ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೋವಿಡ್ ಸಂಕಷ್ಟದ ನಡುವೆಯೂ ಓಣಂ ಅಂಗವಾಗಿ ಕರ್ನಾಟಕದ ವಿವಿಧೆಡೆಯಿಂದ ಕಾಸರಗೋಡು ನಗರಕ್ಕೆ ಹೂವಿನ ವ್ಯಾಪಾರಿಗಳು ಆಗಮಿಸಿದ್ದರೂ, ಗ್ರಾಹಕರ ಕೊರತೆ ಎದುರಾಗಿತ್ತು. ಇತರ ರಾಜ್ಯಗಳಿಂದ ಆಗಮಿಸುವ ವ್ಯಾಪಾರಿಗಳು ಕೋವಿಡ್ ತಪಾಸಣೆಯೊಂದಿಗೆ ಸರ್ಟಿಫಿಕೇಟ್ ಹಾಜರುಪಡಿಸುವುದೂ ಕಡ್ಡಾಯವಾಗಿತ್ತು.