ಕಾಸರಗೋಡು: ಅಧಿಕಾರಿಗಳು ಸೂಚನೆ ನೀಡಿದ ನಂತರವೂ ಕೆಲವು ಮಂದಿ ಕಾಯರ್ಂಗೋಡು ನದಿ ತಟದ ತಮ್ಮ ನಿವಾಸಗಳಲ್ಲೇ ತಂಗುವಿಕೆ ಮುಂದುವರಿಸುತ್ತಿದ್ದಾರೆ. ಇದು ಅಪಾಯಕ್ಕೆ ಕಾರಣವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ನದಿ ಉಕ್ಕಿ ಹರಿಯುತ್ತಿದ್ದು, ತೀವ್ರ ನೆರೆ ಹಾವಳಿ ತಲೆದೋರಿದ್ದರೂ, ಅಧಿಕಾರಿಗಳ ಆದೇಶವನ್ನು ನಿರ್ಲಕ್ಷಿಸುವ ಈ ಜನ ಭಾರೀ ಅಪಾಯಕ್ಕೆ ಕಾರಣರಾಗುವ ಭೀತಿಯಿದೆ. ಅವರು ತಕ್ಷಣ ಅಲ್ಲಿಂದ ತೆರವುಗೊಳ್ಳುವಂತೆ ಅವರು ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ. ರಾತ್ರಿ ವೇಳೆ ಮಳೆ ಇನ್ನಷ್ಟು ಬಿರುಸಾಗುವ ಸಾಧ್ಯತೆಗಳಿವೆ. ಕಾಯರ್ಂಗೋಡು ನದಿ ಉಕ್ಕಿ ಇನ್ನಷ್ಟು ನಾಶ-ನಷ್ಟದ ಭೀತಿಯಿದೆ. ಹೀಗಾಗಿ ಇಲ್ಲಿ ವಸತಿ ಮುಂದುವರಿಸುತ್ತಿರುವ ಮಂದಿ ಕೋವಿಡ್ 19 ಪ್ರತಿರೋಧ ಸಂಹಿತೆಗಳನ್ನು ಪಾಲಿಸಿ, ತಕ್ಷಣ ತೆರವುಗೊಳ್ಳುವಂತೆ ಆದೇಶ ನೀಡಲಾಗಿದೆ ಎಂದವರು ನುಡಿದರು.
ಆಸಕ್ತರು ಅಗತ್ಯವಿದ್ದಲ್ಲಿ ಸುರಕ್ಷಿತ ತಾಣಗಳಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿ ಈ ಸಂದರ್ಭದಲ್ಲಿ ವಸತಿ ಹೂಡಬಹುದು. ಇಲ್ಲವಾದಲ್ಲಿ ಅಧಿಕಾರಿಗಳು ಈಗಾಗಲೇ ಸಿದ್ಧಪಡಿಸಿರುವ ಅಭಯಾರ್ಥಿಗಳ ಶಿಬಿರಕ್ಕೆ ಸ್ಥಳಾಂತರಗೊಳ್ಳಬಹುದು ಎಂದವರು ನುಡಿದರು.
ನೀಲೇಶ್ವರ ನಗರಸಭೆ ವ್ಯಾಪ್ತಿಯ ನೀಲೇಶ್ವರ ಗ್ರಾಮದ ಚೆಮ್ಮಾಕ್ಕರ, ಮುಂಡೇಮ್ಮಾಡ್, ಕೋಯೋಂಗರ, ಉಚ್ಚೂಳಿ ಕುದಿರ್, ಆನಚ್ಚಲ್, ಓರ್ಚ, ಕಡಿಂಞï ಮೂಲ, ಪುರತ್ತೇಕೈಪಡಿಂuಟಿಜeಜಿiಟಿeಜಟ್ಟಂ ಕೊಳುವನ್(ನಾಗಚ್ಚೇರಿ ಪ್ರದೇಶ), ತುರ್ತಿ ಗ್ರಾಮದ ಅಚ್ಚಾಂತುರ್ತಿ, ಕುಟ್ಟಿವಯಲ್, ಮಯ್ಯಿಚ್ಚ, ಕ್ಲಾಯಿಕ್ಕೋಡು ಗ್ರಾಮದ ಕ್ಲಾಯಿಕಕ್ಕೋಡು, ವೆಳ್ಳಾಡ್, ಕಯ್ಯೂರು-ಚೀಮೇನಿ ಗ್ರಾಮಪಂಚಾಯತ್ ನ ಕೂಕಾಡ್, ಪೆÇೀದಾವೂರ್, ಚೆರಿಯಕ್ಕರ, ಕಯ್ಯೂರು, ಮಯ್ಯಿಲ್, ಚೀಮೇನಿ ಗ್ರಾಮದ ಮಂದಚ್ಚಂವಯಲ್, ಪೆರಿಯಾರ್ ಪ್ರದೇಶಗಳ ನದಿತಟದಲ್ಲಿರುವ ಮಂದಿ ಕಂದಾಯ ಅಧಿಕಾರಿಗಳ ಆದೇಶ ಪಾಲಿಸಿ ಅಲ್ಲಿಂದ ತಕ್ಷಣ ಸ್ಥಳಾಂತರಗೊಳ್ಳುವಂತೆ ಜಿಲ್ಲಾಧಿಕಾರಿ ವಿನಂತಿಸಿದರು.