ಮಡಿಕೇರಿ/ಕಾಸರಗೋಡು: ಕೊಡಗಿನಾದ್ಯಂತ ಕುಂಭದ್ರೋಣ ಮಳೆಯ ಪರಿಣಾಮ ಕಾವೇರಿಯ ಮೂಲಸ್ಥಾನ ತಲಕಾವೇರಿಯಲ್ಲಿರುವ ಬ್ರಹ್ಮಗಿರಿಬೆಟ್ಟ ಕುಸಿದಿದ್ದು, ಪರಿಣಾಮ ಎರಡು ಮನೆಗಳು ಮಣ್ಣಿನಡಿ ಸಿಲುಕಿ, ತಲಕಾವೇರಿಯ ಅರ್ಚಕರು ಸೇರಿದಂತೆ ಮನೆಯಲ್ಲಿದ್ದ ಐವರು ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ. ಸ್ಥಳಕ್ಕೆ ತೆರಳಿರುವ ಎನ್.ಡಿ.ಆರ್.ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಘಟನೆಯಲ್ಲಿ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ ಹಾಗೂ ಜೊತೆಗಿದ್ದ ಸಹಾಯಕ ಅರ್ಚಕರಾದ ಮೂವರು ನಾಪತ್ತೆಯಾಗಿರುವುದಾಗಿ ಶಂಕಿಸಲಾಗಿದೆ.
ನಾಪತ್ತೆಯಾದ ಸಹಾಯಕ ಅರ್ಚಕರಲ್ಲಿ ಅಡೂರು ಕಾಯರ್ತಿಮೂಲೆ ನಿವಾಸಿ ದಿ. ಲಕ್ಷ್ಮೀನಾರಾಯಣ ಪಡ್ಡಿಲ್ಲಾಯ- ಸತ್ಯಭಾಮಾ ದಂಪತಿಗಳ ಪುತ್ರ ಶ್ರೀನಿವಾಸ ಪಡ್ಡಿಲ್ಲಾಯ(33) ನಾಪತ್ತೆಯಾಗಿರುವುದಾಗಿ ತಿಳಿಯಲಾಗಿದೆ.
ಶ್ರೀನಿವಾಸ ಪಡ್ಡಿಲ್ಲಾಯ ಅಡೂರು ನಿವಾಸಿಯಾಗಿದ್ದು ಸಹಾಯಕ ಅರ್ಚಕರಾಗಿ(ಕೀಳ್ ಶಾಂತಿ) ತಲಕಾವೇರಿಯಲ್ಲಿ ಉಳಕೊಂಡಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಊರಿನಲ್ಲಿದ್ದ ಅವರು ಎರಡು ವಾರಗಳ ಹಿಂದೆ ಲಾಕ್ ಡೌನ್ ಸಡಿಲಿಕೆಯ ಸಂದರ್ಭ ಮರಳಿ ತಲಕಾವೇರಿಗೆ ತೆರಳಿದ್ದರು.
ಬೇಕಿದ್ದರೆ(ತಾಯಿ, ಇಬ್ಬರು ಸಹೋದರಿಯರಿದ್ದಾರೆ)
ಭಾರೀ ಮಳೆಯಿಂದ ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಹಾಗೂ ತೊರೆಗಳು ತುಂಬಿ ಹರಿಯುತ್ತಿದೆ. ಕೆಲವೆಡೆ ಬರೆ ಕುಸಿತಗೊಂಡಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ಮಡಿಕೇರಿ ವ್ಯಾಪ್ತಿಯ ಕೆಲವೆಡೆ ಭೂಕುಸಿತ ಸಂಭವಿಸಿದೆ.
ಏನು ಸಂಭವಿಸಿತು....ವಿಶದ ವಿವರ:
ತಲಕಾವೇರಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದು ತಲಕಾವೇರಿಯ ದೇವಸ್ಥಾನದ ಅರ್ಚಕರ ಎರಡು ಮನೆಗಳ ಮೇಲೆ ಬಿದ್ದಿತ್ತು. ಈ ಅವಘಡದಲ್ಲಿ ಪ್ರಧಾನ ಅಚ9ಕ ನಾರಾಯಾಣಾಚಾರ್ ಕುಟುಂಬ ಭೂ ಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಧಾನ ಅರ್ಚಕ ನಾರಾಯಾಣಾಚಾರ್, ಪತ್ನಿ ಶಾಂತ, ಸಹೋದರ ಆನಂದತೀರ್ಥ, ಸಹಾಯಕ ಅಚ9ಕರಾದ ಶ್ರೀನಿವಾಸ ಪಡ್ಡಿಲ್ಲಾಯ, ಪವನ್ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಚ9ಕರು ಭೂಸಮಾಧಿಯಾಗಿರುವ ಕುರಿತು ಶಾಸಕ ಕೆ.ಜಿ.ಬೋಪಯ್ಯ ಶಂಕೆ ವ್ಯಕ್ತಪಡಿಸಿದ್ದಾರೆ.
ಭಾರೀ ಮಳೆ, ಮಂಜಿನ ಕಾರಣ ರಕ್ಷಣಾ ಕಾಯಾ9ಚರಣೆಯೂ ಸ್ಥಗಿತವಾಗಿದೆ. ಭಾಗಮಂಡಲದಲ್ಲಿ ಕಾವೇರಿ ಪ್ರವಾಹದಿಂದಾಗಿ ಜೆಸಿಬಿ ಸೇರಿದಂತೆ ವಾಹನಗಳೇ ಅತ್ತ ಕಡೆ ಸಾಗಲಾಗದೇ ರಕ್ಷಣಾ ಕಾಯಾ9ಚರಣೆ ನಡೆಸಲಾಗದ ಸ್ಥಿತಿ ಎದುರಾಗಿದೆ.
ತಲಕಾವೇರಿಯಲ್ಲಿ ಗುಡ್ಡ ಕುಸಿತ: ಪ್ರಧಾನ ಅರ್ಚಕರ ಮನೆ ಜಖಂ, ಕುಂಟುಂಬ ಸದಸ್ಯರು ಕಣ್ಮರೆ
ನಿನ್ನೆ ಸಂಜೆಜೇ ನಾರಾಯಣಾಚಾರ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಬನ್ನಿ ಸ್ವಾಮಿ ಎಂದು ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಆದರೆ, ನಾರಾಯಣಾಚಾರ್ ಅವರು ಕಾವೇರಿ ಸನ್ನಿಧಿಯಲ್ಲಿಯೇ ಇರುವುದಾಗಿ ಹಠ ಹಿಡಿದು ಅಲ್ಲಿಯೇ ಉಳಕೊಂಡರು.
ಭೂಕುಸಿತ 6-7 ಕಿ.ಮೀ. ದೂರಕ್ಕೂ ವ್ಯಾಪಿಸಿರುವುದರಿಂದಾಗಿ ಹುಡುಕಾಟಕ್ಕೂ ಅಡ್ಡಿಯಾಗಿದೆ. ಕೇವಲ 1 ತಿಂಗಳ ಹಿಂದಷ್ಟೇ ಇಬ್ಬರು ಯುವ ಅಚ9ಕರು ನಾರಾಯಣಾಚಾರ್ ಸಹಾಯಕರಾಗಿ ಕಾಯ9ನಿವ9ಹಿಸಲು ದಕ್ಷಿಣ ಕನ್ನಡದಿಂದ ಬಂದಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್, ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಭೇಟಿ ನೀಡಿ ಪರಿಶೀಲಿಸಿದರು.