ಟರಿ ಮಂಡಳಿಯು ಹೊರತಂದ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ನಂತರ ಸಿಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
"ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಭದ್ರತೆಯು ಅದರ ಮೊದಲ ಆದ್ಯತೆಯಾಗಿದೆ. ತಮ್ಮನ್ನು ರಕ್ಷಿಸಿಕೊಳ್ಳಲು ಸಮರ್ಥವಾಗಿರುವ ರಾಷ್ಟ್ರಗಳು ಜಾಗತಿಕ ಮಟ್ಟದಲ್ಲಿ ತಮ್ಮ ಬಲವಾದ ಗುರುತನ್ನು ಮೂಡಿಸಲು ಸಮರ್ಥವಾಗಲಿದೆ ಎನ್ನುವುದು ನಮಗೆಲ್ಲಾ ಅರಿವಿದೆ. "ಸಿಂಗ್ ಹೇಳಿದರು.
"ನಮ್ಮ ರಕ್ಷಣಾ ಅಗತ್ಯಗಳನ್ನು ಪೂರೈಸಲು ನಾವು ವಿದೇಶಿ ಸರ್ಕಾರಗಳು, ವಿದೇಶಿ ಪೂರೈಕೆದಾರರು ಮತ್ತು ವಿದೇಶಿ ರಕ್ಷಣಾ ಉತ್ಪನ್ನಗಳನ್ನು ಅವಲಂಬಿಸಬೇಕಾದ ಕಾಲ ಮುಗಿದಿದೆ, ಬಲವಾದ ಮತ್ತು ಆತ್ಮನಿರ್ಭರ್ ಭಾರತ್‌ನ ಉದ್ದೇಶವಾಗಿದ್ದು ಅದು ನಮ್ಮ ಭಾವನೆಗೆ ಹೊಂದುವುದಿಲ್ಲ "
ಜಾಗತಿಕವಾಗಿ ಭಾರತ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶ. ಅಂದಾಜಿನ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಸುಮಾರು 130 ಶತಕೋಟಿ ಡಾಲರ್ ಬಂಡವಾಳ ಸಂಗ್ರಹಕ್ಕಾಗಿ ಖರ್ಚು ಮಾಡುವ ನಿರೀಕ್ಷೆಯಿದೆ."ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ನಮಗೆ ಸಾಧ್ಯವಾಗದು. ಆದರೆ ಅಗತ್ಯವಿರುವ ಸಮಯದಲ್ಲಿ ಇತರ ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಇತರ ಕ್ಷೇತ್ರಗಳಿಗಿಂತ ಹೆಚ್ಚು ನಿರ್ಣಾಯಕವಾಗಿದೆ" ಎಂದು ಸಿಂಗ್ ಹೇಳಿದರು.
ಶಸ್ತ್ರಾಸ್ತ್ರ ವ್ಯವಸ್ಥೆಗಳ ಆಮದು ಪಟ್ಟಿಯನ್ನು ವರ್ಷವಾರು ವೇಳಾಪಟ್ಟಿಯಲ್ಲಿ ಸೇರ್ಪಡಿಸುವ ನಿರ್ಧಾರವನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮೇ ತಿಂಗಳಲ್ಲಿಘೋಷಿಸಿದ್ದರು, , ಆದರೆ ರಕ್ಷಣಾ ಉತ್ಪಾದನಾ ಕ್ಷೇತ್ರಕ್ಕೆ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದು ಇದರಲ್ಲಿ ಎಫ್‌ಡಿಐ ಮಿತಿಯನ್ನು ಶೇಕಡ 49 ರಿಂದ 74 ಕ್ಕೆ ಹೆಚ್ಚಿಸಲಾಗಿದ್ದು ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ 25 ಬಿಲಿಯನ್ ಅಮೆರಿಕನ್ ಡಾಲರ್ (1.75 ಲಕ್ಷ ಕೋಟಿ ರೂ.) ವಹಿವಾಟು ನಡೆಸುವ ಗುರಿಯನ್ನು ರಕ್ಷಣಾ ಸಚಿವಾಲಯ ನಿಗದಿಪಡಿಸಿದೆ, ಇದರಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ (35,000 ಕೋಟಿ ರೂ) ಮೌಲ್ಯದ ಮಿಲಿಟರಿ ಯಂತ್ರಾಂಶ ರಫ್ತು ಗುರಿ ಕೂಡಾ ಇದೆ.