ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದಾಗ ಕೇರಳದಲ್ಲಿ ಹೆಚ್ಚು ಪ್ರಚಾರಕ್ಕೆ ಬಂದವರು ದಕ್ಷ ಪೆÇಲೀಸ್ ಅಧಿಕಾರಿ ಕಣ್ಣೂರು ಜಿಲ್ಲಾ ಪೋಲೀಸ್ ವರಿಷ್ಠ, ಕರ್ನಾಟಕ ಮೂಲದ ಯತೀಶ್ ಚಂದ್ರ. ಸರ್ಕಾರದ ನಿಯಮಾವಳಿಗಳನ್ನು ಮುಲಾಜುಗಳಿಲ್ಲದೆ ಜಾರಿಗೊಳಿಸುವಲ್ಲಿ ಅವರು ವಹಿಸುವ ಅತಿಯಾದ ಶ್ರದ್ದೆ ತೀವ್ರ ವಿರೋಧಕ್ಕೆ ಕಾರಣವಾಗಿ ಖ್ಯಾತಿಪಡೆದರು. ಆದರೆ ಇಂದು ರಾಜ್ಯಾದ್ಯಂತ ಕೋವಿಡ್ ಕರಾಳ ಹಸ್ತದೊಂದಿಗೆ ವ್ಯಾಪಿಸುತ್ತಿರುವಾಗ ಮತ್ತೆ ಅದೇ ಯತೀಶ ಚಂದ್ರರ ಯೋಜನೆಗಳನ್ನೇ ಜಾರಿಗೆ ತರಲಾಗುತ್ತಿರುವುದು ಆಶ್ಚರ್ಯಕರ.
ಕೋವಿಡ್ ವಿವಾದ:
ಲಾಕ್ ಡೌನ್ ಸೂಚನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಣ್ಣೂರು ಎಸ್‍ಪಿ ಯತೀಶ್ ಚಂದ್ರ ಅವರು ಜನಸಾಮಾನ್ಯರಿಂದ ತೊಡಗಿ ವಿಐಪಿಗಳವರೆಗೂ ಕಠಿಣ ಕ್ರಮ ಜರಗಿಸಿದ್ದರು. ಒಂದು ಸಂದರ್ಭ ಅಂಗಡಿ ಎದುರು ವೃಥಾ ತಿರುಗಾಡುತ್ತಿದ್ದವರನ್ನು ಅಮಾನುಷವಾಗಿ ಶಿಕ್ಷೆಗೊಳಪಡಿಸಿದರೆಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತು. ಅಂಗಡಿ ಮುಗ್ಗಟ್ಟೊಂದರ ಎದುರಿದ್ದ ಜನರ ಮೇಲೆ ಹಲ್ಲೆ ನಡೆಸಿ ವಿವಾದ ಸೃಷ್ಟಿಸಿದ್ದಾರೆ ಎನ್ನಲಾಗಿತ್ತು. ಕಣ್ಣೂರಿನ ಅಝಿಕಲ್‍ನಲ್ಲಿರುವ ಅಂಗಡಿಯ ಮುಂದೆ ಜಮಾಯಿಸಿದವರ ಮೇಲೆ ಎಸ್‍ಪಿ ಶಾಲಾ ವಿದ್ಯಾರ್ಥಿಗಳಿಗೆ ನೀಡುವಂತೆ ಭಕ್ಸಿ ಶಿಕ್ಷೆ ನೀಡಿರುವುದು ಜಾಲತಾಣಗಳಲ್ಲಿ ಪರ-ವಿರೋಧ ಕ್ಕೆ ಕಾರಣವಾಗಿತ್ತು.
ಮುಂದೆ ಏನಾಯಿತು:
ಯತೀಶ್ ಚಂದ್ರ ಅವರ ಕ್ರಮದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನಾಗರಿಕ ಹಕ್ಕುಗಳನ್ನು ಅವಮಾನಿಸಿದ ಮತ್ತು ವೈಯಕ್ತಿಕವಾಗಿ ಉಲ್ಲಂಘಿಸಿದ್ದಕ್ಕಾಗಿ ಯತೀಶ್ ಚಂದ್ರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶಾಸಕ ಕೆ.ಎಂ ಶಾಜಿ ಎನ್ನುವವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಸಂಬಂಧ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ. ಆಯೋಗದ ಸದಸ್ಯ ಪಿ ಮೋಹನ್‍ದಾಸ್ ಅವರು ನೇರವಾಗಿ ತನಿಖೆ ನಡೆಸುವಂತೆ ರಾಜ್ಯ ಪೆÇಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದರು.
ಯತೀಶ್ ಚಂದ್ರನ ಕ್ರಮ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೃಹ ಕಾರ್ಯದರ್ಶಿಯಿಂದ ವರದಿ ಕೋರಿದ್ದಾರೆ. ಪೆÇಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಚಿತ್ರಣಕ್ಕೆ ಕಳಂಕ ತರುತ್ತಿರುವುದರಿಂದ ಇಂತಹ ಘಟನೆಗಳನ್ನು ಪುನರಾವರ್ತಿಸಬಾರದು ಎಂದು ಸಿಎಂ ಹೇಳಿದ್ದರು. ಇದರ ಬೆನ್ನಲ್ಲೇ ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಯತೀಶ್ ಚಂದ್ರ ಅವರಿಂದ ವಿವರಣೆ ಕೋರಿದ್ದರು.
ಕಣ್ಣೂರಿನಲ್ಲಿ ಬದಲಾವಣೆ:
ಕೋವಿಡ್ ನಂತರ ಪೆÇಲೀಸ್ ಮತ್ತು ಆರೋಗ್ಯ ಇಲಾಖೆಯೊಂದಿಗೆ ನಿಯಂತ್ರಣ ಕ್ರಮದಂಗವಾಗಿ ಯತೀಶ್ ಚಂದ್ರ ಅವರದು ದೊಡ್ಡ ಕೊಡುಗೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕತಡೆಯ ಉಸ್ತುವಾರಿಯನ್ನು ಸ್ವತಃ ವಹಿಸಿ ಪೆÇಲೀಸರಿಗೆ ಸ್ಪಷ್ಟ ಮಾರ್ಗದರ್ಶನ ಸಹಿತ ಕೋವಿಡ್ ಬಾಧಿಸಿ ಕಾನೂನು ಉಲ್ಲಂಘಿಸುವವರ ವರೆಗೆ ಎಲ್ಲವನ್ನೂ ತ್ವರಿತವಾಗಿ ಕಂಡುಹಿಡಿಯಲು ಪ್ರಾರಂಭಿಸಿದರು. ಕಣ್ಣೂರಿನಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ಪೆÇಲೀಸರಿಗೆ ತಮ್ಮ ಕರ್ತವ್ಯವನ್ನು ಸಂಪೂರ್ಣವಾಗಿ ವಹಿಸಲಾಗಿದೆ.
ಕಣ್ಣೂರಿನ ಬಳಿಕ ಇದೇ ಮಾದರಿಯನ್ನು ಕಾಸರಗೋಡಿನಲ್ಲಿ ಜಾರಿಗೆ ತರಲಾಯಿತು. ಕೋವಿಡ್ ಸಂಪರ್ಕ ಪಟ್ಟಿಯ ಆವಿಷ್ಕಾರದಿಂದ ಹಿಡಿದು ಕಂಟೋನ್ಮೆಂಟ್ ವಲಯದ ನಿರ್ಣಯದವರೆಗೆ ಪೆÇಲೀಸರು ಇಲ್ಲಿ ಉಸ್ತುವಾರಿ ವಹಿಸುತ್ತಾರೆ. ಜಿಲ್ಲಾ ಪೆÇಲೀಸ್ ಮುಖ್ಯಸ್ಥ ಜಿ.ಎಚ್.ಯತೀಶ್ ಚಂದ್ರರ ನಿಯಂತ್ರಣ ಯತ್ನಗಳು ಶ್ಲಾಘನೆಗೊಳಗಾಯಿತು.
ಕಣ್ಣೂರು ಮಾದರಿ ಬಿಡುಗಡೆ:
ಕಣ್ಣೂರು ತಳಿಪರಂಬ ಉಪವಿಭಾಗದಲ್ಲಿರುವ ಮನೆ ಕ್ಯಾರೆಂಟೈನ್‍ನ ಮನೆಗಳಿಗೆ ಜಿಲ್ಲಾ ಪೆÇಲೀಸ್ ಮುಖ್ಯಸ್ಥ ಯತೀಶ್ ಚಂದ್ರ ಅವರ ಭೇಟಿಯೊಂದಿಗೆ ಇದು ಅವರ ದೈನಂದಿನ ಚಟುವಟಿಕೆ ಆರಂಭಗೊಳ್ಳುತ್ತದೆ. ಕಣ್ಣೂರು ಪಟ್ಟಣ, ವಳಪಟ್ಟಣ, ತಳಿಪರಂಬ ಮತ್ತು ಪರಿಯಾರಂ ಪೆÇಲೀಸ್ ಠಾಣೆ ವ್ಯಾಪ್ತಿಯೊಳಗೆ ಅವರು ನಿರಂತರ ಸಂಪರ್ಕ-ಸಂದರ್ಶನದ ಮೂಲಕ ಅಡ್ಡಾಡುವವರಿಗೆ ದುಸ್ವಪ್ನವಾಗಿ ಇದೀಗ ಪರಿಣಮಿಸಿದ್ದಾರೆ.
ಎಸ್‍ಪಿ ಕೇವಲ ಕೋವಿಡ್ ಕಣ್ಗಾವಲಿನಲ್ಲಿರುವವರ ಮನೆಗಳಿಗೆ ಮಾತ್ರ ಭೇಟಿ ನೀಡುವುದಲ್ಲದೆ, ಮನೆಯ ಸಂಪರ್ಕತಡೆಯನ್ನು ಹೇಗೆ ಉಳಿಸಿಕೊಳ್ಳಬೇಕು ಮತ್ತು ಅದರ ಕುರಿತು ಸಂಕ್ಷಿಪ್ತ ವಿವರಣೆಗಳೊಂದಿಗೆ ವೀಡಿಯೊವನ್ನು ಅವರಿಗೆ ನೀಡುತ್ತಾರೆ. ರೋಗವನ್ನು ಆತ್ಮವಿಶ್ವಾಸದಿಂದ ಎದುರಿಸಲು ಜನರಿಗೆ ಬಲತುಂಬುತ್ತಾರೆ. ಇದಲ್ಲದೆ, ಕಣ್ಣೂರು ಜಿಲ್ಲಾ ಪೆÇಲೀಸರು ಸಿದ್ಧಪಡಿಸಿದ 'ರೆಡ್ ಕಾರ್ಡ್' ಅನ್ನು ಮನೆ ಸಂಪರ್ಕತಡೆಯನ್ನು ಹೊಂದಿರುವವರ ಆವರಣದಲ್ಲಿ ಇರಿಸಲು ನಿರ್ದೇಶಿಸುವುದರ ಹಿಂದಿನ ಪ್ರೇರಕ ಶಕ್ತಿ ಇದೇ ಎಸ್.ಪಿ. ಸ್ಥಳೀಯರಿಗೆ ಅದರ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಯಾರಾದರೂ ಕೋವಿಡ್ ಬಾಧಿತರು, ನಿರೀಕ್ಷಣೆಯಲ್ಲಿರುವವರು ಸಾರ್ವಜನಿಕವಾಗಿ ಕಂಡುಬಂದಲ್ಲಿ, ಅಡ್ಡಾಡುತ್ತಿದ್ದಲ್ಲಿ ಕೇರಳ ಸಾಂಕ್ರಾಮಿಕ ರೋಗದ ಸುಗ್ರೀವಾಜ್ಞೆ 2020 ರ ಸೆಕ್ಷನ್ 5 ಅಥವಾ 6 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕಂಟೈನ್ಮೆಂಟ್ ವಲಯವನ್ನು ಪೆÇಲೀಸರು ನಿರ್ಧರಿಸುತ್ತಾರೆ. ಫೆÇೀನ್ ಕರೆ ವಿವರಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಿ ಪೆÇಲೀಸರು ಸಂಪರ್ಕ ಪಟ್ಟಿಯನ್ನು ವೈಜ್ಞಾನಿಕವಾಗಿ ಗುರುತಿಸಿ ಆರೋಗ್ಯ ಇಲಾಖೆಗೆ ಒಪ್ಪಿಸುತ್ತಾರೆ. ಅವರು ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ಇದು ಕೆಲಸವನ್ನು ಸುಲಭಗೊಳಿಸುವುದಲ್ಲದೆ, ಆರೋಗ್ಯ ಇಲಾಖೆಯು ರೋಗಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಹ ಅವಕಾಶ ನೀಡುತ್ತದೆ. ಕಣ್ಣೂರುಗಿಂತ ಹೆಚ್ಚಿನ ರೋಗಿಗಳಿರುವ ಕಾಸರಗೋಡಲ್ಲೂ ಇಂತಹ ಕ್ರಮಗಳ ಅಗತ್ಯವಿದೆಯೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಕಾಸರಗೋಡಿಗೂ ಯತೀಶ್ ಚಂದ್ರರ ಮಾದರಿ ಕ್ರಮಗಳನ್ನು ಬಳಿಕ ಅಳವಡಿಸಲಾಯಿತು.