ತಿರುವನಂತಪುರ: ಕೋವಿಡ್ ಮಾನದಂಡಗಳನ್ನು ಅನುಸರಿಸಿ ಓಣಂ ಹಬ್ಬಾಚರಣೆಯ ಸುಲಲಿತತೆಯ ದೃಷ್ಟಿಯಿಂದ ಅಂತರ್ ರಾಜ್ಯ ಸೇವೆಗಳನ್ನು ಪ್ರಾರಂಭಿಸಲು ಕೇರಳ ಸಾರಿಗೆ ವಿಭಾಗ ಕೆ.ಎಸ್.ಆರ್.ಟಿ.ಸಿ. ನಿರ್ಧರಿಸಿದ್ದು ಆಗಸ್ಟ್ 25 ರಿಂದ ಸೆಪ್ಟೆಂಬರ್ 6 ರವರೆಗೆ ಈ ಸೇವೆಯನ್ನು ಕರ್ನಾಟಕಕ್ಕೆ ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಹೇಳಿದ್ದಾರೆ. ಶೇ 10 ರಷ್ಟು ಹೆಚ್ಚುವರಿ ದರದಲ್ಲಿ ಟಿಕೆಟ್‍ಗಳನ್ನು ನೀಡಲಾಗುವುದು ಎಂದು ಸಚಿವರು ಫೇಸ್ ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ.
ಶನಿವಾರದಿಂದಲೇ ಕೆ.ಎಸ್.ಆರ್.ಟಿ.ಸಿಯ ಆನ್‍ಲೈನ್ ಕಾಯ್ದಿರಿಸುವ ವೆಬ್‍ಸೈಟ್ ಮೂಲಕ ಟಿಕೆಟ್ ಲಭ್ಯತೆ ಆರಂಭಗೊಂಡಿದೆ. ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ವಿಧಿಸಿರುವ ಕೋವಿಡ್ ನಿಬಂಧನೆಗಳ ಅನುಸಾರ ಈ ಸೇವೆಯನ್ನು ನಡೆಸಲಾಗುವುದು. ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ವಿಜಿಲೆನ್ಸ್ ಪೆÇೀರ್ಟಲ್‍ನಲ್ಲಿ ನೋಂದಾಯಿಸಲು ಮತ್ತು ಅವರ ಟ್ರಾವೆಲ್ ಪಾಸ್ ಅನ್ನು ಪ್ರಸ್ತುತಪಡಿಸಲು ಅವಕಾಶವಿರುತ್ತದೆ.
ಪ್ರಯಾಣದ ದಿನದಂದು ಅಗತ್ಯವಿರುವ ಸಂಖ್ಯೆಯ ಪ್ರಯಾಣಿಕರಿಲ್ಲದೆ ಯಾವುದೇ ಸೇವೆಯನ್ನು ರದ್ದುಗೊಳಿಸಿದಲ್ಲಿ, ಸಂಪೂರ್ಣ ಮೊತ್ತವನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗುವುದು ಎಂದೂ ಸಚಿವರು ಹೇಳಿರುವರು. ಪ್ರಯಾಣದ ದಿನ ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ವಿಧಿಸಿರುವ ನಿಬರ್ಂಧಗಳನ್ನು ಪ್ರಯಾಣಿಕರು ಪಾಲಿಸಬೇಕಾಗುತ್ತದೆ. ಪ್ರಯಾಣದ ಉದ್ದಕ್ಕೂ ಪ್ರಯಾಣಿಕರು ಮಾಸ್ಕ್ ಧರಿಸಬೇಕು ಮತ್ತು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ತಮ್ಮ ಮೊಬೈಲ್ ಫೆÇೀನ್‍ಗಳಲ್ಲಿ ಹೆಲ್ತ್ ಸೆಟ್ ಅಪ್ ಅಳವಡಿಸಬೇಕು ಎಂದು ಸಚಿವರು ಹೇಳಿದರು. ಯಾವುದೇ ಸಂದರ್ಭದಲ್ಲೂ ಸರ್ಕಾರವು ಪ್ರಯಾಣ ಪರವಾನಗಿಯನ್ನು ನಿರಾಕರಿಸಿದರೂ, ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ.
ಬೆಂಗಳೂರಿಗೆ ತೆರಳಲು ಸೇವೆಗಳು:
15:00 ತಿರುವನಂತಪುರಂ - ಬೆಂಗಳೂರು (ಕೋಝಿಕ್ಕೋಡ್)
17:30 ಕೊಟ್ಟಾಯಂ - ಬೆಂಗಳೂರು (ಪಾಲಕ್ಕಾಡ್ - ಸೇಲಂ)
17:31 ಪತ್ತನಂತಿಟ್ಟು - ಬೆಂಗಳೂರು (ಪಾಲಕ್ಕಾಡ್ - ಸೇಲಂ)
16:45 ಎರ್ನಾಕುಲಂ - ಬೆಂಗಳೂರು (ಕುಟ್ಟ)
20:00 ತ್ರಿಶೂರ್ - ಬೆಂಗಳೂರು (ಪಾಲಕ್ಕಾಡ್ - ಸೇಲಂ)
21:00 ಪಾಲಕ್ಕಾಡ್ - ಬೆಂಗಳೂರು (ಸೇಲಂ)
07:35 ಕಣ್ಣೂರು - ಬೆಂಗಳೂರು (ವಿರಾಜ್‍ಪೇಟೆ)
08:00 ಕೋಝಿಕ್ಕೋಡ್ - ಬೆಂಗಳೂರು (ಸುಲ್ತಾನ್ ಬತ್ತೇರಿ)
20:30 ಕಾಸರಗೋಡು - ಬೆಂಗಳೂರು (ಸುಳ್ಯ-ಮಡಿಕೇರಿ- ಮೈಸೂರು)
ಬೆಂಗಳೂರಿನಿಂದ ಸೇವೆಗಳು:
15:30 ತಿರುವನಂತಪುರಂ (ಕೋಝಿಕ್ಕೋಡ್)
15:45 ಕೊಟ್ಟಾಯಂ (ಸೇಲಂ - ಪಾಲಕ್ಕಾಡ್)
19:32 ಪಥನಮತ್ತಟ್ಟ (ಸೇಲಂ - ಪಾಲಕ್ಕಾಡ್)
19:00 ಎರ್ನಾಕುಲಂ (ಕುಟ್ಟ)
20:00 ತ್ರಿಶೂರ್ (ಸೇಲಂ - ಪಾಲಕ್ಕಾಡ್)
21:00 ಪಾಲಕ್ಕಾಡ್ (ಸೇಲಂ)
09:05 ಕಣ್ಣೂರು (ವಿರಾಜ್‍ಪೇಟೆ)
23:45 ಕೋಝಿಕ್ಕೋಡ್)(ಸುಲ್ತಾನ್ ಬತ್ತೇರಿ)
20:30 ಕಾಸರಗೋಡು (ಮೈಸೂರು, ಮಡಿಕೇರಿ, ಸುಳ್ಯ)