ಕಾಸರಗೋಡು: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಕ್ಯಾಂಟೀನ್ ಚಟುವಟಿಕೆ ಆರಂಭಿಸಿತು. ಕಾಸರಗೋಡು ಸಿವಿಲ್ ಸ್ಟೇಷನ್ ವಠಾರದ ಅತಿದೊಡ್ಡ ಕ್ಯಾಂಟೀನ್ ಇದಾಗಿದ್ದು, ಜಿಲ್ಲಾ ಕುಟುಂಬಶ್ರೀ ಮುಖಾಂತರ ಚಟುವಟಿಕೆ ನಡೆಸುವ ಈ ಸಂಸ್ಥೆಗೆ ವನಿತಾ ಕ್ಯಾಂಟೀನ್ ಕೆಫೆ ಕುಟುಂಬಶ್ರೀ ಎಂದು ಹೆಸರಿಸಲಾಗಿದೆ.
ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದೊಂದಿಗೆ ಈ ಭೋಜನಾಲಯ ಆರಂಭಗೊಂಡಿದೆ. ಏಕಕಾಲಕ್ಕೆ ಸುಮಾರು ನೂರು ಮಂದಿ ಕುಳಿತು ಆಹಾರ ಸೇವಿಸಬಹುದಾದ ವ್ಯವಸ್ಥೆ ಇಲ್ಲಿದೆ. ಕಿರು ಸಭಾಂಗಣ, ವಿಶ್ರಾಂತಿ ಕೊಠಡಿಗಳೂ ಇವೆ. 50 ಲಕ್ಷ ರೂ. ವೆಚ್ಚದಲ್ಲಿ ಈ ನೂತನ ಕಟ್ಟಡ ನಿರ್ಮಿಸಲಾಗಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್, ವಿವಿಧ ಬ್ಲೋಕ್ ಪಂಚಾಯಿತಿ ಅಧ್ಯಕ್ಷರುಗಳಾದ ಎಂ.ಗೌರಿ, ಓಮನಾ ರಾಮಚಂದ್ರನ್, ಸಿ.ಎಚ್.ಮಹಮ್ಮದ್ ಕುಞÂ ಚಾಯಿಂಡಡಿ, ಎ.ಕೆ.ಎಂ.ಅಶ್ರಫ್, ಜಿಲ್ಲಾಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್, ವಿವಿಧ ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.