ಕಾಸರಗೋಡು: ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ತಂಗಿರುವ ಉತ್ತರ ರಾಜ್ಯಗಳ ಕಾರ್ಮಿಕರ ಬಗ್ಗೆ ನೌಕರಿ ಮಾಲೀಕರು ಮತ್ತು ಅವರು ವಾಸವಾಗಿರುವ ಕಟ್ಟಡಗಳ ಮಾಲೀಕರು ಕಾಸರಗೋಡು ಸಹಾಯಕ ಕಾರ್ಮಿಕ ಅಧಿಕಾರಿ ಕಚೇರಿಗೆ ಮಾಹಿತಿ ಸಲ್ಲಿಸಬೇಕು. 9847754002 ಎಂಬ ನಂಬ್ರದ ವಾಟ್ಸ್ ಆಪ್ ಗೆ ಸಂದೇಶ ನೀಡುವ
alokasaragod@gmail.com ಎಂಬ ವಿಳಾಸಕ್ಕೆ ಈ ಮೇಲ್ ಸಲ್ಲಿಸಬಹುದು. ಹೆಸರು, ವಯಸ್ಸು, ಆಧಾರ್ಕಾರ್ಡ್ ನಂಬ್ರ, ಮೊಬೈಲ್ ನಂಬ್ರ, ರಾಜ್ಯ,ಈಗ ವಾಸವಾಗಿರುವ ಜಾಗದ ವಿಳಾಸ ಇತ್ಯಾದಿ ಮಾಹಿತಿ ನೀಡಬೇಕು. ಮಾಹಿತಿ ಸಲ್ಲಿಕೆಯಾದ ಕಾರ್ಮಿಕರಿಗೆ ರಾಜ್ಯ ಸರಕಾರದ ಉಚಿತ ಆಹಾರ ಕಿಟ್ ಲಭಿಸಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 04994-257850.