HEALTH TIPS

ಗೋವಾ ವಿಮೋಚನೆ ಕ್ರಾಂತಿಯಿಂದ ಸಾಮಾಜಿಕ ಕಾರ್ಯದ ವರೆಗಿನ ವ್ಯಾಪ್ತಿ: ಸ್ವಾತಂತ್ರ್ಯ ಹೋರಾಟದ ಯೋಧನಿಗೆ ನಾಡಿನ ಗೌರವಾರ್ಪರಣೆ

    

            ಕಾಸರಗೋಡು: ಕ್ಯಾಪ್ಟೆನ್ ಕೆ.ಎಂಕೆ. ನಂಬ್ಯಾರ್ ಎಂದೇ ಪ್ರಸಿದ್ಧರಾಗಿರುವ ಕೆ.ಎಂ.ನಂಬ್ಯಾರ್ ಗಡಿನಾಡು ಕಾಸರಗೋಡಿನ ಹೃದಯಭಾಗದಲ್ಲೇ ನೆಲೆಸಿದ್ದಾರೆ ಎಂಬುದು ನಾಡಿಗೊಂದು ಹಿರಿಮೆ. 

                   ಶಾಲಾ ದಿನಗಳಲ್ಲೇ ಸಿಡಿದಿದ್ದ ಕ್ರಾಂತಿಕಾರಿ:

   ಬ್ರಿಟಿಷ್ ಸಾಮಾಜ್ಯದ ವಿರುದ್ಧ ಸ್ವರಾಜ್ಯಕ್ಕಾಗಿ ಹೋರಾಟ ನಡೆಸಿ, ಅವರ ಫಿರಂಗಿ ಗುಂಡಿನ ಬೆದರಿಕೆಗೆ ಜಗ್ಗದೆ ಎದೆಯೊಡ್ಡಿ ನಿಂತಿದ್ದ ಅಂದಿನ ಹೋರಾಟ ನಾಯಕರಲ್ಲಿ ಒಬ್ಬರು ಕ್ಯಾಪ್ಟೆನ್ ನಂಬ್ಯಾರ್ ಅವರು. ಇಡೀ ದೇಶಕ್ಕೆ ಹತ್ತಿಕೊಂಡಿದ್ದ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಅಂದಿನ ಯುವಕರಾಗಿದ್ದ ಇವರಿಗೂ ತಗುಲಿಕೊಂಡಿದ್ದರೆ ಅದು ಅತಿಯೋಕ್ತಿಯಾಗಿರಲಿಲ್ಲ. ಕಾಸರಗೋಡಿನಂಥಾ ಪುಟ್ಟ ಪ್ರದೇಶವನ್ನು ಪ್ರತಿನಿಧಿಸಿ, ದೇಶದ ಸ್ವಾಂತ್ರ್ಯ ಲಭ್ಯತೆಗಾಗಿ ಉರಿಯುವ ಯಜ್ಞಕ್ಕೆ ಸಮಿಧೆಯಂತೆ ಉರಿಯ ಹೊರಟವರಲ್ಲಿ ತಾವೂ ಒಬ್ಬರಾಗಿದ್ದರು. 

    ಕಾಞಂಗಾಡ್ ಸರಕಾರಿ ಶಾಲೆಯಲ್ಲಿ ಕಲಿಕೆ ನಡೆಸುತ್ತಿದ್ದ ವೇಳೆ ಸ್ವಾತಂತ್ರ್ಯ ಸಂಗ್ರಮದ ಬಿಸಿ ಮೈಗೂಡಿಸಿಕೊಂಡಿದ್ದ ನಂಬ್ಯಾರ್ ಅವರು ಅದರಲ್ಲಿ ತಲ್ಲೀನರಾಗತೊಡಗಿದ್ದರು. ಗೋವಾ ವಿಮೋಚನೆ ಆಂದೋಲನದಲ್ಲಿ ನೇರವಾಗಿ ಭಾಗಿಯಾಗಲು ಹೊರಟಿದ್ದ ಕಾಸರಗೋಡಿನ 3 ಮಂದಿ ಗೆಳೆಯರೊಂದಿಗೆ ಇವರೂ ಅತ್ತ ಹೆಜ್ಜೆಹಾಕಿದ್ದರು. ಅಲ್ಲಿ ಹೋರಾಟ ನಿರತರಾಗಿದ್ದ ಕ್ರಾಂತಿಕಾರಿಗಳನ್ನು ಬಂಧಿಸಿದ್ದ ಬ್ರಿಟಿಷ್ ಸೇನೆ ಸೆರೆಮನೆಗೆ ದಬ್ಬಿ ಅಮಾನವೀಯ ಕ್ರೌರ್ಯಕ್ಕೊಳಪಡಿಸಿದ್ದ ವೇಳೆ ನಂಬ್ಯಾರ್ ಅವರೂ ಈ ವೇದನೆ ಅನುಭವಿಸಿದ್ದರು. 3 ತಿಂಗಳ ಸತತ ದಬ್ಬಾಳಿಕೆಯ ನಂತರ ಮಹಾರಾಷ್ಟ್ರ-ಗೋವಾದ ಗಡಿ ಪ್ರದೇಶದಲ್ಲಿ ಇವರನ್ನು ಬಿಡಲಾಗಿತ್ತು. ಈ ವೇಳೆ ಗಂಭೀರ ಗಾಯಗೊಂಡುಬಳಲುತ್ತಿದ್ದ ಇವರನ್ನು ಗೋವಾ ವಿಮೋಚನೆಗೆ ತೊಡಗಿಕೊಂಡಿದ್ದ ಕ್ರಾಂತಿಕಾರಿಗಳೇ ಸಂರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಒದಗಿಸಿದ್ದರು. ನಂತರ ತೆರಳಿದ ಗೆಳೆಯರೊಂದಿಗೆ ಊರಿಗೆ ಮರಳಿದ್ದ ಕ್ರಾಂತಿಕಾರಿ ನಂಬ್ಯಾರ್ ಅವರಿಗೆ ಕಾಸರಗೋಡು ಮತ್ತು ಕಾಞಂಗಾಡ್ ನಗರಗಳಲ್ಲಿ ಸಾರ್ವಜನಿಕ ಅಭಿನಂದನೆ ನಡೆದಿತ್ತು.  

     ದೇಶ ಸ್ವಾತಂತ್ರ್ಯ ಪಡೆದ ವೇಳೆ ಕಾಸರಗೋಡು ನಗರದಲ್ಲಿ ಅದೇ ಸಂದರ್ಭದಲ್ಲಿ ನಡೆದಿದ್ದ ವಿಜಯೋತ್ಸವ ಮೆರವಣಿಗೆಯ ಮುಂಚೂಣಿಯಲ್ಲಿ ರಾಷ್ಟ್ರಧ್ವಜ ಹಿಡಿದು ಪಥಸಂಚಲನ ನಡೆಸಿದ ನೇತಾರ ಇವರೇ ಆಗಿದ್ದರು.  

                ಸೇನೆಯಲ್ಲಿ ಸೇವೆ: 

    ಸ್ವಾತಂತ್ರ್ಯ ಹೋರಾಟದ ಕಿಚ್ಚು ಉಳಿಸಿಕೊಂಡೇ ಬಂದಿದ್ದ ನಂಬ್ಯಾರ್ ಅವರಿಗೆ ದೇಶದ ಸೈನ್ಯ ಸೇರುವ ಮೂಲಕ ಮತ್ತಷ್ಟು ನಾಡಿನ ಸೇವೆ ನಡೆಸುವ ಸಹಜ ಕಾಂಕ್ಷೆ ಮೂಡಿತ್ತು. ಅದೊಂದು ದಿನ ಕಾಸರಗೋಡು ನಗರ ಬಳಿಯ ಇನ್ಸ್ ಪೆಕ್ಷನ್ ಬಂಗಲೆಯಲ್ಲಿ ಸೇನೆಗಾಗಿ ರಿಕ್ರೂಟ್ ಮೆಂಟ್ ನಡೆದಿತ್ತು. ಈ ಬಗ್ಗೆ ಕುತೂಹಲ ತಳೆದು ರಿಕ್ರೂಟ್ ಮೆಂಟ್ ಪ್ರಕ್ರಿಯೆನನ್ನು ದೂರದಿಂದ ನೋಡಲೆಂದು ತೆರಳಿದ್ದ ನಂಬ್ಯಾರ್ ರಿಕ್ರೂಟ್ ಮೆಂಟ್ ನಡೆಸುತ್ತಿದ್ದ ಸೈನ್ಯದ ಹಿರಿಯ ಅಧಿಕಾರಿಯೊಬ್ಬರ ಗಮನ ಸೆಳೆದಿದ್ದರು. ನೇರವಾಗಿ ಇವರ ಬಳಿ ಬಂದದ ಅಧಿಕಾರಿ ಸೇನೆಗೆ ಸೇರುವ ಬಗ್ಗೆ ಆಹ್ವಾನ ನೀಡಿದ್ದರು. ಅವರಿಗೆ ಎರಡಾಡದೇ ನಂಬ್ಯಾರ್ ತಕ್ಷಣ ರಿಕ್ರೂಟ್ ಮೆಂಟ್ಗೆ ಸೇರಿದ್ದರು. ಅಂದು ಸೇನೆಗೆ ಸೇರಿದ್ದವರಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇವರು ಒಬ್ಬರಾಗಿದ್ದರು.    

     ನಂತರ ಭಾರತೀಯ ಸೈನ್ಯ ಸೇರಿ ಸತತ 29 ವರುಷಗಳ ಕಾಲ ದೇಶ ಸೇವೆ ಮಾಡಿ, ಕ್ಯಾಪ್ಟೆನ್ ಪದವಿಯನ್ನೂ ಪಡೆದು ನಿವೃತ್ತರಾದ ನಂತರವೂ ನಂಬ್ಯಾರ್ ಅವರ ಒಳಗಣ ಯೋಧನಿಗೆ ವಿಶ್ರಾಂತಿ ಏನೆಂದೇ ತಿಳಿದಿಲ್ಲ. 1957ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದ ನಂಬ್ಯಾರ್ ಅವರು ಸಿಕಂದರಾಬಾದ್ ನಲ್ಲಿ ತರಬೇತಿ ಪಡೆದರು. ಭಾರತ-ಚೀನಾ ಯುದ್ಧದಲ್ಲಿ ಲಡಾಕ್ ನಲ್ಲಿ, ಭಾರತ-ಪಾಕಿಸ್ತಾನ ಯುದ್ಧ ದಲ್ಲಿ ಶ್ರೀನಗರದಲ್ಲಿ ನೇರವಾಗಿ ಭಾಗಿಯಾಗಿದ್ದರು. 1985 ಡಿ.31ರಂದು ಇವರು ಸೇನೆಯಿಂದ ನಿವೃತ್ತರಾಗಿದ್ದರು.   

     ಕೇರಳದ ತಲಶ್ಶೇರಿ ಇವರ ಜನನ ನಾಡಾಗಿದ್ದರೂ, ಬೆಳೆದುದು, ಬದುಕಿದ್ದೂ ಎಲ್ಲವೂ ಕಾಸರಗೋಡು ಎಂಬ ಗಡಿನಾಡ ಮಣ್ಣಲ್ಲೇ. ಇವರ ತಂದೆ ಕಾಸರಗೋಡು ನಗರದಲ್ಲಿ ಹೋಟೆಲೊಂದನ್ನು ನಡೆಸುತ್ತಿದ್ದರು. 3ನೇ ತರಗತಿ ವರೆಗೆ  ಕಾಸರಗೋಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನಂತರ ಕಡಪ್ಪುರಂ ಮೀನುಗಾರಿಕೆ ಶಾಲೆ, ಅನ್ವಾರುಲ್ ಉಲುಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ನಂತರ ಕಾಞಂಗಾಡ್ ಸರಕಾರಿ ಶಾಲೆಯಲ್ಲಿ ಕಲಿಕೆ ನಡೆಸಿದ್ದರು. 

      ನಿವೃತ್ತಿಯ ನಂತರವೂ ಸಮಾಜಸೇವೆಯಲ್ಲಿ ಮುಂದುವರಿದ ಕ್ಯಾಪ್ಟೆನ್ ನಂಬ್ಯಾರ್ ಅವರು ಮದ್ಯ ವಿರೋಧಿ ಚಳವಳಿಗಳಲ್ಲಿ ಭಾಗವಹಿಸಿದ್ದರು. ಗಾಂಧೀಜಿ ಅವರ ಆದರ್ಶಕ್ಕೆ ಮಾರು ಹೋದ ಅವರು ಬಾಪೂ ಅವರ ಸಿದ್ಧಾಂತ ಪ್ರಚಾರಕರಾಗಿಯೂ ತೊಡಗಿಕೊಡಿದ್ದಾರೆ. ಕಾಸರಗೋಡು ಜಿಲ್ಲೆಯ ವಿವಿಧ ಸಾಂಸ್ಕøತಿಕ-ಸಾಮಾಜಿಕ ವಲಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 

         ಪ್ರಶಸ್ತಿಗಳಿಗೆ ಭಾಜನ:

   ಇವರ ಬದುಕಿನ ಸಾಧನೆಗಳಿಗಾಗಿ 1986ರಲ್ಲಿ ಅತ್ಯುತ್ತಮ ಸೈನಿಕರಿಗೆ ಲಭಿಸುವ ರಾಷ್ಟ್ರ ಪತಿ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ರಾಷ್ಟ್ರ ಮಟ್ಟದ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ಲಭಿಸಿವೆ. ಸ್ಥಳೀಯ ಮಟ್ಟದಲ್ಲಿ ಅನೇಕ ಪುರಸ್ಕಾರಗಳು ಇವರನ್ನು ಹುಡುಕಿ ಬಂದಿವೆ. 

     ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣೆಗಾಗಿ ಭಾನುವಾರ ದೇಶದ 202 ಮಂದಿ ಸ್ವಾತಂತ್ರ್ಯ ಹೋರಾಟಗಾರರಿಗೆ ನಡೆದ ಅಭಿನಂದನೆಯ ಅಂಗವಾಗಿ ಕ್ಯಾಪ್ಟೆನ್ ಕೆ.ಎಂ.ಕೆ. ನಂಬ್ಯಾರ್ ಅವರಿಗೂ ಸ್ವಂತ ನಿವಾಸದಲ್ಲಿ ಗೌರವಾರ್ಪಣೆ ಸಂದಿದೆ.  

     ಕಾಸರಗೋಡು ನಗರಬಳಿಯ ಕೂಡ್ಲು ಗ್ರಾಮದ ಶ್ರೀ ಅಯ್ಯಪ್ಪನಗರ ಭಜನಾಮಂದಿರ ಬಳಿಯ ನಿವಾಸದಲ್ಲಿ ಅವರೀಗ ಇದ್ದಾರೆ. ತುಂಬು ಸಂಸಾರದೊಂದಿಗೆ ಸಂತಸದ ಬದುಕು ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries