ಕಾಸರಗೋಡು: ಕಾಸರಗೋಡು ಜಿಲ್ಲೆಯ ಕ್ರೀಡಾ ವಲಯದಲ್ಲಿ ಭರವಸೆ ಮೂಡಿಸುತ್ತಿರುವ ವಿದ್ಯಾರ್ಥಿಗಳಿಗೆ ಪ್ಲಸ್-ವನ್ ತರಗತಿಗೆ ಪ್ರವೇಶಾತಿ ಅವಕಾಶಗಳಿದ್ದು, ಆನ್ ಲೈನ್ ಮೂಲಕದ ನೋಂದಣಿ ಬುಧವಾರ ಆರಂಭಗೊಂಡಿದೆ.
ಕೋವಿಡ್ ಪ್ರತಿರೋಧ ಸಂಹಿತೆಗಳ ಹಿನ್ನೆಲೆಯಲ್ಲಿ ಕ್ರೀಡಾ ಕೋಟಾ ಅಡ್ಮಿಷನ್ ಗೆ ಆನ್ ಲೈನ್ ಮೂಲಕ ಆ.17ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ವೆಬ್ ಸೈಟ್ :www.hscap.kerala.gov.in: ದಾಖಲೆಗಳನ್ನು ಅಪ್ ಲೋಡ್ ನಡೆಸಿದ ನಂತರ ಲಭಿಸುವ ಮಾಹಿತಿಯ ಪ್ರಿಂಟ್ ಔಟ್ ಪಡೆದು ಇತರ ದಾಖಲೆಗಳ ಸಹಿತ ಸ್ಕ್ಯಾನ್ ನಡೆಸಿ ಕಾಸರಗೋಡು ಜಿಲ್ಲಾ ಕ್ರೀಡಾ ಮಂಡಳಿಗೆ ಸಲ್ಲಿಸಬೇಕಿದೆ. ಈ-ಮೇಲ್ ::ksdplusonespqta@gmail.com. ದೂರವಾಣಿ ನಂಬ್ರವನ್ನೂ ಈ ವೇಳೆ ನಮೂದಿಸಬೇಕು.
ಜಿಲ್ಲಾ ಕ್ರೀಡಾ ಮಂಡಳಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಸ್ಕೋರ್ ಕಾರ್ಡ್ ಈ -ಮೇಲ್ ಮೂಲಕ ಕಳುಹಿಸಲಾಗುವುದು. ತದನಂತರ ಆ.18 ವರೆಗೆ ಸ್ಪೋಟ್ರ್ಸ್ ಕೋಟಾ ಪ್ರವೇಶಾತಿಗೆ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ವೇರಿಫಿಕೇಷನ್ ಗಾಗಿ ವಿದ್ಯಾರ್ಥಿಗಳು ಜಿಲ್ಲಾ ಕ್ರೀಡಾ ಮಂಡಳಿಗೆ ನೇರವಾಗಿ ಹಾಜರಾಗಬೇಕಿಲ್ಲ. ಪ್ರವೇಶಾತಿ ಲಭಿಸಿದ ನಂತರ ಅಸಲಿ ಅರ್ಹತಾಪತ್ರಗಳ ಸಹಿತ ಶಾಲೆಗೆ ಹಾಜರಾದರೆ ಸಾಕು.